• A
  • A
  • A
ಕೊಪ್ಪಳದಲ್ಲಿ ಇಂದು ಸಿಗುತ್ತೆ ಅಸ್ತಮಾಕ್ಕೆ ಪಾರಂಪರಿಕ ಔಷಧಿ...ತಪ್ಪಿದರೆ ವರ್ಷ ಕಾಯಬೇಕು!

ಕೊಪ್ಪಳ: ಚಳಿ, ಜ್ವರ ಬಂದರೆ ಹೊದ್ದುಕೊಂಡು ಮಲಗಬಹುದು. ಆದರೆ, ಅಸ್ತಮಾ ಬಂದರೆ, ಅದರ ಯಾತನೆ ಅನುಭವಿಸದವರಿಗೆ ಗೊತ್ತು ಎಂದು ಬಲ್ಲವರು ಹೇಳುತ್ತಾರೆ. ಇಂತಹ ಅಸ್ತಮಾ ಕಾಯಿಲೆಗೆ ಕೊಪ್ಪಳದಲ್ಲೊಬ್ಬರು ವರ್ಷಕ್ಕೊಮ್ಮೆ ಮಾತ್ರ ಪಾರಂಪರಿಕ ಔಷಧಿ ನೀಡುತ್ತಾ ಬರುತ್ತಿದ್ದಾರೆ.




ಹೌದು, ತಾಲೂಕಿನ ಕುಟಗನಹಳ್ಳಿ ಗ್ರಾಮದ ಅಶೋಕರಾವ್‌‌ ಕುಲಕರ್ಣಿ ಇಂದು (ಜೂನ್ 8) ಅಸ್ತಮಾಕ್ಕೆ ಪಾರಂಪರಿಕ ಔಷಧಿ ನೀಡುತ್ತಿದ್ದಾರೆ. ಅಶೋಕರಾವ್‌‌ ಕಳೆದ 6 ದಶಕಗಳಿಂದ ಅಸ್ತಮಾ ಕಾಯಿಲೆಗೆ ಪಾರಂಪರಿಕ ಔಷಧಿಯನ್ನು ನೀಡುತ್ತಾ ಬರುತ್ತಿದ್ದಾರೆ. ಯಾವುದೇ ರೀತಿಯ ಹಣವನ್ನೂ ಪಡೆಯದೇ ಕುಲಕರ್ಣಿ ಕುಟುಂಬ ಔಷಧಿಯನ್ನು ನೀಡುತ್ತದೆ.



ಅಶೋಕ್‍ರಾವ್ ಅವರಿಗೂ ಮೊದಲು ಅವರ ತಂದೆ ದಿ.ವ್ಯಾಸರಾವ್ ಕುಲಕರ್ಣಿ ಅವರು ಔಷಧಿಯನ್ನು ನೀಡುತಿದ್ದರು. ಅವರ ಬಳಿಕ ಅಶೋಕ್‍ರಾವ್ ಅಸ್ತಮಾಗೆ ಔಷಧಿ ನೀಡುತ್ತಿದ್ದಾರೆ. ಈ ಔಷಧಿಯನ್ನು ಸೇವಿಸಿದ ಬಳಿಕ ಕೆಲವೊಂದಿಷ್ಟು ಪಥ್ಯಗಳನ್ನು ಪಾಲಿಸಿದರೆ ಅಸ್ತಮಾ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ ಎಂದು ಕಾಯಿಲೆಯಿಂದ ಗುಣಮುಖರಾದವರು ಮಾತು. ಅಲ್ಲದೆ, ಕುಲಕರ್ಣಿ ಕುಟುಂಬದವರ ಈ ನಿಸ್ವಾರ್ಥ ಸೇವೆಗೆ ಧನ್ಯತಾ ಭಾವ ಅರ್ಪಿಸುತ್ತಾರೆ.

ಪ್ರತಿ ವರ್ಷಕ್ಕೊಮ್ಮೆ ಮಾತ್ರ ಅಶೋಕ್‍ರಾವ್ ಅಸ್ತಮಾಕ್ಕೆ ಔಷಧಿ ಕೊಡುತ್ತಿದ್ದು, ರಾಜ್ಯ ಸೇರಿದಂತೆ ಪಕ್ಕದ ಆಂಧ್ರ, ಮಹಾರಾಷ್ಟ್ರ ರಾಜ್ಯಗಳಿಂದಲೂ ಸಹಸ್ರಾರು ಜನರು ಔಷಧಿ ಸೇವಿಸಿದ ಬಳಿಕ ಗುಣಮುಖರಾಗಿದ್ದಾರೆ.

ಏನದು ಔಷಧಿ?




ಕುಟುಗನಹಳ್ಳಿ ಗ್ರಾಮದ ಕುಲಕರ್ಣಿ ಕುಟುಂಬ ನೀಡುವ ಪಾರಂಪರಿಕ ಔಷಧಿ ವರ್ಷದಲ್ಲಿ ಒಂದೇ ಬಾರಿ ಮಾತ್ರ ನೀಡಲಾಗುತ್ತದೆ. ಹಳೆ ಬೆಲ್ಲ, ಇಂಗು ಸೇರಿದಂತೆ ಗಿಡಮೂಲಿಕೆಗಳನ್ನು ಬಳಸಿಕೊಂಡು ಕುಲಕರ್ಣಿ ಕುಟುಂಬ ಪಾರಂಪರಿಕ ಔಷಧಿಯನ್ನು ತಯಾರಿಸುತ್ತಾರೆ. ಮೃಗಶಿರ ಮಳೆ ನಕ್ಷತ್ರ ಕೂಡುವ ಸಂದರ್ಭದಲ್ಲಿಯೇ ಈ ಔಷಧಿಯನ್ನು ಸೇವಿಸಬೇಕು. ಅಂದಾಗ ಮಾತ್ರ ಪರಿಣಾಮವಾಗುತ್ತದೆ ಎನ್ನುತ್ತಾರೆ ಅಶೋಕ್‍ರಾವ್ ಕುಲಕರ್ಣಿ.

ಪ್ರತಿ ವರ್ಷವೂ ಸಹ ಯಾವಾಗ ಮೃಗಶಿರಾ ಮಳೆ ನಕ್ಷತ್ರ ಸೇರುವ ಸಂದರ್ಭದಲ್ಲಿಯೇ ಸಹಸ್ರಾರು ಜನರು ಔಷಧಿಯನ್ನು ಸೇವಿಸುತ್ತಾರೆ. ಮಳೆನಕ್ಷತ್ರ ಕೂಡುವ ಸಂದರ್ಭದಲ್ಲಿ ಎಲ್ಲರಿಗೂ ಕೇಳುವಂತೆ ಬೆಲ್‌ ಬಾರಿಸುವ ಮೂಲಕ ಏಕಕಾಲದಲ್ಲಿ ಔಷಧಿ ಸೇವನೆಗೆ ಸೂಚನೆ ನೀಡಲಾಗುತ್ತದೆ. ಈ ಔಷಧಿಯನ್ನು ಸೇವಿಸಿದ ಬಳಿಕ ಕೆಲವೊಂದು ತರಕಾರಿ ತಿನ್ನುವುದನ್ನು ತ್ಯಜಿಸಬೇಕು. ಅಲ್ಲದೆ, ಒಂದಿಷ್ಟು ಪಥ್ಯ ಕಟ್ಟುನಿಟ್ಟಾಗಿ ಪಾಲಿಸಬೇಕು.



ಇಂದು ಔಷಧಿ ಸೇವನೆ:


ಪ್ರತಿವರ್ಷದಂತೆ ಈ ವರ್ಷವೂ ಅಸ್ತಮಾ ಔಷಧಿ ವಿತರಣೆಗೆ ಕುಲಕರ್ಣಿ ಕುಟುಂಬ ತಯಾರಿಯಾಗಿದೆ. ಇಂದು ಸಂಜೆ 5 ಗಂಟೆಯ ವೇಳೆಗೆ ಔಷಧಿ ಸೇವನೆಗೆ ಸಮಯ ನಿಗದಿಪಡಿಸಲಾಗಿದೆ. ಇಂದು ಸಂಜೆ 5 ಗಂಟೆಗೆ ಮೃಗಶಿರಾ ಮಳೆ ನಕ್ಷತ್ರ ಕೂಡುತ್ತದೆ. ಆಗ ಔಷಧಿ ಸೇವನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಬೇರೆ ಬೇರೆ ದೂರದ ಊರುಗಳಿಂದ ಕುಟುಗನಹಳ್ಳಿಗೆ ಆಗಮಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 81399 44193, 99025 96051, 96636 93571, 96632 70715, 95356 62799 ಮೊಬೈಲ್‌ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು