• A
  • A
  • A
ಗೌರಿ ಹತ್ಯೆ ಕೇಸ್‌ನಲ್ಲಿ ಬಂಧಿತನಾಗಿರುವ ಪರಶುರಾಮ್ ಯಾರು..?

ಬೆಂಗಳೂರು: ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಪರಶುರಾಮ್ ವಾಗ್ಮೋರೆ ಹಿನ್ನಲೆ ನೋಡಿದಾಗ ಈತನ ವಿರುದ್ಧ ಈ ಮೊದಲೇ ಕೆಲ ಪ್ರಕರಣಗಳಿರುವುದು ಎಸ್‌ಐಟಿ ತಂಡಕ್ಕೆ ತಿಳಿದುಬಂದಿದೆ. ಅಷ್ಟಕ್ಕೂ ಈತನ ಹಿನ್ನಲೆ ಏನು ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ...


ಹೌದು.., ಪರಶುರಾಮ್ ವಾಗ್ಮೋರೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಬಸವನಗರದಲ್ಲಿ ತಾಯಿಯೊಂದಿಗೆ ವಾಸವಾಗಿದ್ದ. ತಾಯಿಯ ಜತೆ ವಾಸವಿದ್ದ ಪರಶುರಾಮ್ ಮದುವೆಯಾಗಿರದೆ ಹಿಂದೂ ಪರ ಹೋರಾಟಗಳಲ್ಲಿ ಭಾಗಿಯಾಗಿದ್ದ ಎನ್ನಲಾಗ್ತಿದೆ.

ಪರಶುರಾಮ್ ಶಾರ್ಪ್ ಶೂಟರ್..!

ಗೌರಿ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಎಸ್‌ಐಟಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಮನೋಹರ್ ಬಾಯ್ಬಿಟ್ಟ ಮಾಹಿತಿ ಮೇರೆಗೆ ಎಸ್ಐಟಿ ಅಧಿಕಾರಿಗಳು ಪರಶುರಾಮ್‌ನನ್ನು ಬಂಧಿಸಿದ್ದಾರೆ. ಪರಶುರಾಮ್ ಶಾರ್ಪ್ ಶೂಟರ್ ಆಗಿದ್ದು, ಶೂಟಿಂಗ್ ವಿದ್ಯೆಯಲ್ಲಿ ನೈಪುಣ್ಯತೆ ಹೊಂದಿದ್ದ ಎನ್ನಲಾಗಿದೆ. ಈಗಾಗಲೇ ಬಂಧನಕ್ಕೊಳಗಾಗಿರುವ ಅಮೋಲ್ ಕಾಳೆ ಮತ್ತು ಮನೋಹರ್ ದುಂಡಪ್ಪ ಯಡವೆ ಇಬ್ಬರಿಗೂ ಈತ ಶೂಟಿಂಗ್ ತರಬೇತಿ ನೀಡಿದ್ದ ಎಂಬ ಮಾಹಿತಿಯ ಮೇಲೆ ಪರಶುರಾಮ್ ವಾಗ್ಮೋರೆಯನ್ನು ಬಂಧಿಸಲಾಗಿದೆ.

ಪಾಕ್ ಧ್ವಜ ಹಾರಿಸಿದ್ದ ಕುಖ್ಯಾತಿ..!

ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಪರಶುರಾಮ್ ಪಾಕಿಸ್ತಾನದ ಧ್ವಜ ಹಾರಿಸಿದ ಕುಖ್ಯಾತಿ ಗಳಿಸಿದ್ದ. 2012 ಜನವರಿ 1 ರ ರಾತ್ರಿ ಸಿಂದಗಿ ತಹಶಿಲ್ದಾರ್ ಕಚೇರಿ ಬಳಿ ಪಾಕಿಸ್ತಾನ ಧ್ವಜ ಹಾರಿಸಿದ್ದ ಆರೋಪ ಈತನ ಮೇಲಿದೆ.

ಈ ಕೇಸ್‌ನಲ್ಲಿ ಪರಶುರಾಮ್ ಸೇರಿ 6 ಆರೋಪಿಗಳನ್ನು ಸಿಂದಗಿ ಪೊಲೀಸರು ಬಂಧಿಸಿದ್ದರು. ಶ್ರೀರಾಮ ಸೇನೆಯೊಂದಿಗೆ ಗುರುತಿಸಿಕೊಂಡಿದ್ದ ಪರಶುರಾಮ್ ಹಿಂದೂ ಹೋರಾಟಗಾರ, ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ಗೆ ಆತ್ಮೀಯನಾಗಿದ್ದ. ಕೋಮು ಸೌಹಾರ್ದ ಹಾಳುಗೆಡವುವ ಉದ್ದೇಶದಿಂದ ಪಾಕಿಸ್ತಾನದ ಧ್ವಜ ಹಾರಿಸಲಾಗಿತ್ತು ಅನ್ನೋದು ಪೊಲೀಸರ ತನಿಖೆಯಲ್ಲಿ ಸ್ಪಷ್ಟವಾಗಿತ್ತು. ಸಿಂದಗಿಯಲ್ಲಿ ಕಂಪ್ಯೂಟರ್ ಅಂಗಡಿ ಮತ್ತು ಪಾತ್ರೆ ಅಂಗಡಿಯನ್ನು ನಡೆಸುತ್ತಿದ್ದ ಪರಶುರಾಮ್ ಹಿಂದೂಪರ ಹೋರಾಟಗಳಲ್ಲಿ ಭಾಗಿಯಾಗಿದ್ದ ಎನ್ನಲಾಗ್ತಿದೆ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು