• A
  • A
  • A
ಶಿವಮೊಗ್ಗದ 6 ವರ್ಷದ ಈ ಬಾಲಕ ಚುನಾವಣಾ ರಾಯಭಾರಿ... ಈತನ ಸ್ಪೆಷಾಲಿಟಿ ಏನು ಗೊತ್ತಾ?

ಶಿವಮೊಗ್ಗ: ಜಿಲ್ಲಾಧಿಕಾರಿ ಡಾ. ಲೋಕೇಶ್ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಸಾಕಷ್ಟು ಕೆಲಸ ಮಾಡುತ್ತಿದ್ದು, ಈಗ ಹೊಸ ಹಾಗೂ ವಿಶೇಷ ರಾಯಭಾರಿಯನ್ನೂ ನೇಮಕ ಮಾಡುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.


ಹೌದು, ರಾಯಭಾರಿ ನೇಮಕ ಮಾಡಿಕೊಳ್ಳುವುದರಲ್ಲೇನು ಹೊಸತು ಎಂದು ಅನಿಸಬಹುದು. ಆದರೆ ಈ ರಾಯಭಾರಿ ಕ್ರಿಕೆಟಿಗನೋ, ಚಿತ್ರ ನಟನೋ ಅಥವಾ ಇನ್ನಾವುದೋ ಸೆಲೆಬ್ರಿಟಿನೂ ಅಲ್ಲ. ಡಿಸಿ ನೇಮಕ ಮಾಡಿರುವ ರಾಯಭಾರಿ ಕೇವಲ ಆರು ವರ್ಷ ವಯಸ್ಸಿನ ಫಸ್ಟ್‌ ಸ್ಟಾಂಡರ್ಡ್ ಬಾಲಕ!

ಈ ಬಾಲಕನ ಹೆಸರು ಇಂದ್ರಜಿತ್. ಶಿವಮೊಗ್ಗದ ಹುಡ್ಕೋ ಕಲ್ಲಳ್ಳಿಯ ಈ ಬಾಲಕನ ತಂದೆ ಶಿವಕುಮಾರ್ ಕೊಣೆಹೊಸೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ತಾಯಿ ಆಶಾ ಗೃಹಿಣಿ.ರಾಜ್ಯದ ಎಲ್ಲಾ ಕ್ಷೇತ್ರಗಳು ನಾಲಗೆ ತುದಿಯಲ್ಲಿ:

ರಾಜ್ಯದ ಒಟ್ಟು 224 ಕ್ಷೇತ್ರಗಳ ಹೆಸರು ಹೇಳಿ ಎಂದರೆ ಎಂತಹ ನುರಿತ ರಾಜಕಾರಣಿಯೂ ಕಕ್ಕಾಬಿಕ್ಕಿಯಗಿಬಿಡ್ತಾರೆ. ಆದರೆ ಈ ಬಾಲಕ ಮಾತ್ರ ಎಲ್ಲಾ ಕ್ಷೇತ್ರಗಳ ಹೆಸರನ್ನ ಪಟಪಟನೇ ಹೇಳಿಬಿಡ್ತಾನೆ. ವಿಶೇಷವೆಂದ್ರೆ ತಂದೆಯೇ ಎಲ್ಲಾ ಕ್ಷೇತ್ರದ ಹೆಸರುಗಳನ್ನ ಬಾಲಕನಿಗೆ ಕಂಠಪಾಠ ಮಾಡಿಸಿದ್ದಾರೆ.

ನನಗಿನ್ನೂ ಆರು ವರ್ಷ. ನನಗೆ ಮತ ಹಾಕಲು ಅವಕಾಶ ಇಲ್ಲ. ಆದರೆ ನೀವು ಮತದಾನ ಮಾಡಲೇಬೇಕು ಎನ್ನುತ್ತಾನೆ ಈ ಪೋರ.

ಜಿಲ್ಲಾಧಿಕಾರಿ ಲೋಕೇಶ್ ಹಾಗೂ ಸಿಇಒ ರಾಕೇಶ್ ಕುಮಾರ್ ಆಸಕ್ತಿ ವಹಿಸಿ ಈ ಬಾಲಕನನ್ನ ಜಿಲ್ಲೆಯ ಚುನಾವಣಾ ಐಕಾನ್ ಮಾಡಿದ್ದಾರೆ. ಬಾಲಕನ ಮತದಾನ ಜಾಗೃತಿ ಬಗೆಗಿನ ವಿಡಿಯೋ ಕೂಡ ಚಿತ್ರೀಕರಿಸಲಾಗಿದ್ದು, ಶೀಘ್ರವೇ ಆ ವಿಡಿಯೋ ಬಿಡುಗಡೆಯಾಗಲಿದೆ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು