• A
  • A
  • A
ವಿದ್ಯುತ್ ತಂತಿ ತಗುಲಿ ತಂದೆ-ಮಗ ಸಾವು: ಜಮೀನಿನ ಮಾಲೀಕ ಮಾಡಿದ್ದೇನು ಗೊತ್ತಾ?!

ಮೈಸೂರು: ಜಮೀನಿಗೆ ಅಳವಡಿಸಿದ್ದ ಅಕ್ರಮ ವಿದ್ಯುತ್ ತಂತಿ ತಗುಲಿ ತಂದೆ-ಮಗ ಬಲಿಯಾಗಿರುವುದನ್ನು ಕಂಡು ಜಮೀನಿನ ಮಾಲೀಕ ಮಾಡಿದ್ದ ನಾಟಕಕ್ಕೆ ಪೊಲೀಸರು ಖೆಡ್ಡಾ ತೋಡಿ ಬಂಧಿಸಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ತುಂಬಸೋಗೆಯಲ್ಲಿ ನಡೆದಿದೆ.


ತಾಲೂಕಿನ ಆನಗಟ್ಟಿ ಹಾಡಿಯ ಪ್ರವೀಣ ಮತ್ತು ಮಾದಯ್ಯ ಕರೆಂಟ್ ಶಾಕ್‌ನಿಂದ ಮೃತಪಟ್ಟ ತಂದೆ ಮಗ. ಮರಿಗೌಡ ಎನ್ನುವರು ತನ್ನ ಜಮೀನಿನ ಬೆಳೆಯ ರಕ್ಷಣೆಗಾಗಿ ಜಮೀನಿಗೆ ಅಕ್ರಮವಾಗಿ ಹರಿಸಿದ್ದ ವಿದ್ಯುತ್ ಸ್ಪರ್ಶ‌ಕ್ಕೆ ಪ್ರವೀಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಪ್ರವೀಣ ಚೀರಾಡುತ್ತಿದ್ದ ಸದ್ದು ಆಲಿಸಿದ ತಂದೆ ಮಾದಯ್ಯ ಕೂಡ ಮಗನ ರಕ್ಷಣೆಗೆ ಮುಂದಾದಾಗ ಆತನೂ ಕೂಡ ವಿದ್ಯುತ್ ಸ್ಪರ್ಶಕ್ಕೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.


ಜೇನು ಸಂಗ್ರಹಿಸಲೆಂದು ಬಂದಿದ್ದ ಮರಿಯಪ್ಪ ಎಂಬಾತ ಮರಿಗೌಡ ಎಂಬುವರ ಜಮೀನಿನ ಮಾರ್ಗವಾಗಿ ತಮ್ಮ ಸ್ವಗ್ರಾಮಕ್ಕೆ ಹಿಂದಿರುಗುವಾಗ ಇದನ್ನು ನೋಡಿ ಭಯಭೀತನಾಗಿ ವಿದ್ಯುತ್ ಸ್ಪರ್ಶಕ್ಕೆ ಸಿಲುಕಿ ಮೃತಪಟ್ಟಿರುವುದನ್ನು ಮೇಲ್ನೋಟಕ್ಕೆ ಖಚಿತಪಡಿಸಿಕೊಂಡು ಸ್ವಗ್ರಾಮಕ್ಕೆ ಹಿಂದಿರುಗಿ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದಾನೆ.

ಶನಿವಾರ ಗ್ರಾಮದ ಮುಖಂಡರು ಜಮೀನಿನ ಬಳಿ ತೆರಳಿ ಘಟನಾ ಸ್ಥಳ ವೀಕ್ಷಣೆಗೆ ಮುಂದಾದಾಗ ಜಮೀನಿನ ಮಾಲೀಕ ಮರಿಗೌಡ ಹಾಗೂ ಇತರರು ಆದಿವಾಸಿಗರನ್ನು ಜಮೀನಿನ ಒಳಗೆ ಪ್ರವೇಶಿಸಲು ನಿರಾಕರಿಸಿ, ಬಳಿಕ ಮರೀಗೌಡ ಹಾಗೂ ಇತರರು ಸೇರಿಕೊಂಡು ಮೃತದೇಹಗಳನ್ನು ಗೋಣಿ ಚೀಲದಲ್ಲಿ ಕಟ್ಟಿ ರಾತ್ರೋರಾತ್ರಿ ಕಪಿಲಾ ನದಿಗೆ ಎಸೆದಿದ್ದಾರೆ ಎನ್ನಲಾಗ್ತಿದೆ.

ಇಂದು ತುಂಬಸೋಗೆ ಸೇತುವೆ ಬಳಿ ಮೃತದೇಹಗಳು ಬಿದ್ದಿರುವ ದೃಶ್ಯ ಕಂಡ ದಾರಿಹೋಕರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ವಿಚಾರ ಬಹಿರಂಗಗೊಳ್ಳುತ್ತಿದ್ದಂತೆ ಆರೋಪಿ ಮರಿಗೌಡರನ್ನು ವಶಕ್ಕೆ ತೆಗೆದುಕೊಂಡಿರುವ ಹೆಚ್. ಡಿ ಕೋಟೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು