• A
  • A
  • A
ಯುಟ್ಯೂಬ್‌‌ ನೋಡಿ ಫಾರಿನ್‌ ಡ್ರ್ಯಾಗನ್‌ ಫ್ರೂಟ್‌ ಬೆಳೆದ ಬಯಲುಸೀಮೆ ರೈತ!

ಚಿಕ್ಕಬಳ್ಳಾಪುರ: ಬಯಲುಸೀಮೆ ಚಿಕ್ಕಬಳ್ಳಾಪುರದ ರೈತರೊಬ್ಬರು ಅದ್ಭುತ ಸಾಧನೆ ಮಾಡಿದ್ದಾರೆ. ಬರೀ ಯೂಟ್ಯೂಟ್‌ ವಿಡಿಯೋ ನೋಡಿಯೇ ವಿದೇಶಿ ಡ್ರ್ಯಾಗನ್‌‌ ಫ್ರೂಟ್‌ ಬೆಳೆದು ಸೈ ಎನಿಸಿಕೊಂಡಿದ್ದಾರೆ.


ಹೌದು, ಮರಳಕುಂಟೆಯ ನಾರಾಯಣಸ್ವಾಮಿ ಎಂಬುವವರೇ ಇಂತಹ ಅಚ್ಚರಿ ಸಾಧನೆ ಮಾಡಿದ್ದಾರೆ. ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಸೋಲಾರ್‌‌ ರೂಫ್‌ ಟಾಪ್‌ ಯೋಜನೆಯ ಮೂಲಕ ಸೌರ ವಿದ್ಯುತ್‌ ಉತ್ಪಾದನೆ ಮಾಡಿ ನಾರಾಯಣಸ್ವಾಮಿ ಮಾದರಿಯಾಗಿದ್ದರು.ಆದರೆ, ಸರ್ಕಾರವನ್ನು ನಂಬಿ ಸೋಲಾರ್‌ ರೂಫ್‌ ಟಾಫ್ ಯೋಜನೆಗೆ ಕೋಟಿ ಕೋಟಿ ಬಂಡವಾಳ ಹೂಡಿ ಕೈ ಸುಟ್ಟುಕೊಂಡರೂ ಎದೆಗುಂದದ ಸ್ವಾಭಿಮಾನದ ಬದುಕು ನಾರಾಯಣ ಸ್ವಾಮಿಯವರದ್ದು. ಸೋಲಾರ್‌ ಯೋಜನೆ ಲಾಸ್‌ ಆಯ್ತು ಅಂತ ಸುಮ್ಮನೆ ಕೂರದ ರೈತ ನಾರಾಯಣಸ್ವಾಮಿ ಈಗ ಯೂಟ್ಯೂಟ್‌ ನೋಡಿ ಡ್ರ್ಯಾಗನ್‌‌ ಫ್ರೂಟ್‌ ಬೆಳೆದಿದ್ದಾರೆ.

ಅತಿ ಹೆಚ್ಚು ಬೇಡಿಕೆಯ ಡ್ರ್ಯಾಗನ್ ಫ್ರೂಟ್

ಡ್ರ್ಯಾಗನ್‌‌ ಹಣ್ಣಿಗೆ ಜಗತ್ತಿನಲ್ಲಿ ಅತಿ ಹೆಚ್ಚು ಬೇಡಿಕೆ ಇದೆ. ನಾರಾಯಣಸ್ವಾಮಿ ಮೂಲಕ ರಾಜ್ಯದಲ್ಲೇ ಮೊದಲ ಬಾರಿಗೆ ಬಯಲುಸೀಮೆಯಲ್ಲಿ ಫಾರಿನ್‌ ತಳಿಯ ಹಣ್ಣು ಬಿಟ್ಟಿದೆ. ನೀರಿನ ಸೆಲೆಯೇ ಇಲ್ಲದ ಚಿಕ್ಕಬಳ್ಳಾಪುರ ರೈತರು ಈಗಾಗಲೇ ದ್ರಾಕ್ಷಿ, ತರಕಾರಿ, ಹೂಗಳನ್ನು ಬೆಳೆದು ಸೈ ಎನ್ನಿಸಿಕೊಂಡಿದೆ.ಇದೀಗ ಡ್ರ್ಯಾಗನ್‌ ಫ್ರೂಟ್ ರಾಷ್ಟ್ರೀಯ ಮಾರುಕಟ್ಟೆಗೆ ಪೈಪೋಟಿ ನೀಡಲು ಮೈದುಂಬಿ ನಿಂತಿದೆ. ರಾಜ್ಯದಲ್ಲೇ ಮೊದಲ ಪ್ರಯೋಗ ಎನ್ನಲಾಗುತ್ತಿರುವ ಡ್ರ್ಯಾಗನ್‌‌ ಫ್ರೂಟ್ ಬೆಳೆ ಬೆಳೆಯುವಲ್ಲಿ ರೈತ ನಾರಾಯಣಸ್ವಾಮಿ ಯಶಸ್ವಿಯಾಗಿದ್ದಾರೆ. ಅಮೆರಿಕಾ ಮೂಲದ ಈ ಡ್ರ್ಯಾಗನ್‌‌ ಫ್ರೂಟ್ ಸದ್ಯಕ್ಕೆ ರಷ್ಯಾ, ಜಪಾನ್‌‌ನಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಕಿವಿ ಹಣ್ಣಿನ ಮಾದರಿಯಲ್ಲೇ ಬಹುಪಯೋಗಿಯಾಗಿರುವ ಈ ಹಣ್ಣಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭರ್ಜರಿ ಡಿಮ್ಯಾಂಡ್‌‌ ಇದೆ.

ಆನ್‌ ಲೈನ್‌ ಮಾರುಕಟ್ಟೆಗಳಲ್ಲಿ ಒಂದು ಕೆಜಿ ಡ್ರ್ಯಾಗನ್‌‌ ಫ್ರೂಟ್ ಬೆಲೆ ಬರೋಬ್ಬರಿ 100ರಿಂದ 120ರೂ.ಗಳವರೆಗೂ ಮಾರಾಟಗೊಳ್ಳುತ್ತಿದೆ. ಬೆಂಗಳೂರಿನ ಮಾಲ್‌ಗಳಲ್ಲಿ ದೊರೆಯುವ ಈ ಹಣ್ಣುಗಳನ್ನು ವಿದೇಶಗಳಿಂದಲೇ ಆಮದು ಮಾಡಿಕೊಳ್ಳಲಾಗುತ್ತದೆ. ಪಂಜಾಬ್‌, ಮಹಾರಾಷ್ಟ್ರಗಳಲ್ಲಿ ಮಾತ್ರವೇ ಈ ತಳಿಯನ್ನು ಬೆಳೆಯಲಾಗುತ್ತಿದ್ದರೂ, ಬೇಡಿಕೆಗೆ ಅನುಗುಣವಾಗಿ ಪೂರೈಸಲಾಗುತ್ತಿಲ್ಲ. ರಾಜ್ಯದ ಉತ್ತರ ಕರ್ನಾಟಕದ ಸಿರಗುಪ್ಪ ಬಳಿ ರೈತರೊಬ್ಬರು ಅತ್ಯಲ್ಪ ಪ್ರಮಾಣದಲ್ಲಿ ಬೆಳೆದಿದ್ದಾರೆ ಎನ್ನಲಾಗುತ್ತಿದೆ. ಅವರನ್ನು ಹೊರತು ಪಡಿಸಿದರೆ, ದೊಡ್ಡ ಪ್ರಮಾಣದಲ್ಲಿ ಡ್ರ್ಯಾಗನ್‌ ಫ್ರೂಟ್ ಬೆಳೆದ ಕೀರ್ತಿ ಬಯಲು ಸೀಮೆಗೆ ಸೇರಿದೆ.ಡ್ರ್ಯಾಗನ್‌ ಫ್ರೂಟ್‌ ಇತಿಹಾಸ

ಈ ಹಣ್ಣನ್ನು ಕನ್ನಡದಲ್ಲಿ ಪಿಟಾಹಾಯ ಹಣ್ಣು ಎಂದು ಕರೆಲಾಗುತ್ತದೆ. ಇದು ಮಧ್ಯ ಅಮೆರಿಕಾ, ದಕ್ಷಿಣ ಅಮೆರಿಕಾ ಮತ್ತು ಏಷ್ಯಾದ ಹಣ್ಣು. ವಿಶೇಷವಾಗಿ ಏಷ್ಯನ್‌‌ ಮೂಲದ ಜನರಿಗೆ ಈ ಹಣ್ಣು ಪ್ರಾಣ. ಸಿಹಿ ರುಚಿ ಹೊಂದಿದೆ. ತೀಕ್ಷ್ಣವಾದ ಆಕಾರ ಮತ್ತು ಬಣ್ಣವನ್ನು ಹೊಂದಿರುತ್ತದೆ. ಕೀವಿ ಮತ್ತು ಸೇಬಿನ ನಡುವಿನ ವಿನ್ಯಾಸವನ್ನು ಹೊಂದಿದೆ.

ಟೇಸ್ಟಿ ಮತ್ತು ರಿಫ್ರೆಶ್‌ ಆಗಿರುವುದರ ಜೊತೆಗೆ ಇದು ಹಲವಾರು ಪೌಷ್ಟಿಕಾಂಶದ ಪದಾರ್ಥಗಳೊಂದಿಗೆ ಬಹಳಷ್ಟು ನೀರು ಮತ್ತು ಇತರ ಪ್ರಮುಖ ಖನಿಜಗಳನ್ನು ಒಳಗೊಂಡಿದೆ. ಡ್ರ್ಯಾಗನ್‌ ರುಚಿಕರವಾದ ಹಣ್ಣಾಗಿದೆ. ಇದು ಸಾಮಾನ್ಯವಾಗಿ ಉಷ್ಣ ವಲಯದ ಸೂಪರ್‌‌ ಫುಡ್‌‌ ಎಂದು ಪರಿಗಣಿಸಲ್ಪಡುತ್ತದೆ.ಆದರೆ, ನಿಜವಾದ ಡ್ರ್ಯಾಗನ್‌ ಹಣ್ಣು ಕ್ಯಾಕ್ಟಸ್‌ ಜಾತಿ ಹೈಲೋಕೇರಿಯಸ್‌ ಹಣ್ಣು. ಇದು ಮೆಕ್ಸಿಕೋ, ದಕ್ಷಿಣ ಅಮೆರಿಕಾ ಮತ್ತು ಮಧ್ಯ ಅಮೆರಿಕಾದಲ್ಲಿ ತನ್ನ ಮೂಲವನ್ನು ಹೊಂದಿದೆ. ಆದರೆ ನ್ಯೂವರ್ಲ್ಡ್ ವಸಾಹತುಗಾರರು ಬಹುಶಃ ಆಗ್ನೇಯ ಏಷ್ಯಾದ ರಾಷ್ಟ್ರಗಳಾದ ಕಾಂಬೋಡಿಯಾ, ಥೈಲ್ಯಾಂಡ್‌, ಥೈವಾನ್‌, ವಿಯೆಟ್ನಾಂ ಮತ್ತು ಫಿಲಿಪೈನ್ಸ್‌ಗೆ ತಂದರು. ಅಲ್ಲಿ ಇದು ಪಥ್ಯದ ಆಹಾರ ಸೇವನೆಯ ಪ್ರಮುಖ ಭಾಗವಾಗಿ ಉಳಿದಿದೆ. ಡ್ರ್ಯಾಗನ್ ಹಣ್ಣುಗಳು ಮೂಲತಃ ದಕ್ಷಿಣ ಅಮೆರಿಕದಿಂದ ಬಂದಿವೆ. ಇನ್ನೂ ಇಂತಹ ವಿದೇಶಿ ಹಣ್ಣನ್ನು ಬೆಳೆದ ನಾರಾಯಸ್ವಾಮಿ ಇತರರಿಗೆ ಮಾದರಿಯಾಗಿದ್ದಾರೆ.CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು