• A
  • A
  • A
ರಾಜ್ಯಪಾಲ ವಾಲಾ ಮೇಲೆ ನಿಂತಿದೆ ರಾಜ್ಯ ರಾಜಕಾರಣ: ಇನ್‌ ಸೈಡ್‌ ಸ್ಟೋರಿ!

ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಡೀ ರಾಜ್ಯದ ರಾಜಕಾರಣದ ಚಿತ್ತ ರಾಜ್ಯಪಾಲ ವಿ.ಆರ್‌.ವಾಲಾ ಅವರತ್ತ ನೆಟ್ಟಿದೆ.


ದೇಶಾದ್ಯಂತ ತೀವ್ರ ಕುತೂಲಹ ಮೂಡಿಸಿದ ರಾಜ್ಯ ವಿಧಾನಸಭೆಗೆ 12 ರಂದು ಮತದಾನವಾಗಿತ್ತು. 224 ಕ್ಷೇತ್ರಗಳಲ್ಲಿ ಪೈಕಿ 222 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಬೆಂಗಳೂರಿನ ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜಯಕುಮಾರ್‌ ಅಕಾಲಿಕ ನಿಧನ ಮತ್ತು ರಾಜಾರಾಜೇಶ್ವರಿ ಕ್ಷೇತ್ರಗಳಲ್ಲಿ ಅಕ್ರಮ ಮತ ಚೀಟಿಗಳು ಪತ್ತೆಯಾದ ಕಾರಣ ಎರಡೂ ಕ್ಷೇತ್ರಗಳ ಮತದಾನ ಮುಂದೂಡಲಾಗಿದೆ.

ಇಂದು 222 ಕ್ಷೇತ್ರಗಳ ಮತ ಎಣಿಕೆ ನಡೆದಿದ್ದು, ಬಿಜೆಪಿ 104 ಸ್ಥಾನಗಳನ್ನು ಗಳಿಸುವುದರೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್‌ ಆಡಳಿತ ವಿರೋಧಿ ಬಿಸಿ ಎದುರಿಸಿದ್ದು ಕೇವಲ 78 ಕ್ಷೇತ್ರಗಳಲ್ಲಿ ಮಾತ್ರ ಜಯ ಸಾಧಿಸಿದೆ. ಇತ್ತ, ನಿರೀಕ್ಷೆಯಂತೆ ಕಿಂಗ್‌ ಮೇಕರ್‌ ಆಗಿರುವ ಜೆಡಿಎಸ್‌ 38 ಸ್ಥಾನಗಳನ್ನು ಪಡೆದುಕೊಂಡಿದೆ.

ಜೆಡಿಎಸ್‌ಗೆ ಗಾಳ ಹಾಕಿದ 'ಕೈ'!

ಚುನಾವಣಾ ಫಲಿತಾಂಶ ಅತಂತ್ರ ಎಂಬುವುದನ್ನರಿತದ್ದಂತೆ ಕಾಂಗ್ರೆಸ್‌ ಕೇಸರಿ ಪಡೆಗೆ ಟಕ್ಕರ್‌ ಕೊಡಲು ಎಂಬಂತೆ, ಮೊದಲ ದಾಳ ಉರುಳಿಸಿತು. ತಾನೇ ಮುಂದೆ ಬಂದು ಜೆಡಿಎಸ್‌ ಬೇಷರತ್‌ ಬೆಂಬಲ ಘೋಷಿಸಿದೆ. ಈ ಮೂಲಕ ಜೆಡಿಎಸ್‌ಗೆ ನೇರವಾಗಿಯೇ ಗಾಳ ಹಾಕಿ ಕಾಂಗ್ರೆಸ್‌, ದೇವೇಗೌಡ ಅವರೊಂದಿಗೆ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನೇ ಸಂಪರ್ಕಿಸಲು ಬಿಟ್ಟಿತು. ಸೋನಿಯಾ ಅವರು ದೇವೇಗೌಡ ಅವರೊಂದಿಗೆ ಮಾತನಾಡಿ, ಕಾಂಗ್ರೆಸ್‌-ಜೆಡಿಎಸ್‌ ದೋಸ್ತಿ ಪಕ್ಕಾ ಮಾಡಿದರು.

ಇದೇ ವೇಳೆ ದೇವೇಗೌಡ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಕರೆ ಮಾಡಿ, ಮೈತ್ರಿ ಬಗ್ಗೆ ಪ್ರಸ್ತಾಪಿಸಿದರು. ಆದರೆ, ದೇವೇಗೌಡರು ತಮ್ಮ ಶಾಸಕರೊಂದಿಗೆ ಮಾತನಾಡಿ ತಿಳಿಸುವುದಾಗಿ ಹೇಳುವ ಮೂಲಕ ಪರೋಕ್ಷವಾಗಿ ಮೋದಿ ಅವರ ಪ್ರಸ್ತಾಪವನ್ನು ತಿರಸ್ಕರಿಸಿದರು.

ಗಮನಾರ್ಹ ಅಂಶವೆಂದರೆ, ಮೋದಿ- ದೇವೇಗೌಡ ಮಾತುಕತೆ ಬಳಿಕವೂ ರಾಜ್ಯ ಬಿಜೆಪಿ ಜೆಡಿಎಸ್‌‌ನೊಂದಿಗೆ ಹೋಗುವ ಯಾವುದೇ ಸೂಚನೆ ನೀಡಲೇ ಇಲ್ಲ.

ರಾಜ್ಯಪಾಲ ಮೇಲಿದೆ ರಾಜ್ಯ ರಾಜಕಾರಣ!

ಕಾಂಗ್ರೆಸ್‌-ಜೆಡಿಎಸ್‌ ಮಧ್ಯೆ ಸರ್ಕಾರ ರಚನೆಗೆ ಒಮ್ಮತ ಮೂಡುತ್ತಿದ್ದಂತೆ ಹಾಲಿ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಇದಾದ ಕೆಲವೇ ಕ್ಷಣಗಳಲ್ಲಿ ಜೆಡಿಎಸ್‌ ತಮ್ಮ ಕಾಂಗ್ರೆಸ್‌ ಬೆಂಬಲವಿದೆ ಎಂಬ ಒಕ್ಕಣೆ ಇರುವ ಪತ್ರವನ್ನು ರೆಡಿ ಮಾಡಿತು. ಸರ್ಕಾರ ರಚನೆ ಅವಕಾಶಕೊಡಿ ಎಂದು ರಾಜ್ಯಪಾಲರಿಗೆ ತನ್ನ ಹಕ್ಕು ಮಂಡಿಸಿತು.

ಇದಾದ ನಂತರ ಅತಿ ದೊಡ್ಡ ಪಕ್ಷ ಬಿಜೆಪಿ ಕೂಡ ರಾಜ್ಯಪಾಲರ ಭೇಟಿ ಮಾಡಿ, ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಿತು. ಹೀಗಾಗಿ ರಾಜ್ಯಪಾಲರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದರ ಮೇಲೆ ನೂತನ ಸರ್ಕಾರ ಭವಿಷ್ಯ ನಿರ್ಧಾರವಾಗಲಿದೆ.

ರಾಜ್ಯಪಾಲ ವಿ.ಆರ್‌, ಅವರು ಪ್ರಧಾನಿ ಮೋದಿ ಅವರ ಒಂದು ಕಾಲದ ಆಪ್ತರಾಗಿದ್ದು, ಇಲ್ಲಿ ತಮ್ಮ ಪ್ರಭಾವ ಯಾವ ರೀತಿ ಬೀರಲಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌‌ ಸರ್ಕಾರ ರಚನೆ ಸೂಚಿಸುತ್ತಾರೋ, ಅಥವಾ ಬಿಜೆಪಿಗೆ ಸರ್ಕಾರ ರಚನೆ ಮಾಡಲು ಅವಕಾಶ ಕೊಡುತ್ತಾರೋ ಎಂಬುದೇ ಸದ್ಯದ ಕುತೂಹಲಕ್ಕೆ ಕಾರಣವಾಗಿದೆ. ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಕುಮಾರಸ್ವಾಮಿ: ರಾಜ್ಯಪಾಲರಿಗೆ ಪತ್ರ

ವಾಲಾ ಅವರು ಮಾಜಿ ಆರ್‌ಎಸ್‌ಎಸ್‌ನವರಾಗಿದ್ದು, ಗುಜರಾತ್‌ನಲ್ಲಿ ಮೋದಿ ಸರ್ಕಾರದಲ್ಲಿ ಸಚಿವರಾಗಿ, ಸ್ಪೀಕರ್‌ ಆಗಿ ಕಾರ್ಯ ನಿರ್ವಹಿಸಿದವರು. ಹೆಚ್ಚಾಗಿ ಮೋದಿ ಅವರಿಗೆ ಅತಿ ಆಪ್ತರೆಂದು ವಾಲಾ ಗುರುತಿಸಿಕೊಂಡವರು. 2014ರಲ್ಲಿ ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರ ಬಂದ ಬಳಿಕ ವಾಲಾ ಕರ್ನಾಟಕ ರಾಜ್ಯಪಾಲರಾಗಿ ಆಯ್ಕೆಯಾದವರು. ಸಂಜೆಯೇ ಸಿದ್ದರಾಮಯ್ಯರಿಂದ ರಾಜ್ಯಪಾಲರ ಭೇಟಿ: ಕಾಂಗ್ರೆಸ್‌-ಜೆಡಿಎಸ್‌‌ ಸರ್ಕಾರ!?

ಈ ಎಲ್ಲ ಹಿನ್ನಲೆಯನ್ನ ಗಮನಿಸುವುದಾದರೆ, ರಾಜ್ಯಪಾಲರು ಕಾನೂನಿನ ಪ್ರಕಾರವೇ ಬಿಜೆಪಿಗೆ ಅನುಕೂಲ ಮಾಡಿಕೊಡುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿವೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು