• A
  • A
  • A
ಚುನಾವಣೆ ವೇಳೆ ಗಲಾಟೆ: ಕಾರ್ಪೊರೇಟರ್‌ನನ್ನು ಬಂಧಿಸಿ ರಸ್ತೆಯಲ್ಲೇ ಮೆರವಣಿಗೆ-ವಿಡಿಯೋ ವೈರಲ್

ದಾವಣಗೆರೆ: ಚುನಾವಣಾ ಸಂಬಂಧ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ ಎಂದು ಪಾಲಿಕೆ ಸದಸ್ಯನನ್ನು ಶನಿವಾರ ಪೊಲೀಸರು ಬಂಧಿಸಿ ರಸ್ತೆಯುದ್ದಕ್ಕೂ ಮೆರವಣಿಗೆ ಮಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ದಾವಣಗೆರೆ ಕಾಂಗ್ರೆಸ್‌ ಕಾರ್ಪೊರೇಟರ್ ಶ್ರೀನಿವಾಸ್ ಆಲಿಯಾಸ್ ಮೋಟ್ ಬಳ್ ಸೀನನನ್ನು ಪೊಲೀಸರು ಮೆರವಣಿಗೆ ಮಾಡಿದ್ದಾರೆ ಎನ್ನಲಾಗಿದೆ.


ನಿನ್ನೆ ಭಗತ್ ಸಿಂಗ್ ನಗರದ ಮತದಾನ ಕೇಂದ್ರದ ಬಳಿ ಬಿಜೆಪಿ ಕಾರ್ಯಕರ್ತ ಪ್ರದೀಪ್‌ ಎಂಬುವರ ಮೇಲೆ ಶ್ರೀ‌ನಿವಾಸ್ ಹಲ್ಲೆ ಮಾಡಿದ್ದ ಎಂದು ಆರೋಪಿಸಲಾಗಿದೆ. ಈ ಸಂಬಂಧ ಹಲ್ಲೆಗೊಳಗಾದ ಬಿಜೆಪಿ ಬೆಂಬಲಿಗ ಪ್ರದೀಪ್ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ದೂರಿನ‌ ಆಧಾರದ ಮೇಲೆ ಕಾರ್ಪೊರೇಟರ್ ಶ್ರೀನಿವಾಸ್‌ನನ್ನು ಬಂಧಿಸಿ, ಕಾಲರ್ ಹಿಡಿದು ರಸ್ತೆಯಲ್ಲಿ ಎಳೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ‌ದೆ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು