• A
  • A
  • A
ಸದ್ದಿಲ್ಲದೇ ಮದುವೆಯಾದ ಹುಚ್ಚ ವೆಂಕಟ್...

ನಟ ನಿರ್ದೇಶಕ ನಿರ್ಮಾಪಕ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್‌ ಮದುವೆಯಾಗಿದ್ದಾರೆ . ಡಿಕ್ಟೇಟರ್‌ ಹುಚ್ಚವೆಂಕಟ್‌ ಚಿತ್ರದ ನಾಯಕಿ ಐಶ್ವರ್ಯಾ ಜೊತೆ ವೆಂಕಟ್‌ ಸಪ್ತಪದಿ ತುಳಿದಿದ್ದಾರೆ .


ಒಂದು ವಾರದ ಹಿಂದೆಯೇ ಅವರು ಮದುವೆಯಾಗಿದ್ದು , ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್‌ ಮಾಡಿದ್ದಾರೆ .

"ನಾನು ಐಶ್ವರ್ಯ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದೇವೆ . ಆದಷ್ಟು ಬೇಗ ಬೆಂಗಳೂರಿಗೆ ಬರುತ್ತಿದ್ದೇವೆ. ಅಪ್ಪ ನಮ್ಮನ್ನು ಕ್ಷಮಿಸಬೇಕು. ಅತ್ತೆ ನೀವು ಕೂಡ ಕ್ಷಮಿಸಬೇಕು .ನಾವು ನಿಮ್ಮೆಲ್ಲರನ್ನು ಒಪ್ಪಿಸಿ ಮದುವೆಯಾಗಬೇಕು ಎಂದು ನಿರ್ಧರಿಸಿದ್ದೆವು. ಆದರೆ ಅದು ಸಾಧ್ಯ ಆಗಿಲ್ಲ. ಆಕೆ ನನ್ನನ್ನು ತುಂಬಾ ಹಚ್ಚಿಕೊಂಡಿದ್ದಾಳೆ. ಆದರೆ ಮದುವೆಗೆ ನೀವು ಒಪ್ಪುತ್ತೀರಿ ಎಂಬ ಗ್ಯಾರಂಟಿ ನಮಗೆ ಇರಲಿಲ್ಲ. ಹಾಗಾಗಿ ಹೇಳಿಲ್ಲ" ಎಂದು ಫೇಸ್‌ಬುಕ್‌ನಲ್ಲಿ ಹುಚ್ಚ ವೆಂಕಟ್‌ ಹೇಳಿಕೊಂಡಿದ್ದಾರೆ .


Copyright © 2016 Ushodaya Enterprises Pvt. Ltd., All Rights Reserved.

For Digital Marketing Enquiries Contact: 9000180611, 040-23318181
Email: marketing@eenadu.net | Powered By Vishwak