• A
  • A
  • A
ಬೆಡ್​ ರೂಮ್​ಗೆ ಕರೆಯೋ ಮಾವ, ಧನದಾಹಿ ಗಂಡ... ಪೊಲೀಸ್​ ಠಾಣೆ ಮೆಟ್ಟಿಲೇರಿದ ಮಹಿಳೆ

ಬೆಂಗಳೂರು: ಮದುವೆಯಾದ ಏಳು ತಿಂಗಳಿಗೇ ಮಹಿಳೆಯೊಬ್ಬರು ಗಂಡ ಮತ್ತು ಮಾವನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ನಗರದಲ್ಲಿ ನಡೆದಿದೆ.


ತನ್ನ ಮಾವ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಸೊಸೆ ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಸ್ಲೀಮಾ (ಹೆಸರು ಬದಲಾಯಿಸಲಾಗಿದೆ) ಎಂಬ ಮಹಿಳೆ ತನ್ನ ಮಾವ ಅಬ್ದುಲ್ ರೆಹಮಾನ್ ಇಲಿಯಾಸ್ ಮತ್ತು ಗಂಡ ಅಬ್ದುಲ್ ಹದಿ ವಿರುದ್ಧ ದೂರು ನೀಡಿದ್ದಾರೆ.
ತನ್ನ ಮಾವ ಅಬ್ದುಲ್ ರೆಹಮಾನ್ ಇಲಿಯಾಸ್ ಲೈಂಗಿಕ ಕಿರುಕುಳ ನಡೆಸಿದ್ದಾನೆ ಎಂದು ತಸ್ಲೀಮಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಬ್ದುಲ್ ರೆಹಮಾನ್ ಇಲಿಯಾಸ್ ನನ್ನನ್ನು ರೂಮಿಗೆ ಕರೆದೊಯ್ದು ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ಅಷ್ಟೇ ಅಲ್ಲದೇ ಬಟ್ಟೆ ಬಿಚ್ಚಿಸಿ ನಿನ್ನ ಫಸ್ಟ್ ನೈಟ್ ಎಕ್ಸ್​ಪಿರಿಯನ್ಸ್ ಹೇಳು ಎಂದು ವಿಕೃತ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.



ಕಳೆದ ವರ್ಷ ಡಿಸೆಂಬರ್ 28 ರಂದು ಅಬ್ದುಲ್ ಹದಿ ಎಂಬುವನ ಜೊತೆ ಮದುವೆಯಾಗಿತ್ತು. ಎರಡು ಲಕ್ಷ ವರದಕ್ಷಿಣೆ ಮತ್ತು ಆಭರಣಗಳೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ವೇಳೆ ಪದವಿ ಪಡೆದು ಒಳ್ಳೆ ಕೆಲಸದಲ್ಲಿದ್ದಾನೆಂದು ಅಬ್ದುಲ್ ಹದಿ ಮನೆಯವರು ಹೇಳಿದ್ದರು. ಆದರೆ ಅಸಲಿಗೆ ಅನಕ್ಷರಸ್ಥನಾಗಿರುವ ಅಬ್ದುಲ್ ಹದಿ ನಕಲಿ ಪದವಿ ಸರ್ಟಿಫಿಕೇಟ್ ಮಾಡಿಸಿಕೊಂಡಿದ್ದ ಎಂದು ತಸ್ಲೀಮಾಗೆ ಮದುವೆಯಾದ ನಂತರ ಗೊತ್ತಾಗಿದೆ.

ಒಂದು ಕಡೆ ಮಾವ ಲೈಂಗಿಕ ಕಿರುಕುಳ ನೀಡುತ್ತಿದ್ದರೆ ಮತ್ತೊಂದೆಡೆ ಗಂಡ ಅಬ್ದುಲ್ ಹದಿ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದಾನೆ ಎಂದು ತಸ್ಲೀಮಾ ದೂರಿದ್ದಾರೆ. ಎರಡು ತಿಂಗಳ ಹಿಂದೆ ತಸ್ಲೀಮಾಳನ್ನು ಗಂಡ ಮತ್ತು ಮಾವ ಇಬ್ಬರೂ ಹೊಡೆದು ಮನೆಯಿಂದ ಹೊರ ಹಾಕಿದ್ದು, ನೊಂದ ಮಹಿಳೆ ಜೂನ್ 23 ರಂದು ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಈ ಸಂಬಂಧ ಜೆಸಿ ನಗರ ಪೊಲೀಸರು ಮಹಿಳೆ ಮಾವ ಅಬ್ದುಲ್ ರೆಹಮಾನ್ ಇಲಿಯಾಸ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹಾಗೂ ಗಂಡ ಅಬ್ದುಲ್ ಹದಿ ವಿರುದ್ಧ ವರದಕ್ಷಿಣೆ ಕಿರುಕುಳದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು