• A
  • A
  • A
ನಾನು ಸೋತರೆ ಅದು ನನ್ನ ಸೋಲಲ್ಲ, ಬಸವಣ್ಣನ ಸೋಲು: ಎಂ.ಬಿ. ಪಾಟೀಲ್

ದಾವಣಗೆರೆ: ಭಕ್ತರ ಮನೆಗೆ ಹೋಗಿ ಯಾರದೋ ಪರ ಅಥವಾ ವಿರೋಧವಾಗಿ ಹೇಳುವುದು ಸರಿಯಲ್ಲ. ನನ್ನನ್ನು ಯಾರಾದರೂ ಸೋಲಿಸಿದರೆ ಅದು ನನ್ನ ಸೋಲಲ್ಲ, ಬಸವಣ್ಣನ ಸೋಲು. ಬಸವಣ್ಣ ಸೋಲಬಾರದು ಗೆಲ್ಲಬೇಕೆಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಮಾರ್ಮಿಕವಾಗಿ ಹೇಳಿದರು.


ಹರಿಹರ ತಾಲೂಕಿನ ಬೆಳ್ಳೂಡಿಯಲ್ಲಿರುವ ಕನಕ ಶಾಖಾ ಮಠಕ್ಕೆ ಕೂಡಲಸಂಗಮ ಪಂಚಮಸಾಲಿ ಪೀಠದ ಸ್ವಾಮೀಜಿ ಜಯಮೃತ್ಯುಂಜಯ ಸ್ವಾಮೀಜಿ ಜೊತೆಗೂಡಿ ಆಗಮಿಸಿದ್ದ ಅವರು, ಕಾಗಿನಲೆ ಪೀಠದ ನಿರಂಜನಾನಂದ ಸ್ವಾಮೀಜಿ ಆಶೀರ್ವಾದ ಪಡೆದು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಕೆಲ ಪಂಚಪೀಠದ ಸ್ವಾಮೀಜಿಗಳು ನನ್ನ ಬಗ್ಗೆ ಮಾತನಾಡಿರುವ ಆಡಿಯೋ ನನಗೆ ಸಿಕ್ಕಿದೆ. ಅದರಲ್ಲಿ ಎಂ.ಬಿ. ಪಾಟೀಲ್ ಅವರನ್ನ ಅಗಸ ಬಟ್ಟೆ ಒಗೆದಂತೆ ಒಗೆದು ಹಾಕಿ ಎಂದಿದ್ದಾರೆ. ನಾನು ಚುನಾವಣೆಗಾಗಿ ಲಿಂಗಾಯತ ಧರ್ಮದ ಪರ ಹೋರಾಟ ಮಾಡುತ್ತಿಲ್ಲ. ಚುನಾವಣೆ ನಂತರವೂ ನಮ್ಮ ಹೋರಾಟವಿದೆ. ಬಸವಣ್ಣ ಹುಟ್ಟಿದ ನಾಡಿನಲ್ಲಿ ಹುಟ್ಟಿ ಬಸವ ಧರ್ಮ ಜಾಗತಿಕ ಧರ್ಮ ಮಾಡುವುದು ನನ್ನ ಕರ್ತವ್ಯ. ಹೀಗಾಗಿ ಬಸವ ತತ್ವಕ್ಕಾಗಿ ನಾನು ಹೋರಾಟ ಮಾಡುತ್ತೇನೆ. ಈ ಹೋರಾಟದಲ್ಲಿ ಯಾವುದೇ ಸಮಸ್ಯೆ ಎದುರಿಸಲು ನಾನು ಸಿದ್ಧ ಎಂದರು.ಸಚಿವರು ಯಾರಾದರೂ ಲಿಂಗಾಯತ ಧರ್ಮದ ವಿಷಯಕ್ಕಾಗಿ ನನ್ನನ್ನು ಸೋಲಿಸಿ ಹೋರಾಟ ಮಾಡಿದರೆ ಅದು ನನ್ನ ಸೋಲಲ್ಲ, ಅದು ಬಸವಣ್ಣನವರ ಸೋಲು. ಬಸವ ತತ್ವದ ಸೋಲು ಎಂದ ಸಚಿವ ಪಾಟೀಲ್‌, ನನ್ನ ಕ್ಷೇತ್ರದ ಪೀಠದಲ್ಲಿ ಪಂಚ ಪೀಠದ ಸ್ವಾಮೀಜಿಗಳು ನನ್ನ ವಿರುದ್ಧ ಪ್ರಚಾರ ಮಾಡುತ್ತಿರುವ ಕುರಿತು ಸಂಪೂರ್ಣ ಮಾಹಿತಿ ಪಡೆದು, ಈ ಬಗ್ಗೆ ಕ್ಷೇತ್ರಕ್ಕೆ ಹೋದ ಬಳಿಕ ಸೂಕ್ತ ಪ್ರತಿಕ್ರಿಯೆ ನೀಡುವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಿರಂಜನಾನಂದ ಸ್ವಾಮೀಜಿ ಸಚಿವರಿಗೆ ಕಂಬಳಿ ಹೊದಿಸಿ ಸನ್ಮಾನಿಸಿದರು. ಸ್ವಾಮೀಜಿಗಳು ಹಾಗೂ ಸಚಿವರು ಕನಕದಾಸರ ಮೂರ್ತಿಗೆ ಮಾಲಾರ್ಪಣೆ ಮಾಡಿದರು.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು