• A
  • A
  • A
ಜಿಂಕೆ ಹಾವಳಿ ತಪ್ಪಿಸಲು ಜೆಡಿಎಸ್‌ ಬ್ಯಾನರ್‌ ಬಳಕೆ... ಈ ಪಕ್ಷದ್ದೇ ಯಾಕೆ ಅಂತಾ ಕಾರಣ ಕೊಟ್ಟ ರೈತ!

ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಜಿಂಕೆಯ ಉಪಟಳ ಹೆಚ್ಚಾಗಿದೆ. ಈಗ ಬಿತ್ತನೆ ಮಾಡಲಾಗಿರುವ ಬೆಳೆಯ ಸಣ್ಣ ಪೈರನ್ನು ಸಹ ಜಿಂಕೆಗಳು ತಿಂದು ಹೋಗುತ್ತಿವೆ. ಜಿಂಕೆಗಳ ಹಾವಳಿಯನ್ನು ತಪ್ಪಿಸಲು ರೈತರು ಒಂದು ಪ್ಲಾನ್‌ ಮಾಡಿದ್ದಾರೆ.


ಜಿಲ್ಲೆಯ ಕೊಪ್ಪಳ ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಜಿಂಕೆಗಳ ಹಾವಳಿ ವಿಪರೀತವಾಗಿದೆ. ಕಳೆದ ವರ್ಷ ಬರಗಾಲದಿಂದ ರೈತ ತೀವ್ರ ಸಂಕಷ್ಟದ ದಿನಗಳನ್ನು ಅನುಭವಿಸಿದ್ದ. ಈ ವರ್ಷ ಉತ್ತಮ ಫಸಲಿನ ನಿರೀಕ್ಷೆಯಲ್ಲಿರುವ ರೈತರಿಗೆ ಮುಂಗಾರು ಮಳೆ ಉತ್ತಮವಾಗಿ ಬೀಳುತ್ತಿದ್ದು, ಹಲವಾರು ತಾಪತ್ರಯಗಳ ನಡುವೆ ರೈತರು ಬಿತ್ತನೆ ಕಾರ್ಯ ಕೈಗೊಂಡಿದ್ದಾರೆ. ಆದರೆ, ಬಿತ್ತಿದ ಬೀಜ ಮೊಳಕೆಯಾಗಿ ಎಲೆ ಬಿಡುತ್ತಿದ್ದಂತೆ ಜಮೀನುಗಳಿಗೆ ಜಿಂಕೆಗಳು ಹಿಂಡು ಹಿಂಡಾಗಿ ಲಗ್ಗೆ ಇಟ್ಟು ಬೆಳೆದ ಬೆಳೆಯನ್ನೆಲ್ಲ ತಿಂದು ಹಾಕುತ್ತಿವೆ. ರೈತರು ಸಾಲ ಮಾಡಿ ಗೊಬ್ಬರ, ಬೀಜ ತಂದು ಬಿತ್ತನೆ ಮಾಡಿದ್ದಾರೆ. ಬಿತ್ತಿದ ಬೆಳೆಯು ಜಿಂಕೆ ದಾಳಿಯಿಂದ ಪ್ರಾರಂಭದಲ್ಲೇ ನಾಶವಾಗುತ್ತಿವೆ.


ಜಿಂಕೆಗಳ ಹಾವಳಿಯಿಂದಾಗಿ ಕೆಲ ರೈತರು ತಮ್ಮ ಹೊಲಗಳನ್ನು ಬಿತ್ತದೆ ಹಾಗೆಯೇ ಬಿಡುತ್ತಾರೆ. ಇನ್ನು ಕೆಲವರು ಬಿತ್ತನೆ ಮಾಡುತ್ತಾರೆ. ಹೀಗೆ ಬಿತ್ತನೆ ಮಾಡಿರುವ ಜಮೀನಿನಲ್ಲಿನ ಬೆಳೆಗಳನ್ನು ಹಿಂಡು ಹಿಂಡು ಜಿಂಕೆಗಳು ಬಂದು ಬೆಳೆಯನ್ನು ತಿಂದು ಹೋಗುತ್ತಿವೆ. ಈ ಜಿಂಕೆ ಹಾವಳಿಯನ್ನು ತಪ್ಪಿಸಲು ರೈತರು ವಿವಿಧ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ.

ಮಾಸ್ಟರ್‌ ಪ್ಲಾನ್‌


ಜಿಂಕೆಗಳು ಜಮೀನಿಗೆ ನುಗ್ಗದಂತೆ ಜಮೀನಿನ ಸುತ್ತಲೂ ಶಬ್ಧ ಮಾಡುವಂತಹ ಪ್ಲಾಸ್ಟಿಕ್ ಹಾಳೆಗಳನ್ನು ಕಟ್ಟುತ್ತಿದ್ದಾರೆ. ಗಾಳಿಗೆ ಈ ಪ್ಲಾಸ್ಟಿಕ್ ಹಾಳೆಗಳು ಒಂದು ರೀತಿಯಲ್ಲಿ ಶಬ್ಧ ಮಾಡುವುದರಿಂದ ಈ ಶಬ್ಧಗಳಿಗೆ ಅಂಜಿ ಜಿಂಕೆಗಳು ಬರುವುದಿಲ್ಲ.

ಇತ್ತೀಚಿಗೆ ನಡೆದ ಚುನಾವಣೆಯ ಸಂದರ್ಭದಲ್ಲಿ ಬಳಕೆಯಾಗಿರುವ ಪಕ್ಷಗಳ ಧ್ವಜಗಳನ್ನು ಹೊಲದಲ್ಲಿ ಕಟ್ಟುವ ಮೂಲಕ ರೈತರು ಜಿಂಕೆಯ ಹಾವಳಿಯನ್ನು ತಡೆಗಟ್ಟಲು ಪ್ರಯತ್ನಿಸುತ್ತಿದ್ದಾರೆ. ರೈತರು ತಮ್ಮ ಹೊಲಗಳಲ್ಲಿ ದೇವೇಗೌಡರ ಭಾವಚಿತ್ರವಿರುವ ಹಾಗೂ ಜೆಡಿಎಸ್ ಪಕ್ಷದ ಚಿನ್ಹೆಯ ಧ್ವಜಗಳನ್ನು ಜಮೀನಿನ ಅಲ್ಲಲ್ಲಿ ನೆಟ್ಟಿದ್ದಾರೆ. ಈ ಮೂಲಕ ರೈತರು ದೇವೇಗೌಡರನ್ನು ಹಾಗೂ ಜೆಡಿಎಸ್ ಪಕ್ಷದ ಚಿನ್ಹೆಯಾದ ಭತ್ತದ ಹೊರೆ ಹೊತ್ತ ಮಹಿಳೆಯನ್ನು ಜಿಂಕೆ ಹಾವಳಿಯನ್ನು ತಡೆಗಟ್ಟಲು ಹಚ್ಚಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಮೇಲೆ ನಮಗೆ ಅಪಾರ ಅಭಿಮಾನವಿದೆ. ಅದಕ್ಕಾಗಿ ರೈತ ಪರವಾದ ಚಿಂತನೆ ಮತ್ತು ರೈತ ಮಹಿಳೆಯ ಚಿಹ್ನೆ ಹೊಂದಿರುವ ಬ್ಯಾನರಗಳನ್ನೇ ನಮ್ಮ ಹೊಲದಲ್ಲಿ ನೆಟ್ಟಿದ್ದೇವೆ ಎನ್ನುತ್ತಾರೆ ಬಿನ್ನಾಳ ಗ್ರಾಮದ ರೈತ ವಿರುಪಾಕ್ಷ ಕರೆಣ್ಣವರ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು