• A
  • A
  • A
ಅಪ್ರಾಪ್ತೆ ತಂಗಿ ಜತೆ ನೀಚನ ಅಕ್ರಮ ಮದುವೆ... ಆಕೆ ಸಾವಿನ ನಂತ್ರ ಇಡೀ ಊರೇ ರಣಾಂಗಣ!

ಭದ್ರಾವತಿ: ಅಣ್ಣ ತಂಗಿಯ ನಡುವೆಯೇ ಅನುರಕ್ತಗೊಂಡ ಪ್ರೇಮವೊಂದು ತಂಗಿ ಸಾವಿನೊಂದಿಗೆ ದುರಂತ ಅಂತ್ಯ ಕಂಡಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ.


ಅಣ್ಣನೇ ಅಪ್ರಾಪ್ತ ವಯಸ್ಸಿನ ತಂಗಿಯನ್ನು ಪ್ರೇಮಿಸಿ, ಕದ್ದು ಮದುವೆಯಾಗಿ, ಒಂದು ವರ್ಷ ಸಂಸಾರ ಮಾಡಿದ್ದ. ಪೋಷಕರು, ಹುಟ್ಟೂರಿನಿಂದ ದೂರವಿದ್ದ ಈ ಜೋಡಿಗೆ ಕೊನೆಗೊಂದು ದಿನ ಕರೆ ಬಂದಿತ್ತು‌. ಈ ಫೊನ್ ಕರೆ ಇಡೀ ಊರನ್ನೇ ರಣರಂಗವನ್ನಾಗಿ ಮಾಡಿತ್ತು. ಆಕ್ರೋಶಗೊಂಡವರು ಪೊಲೀಸರಿಗೂ ಥಳಿಸಿದ್ದಾರೆ.

ಘಟನೆ ವಿವರಭದ್ರಾವತಿಯ ತಮಿಳು ಕಾಲೊನಿ ಆನಂದ ಎಂಬಾತನಿಗೆ ಮೊದಲೇ ಒಂದು ಮದುವೆಯಾಗಿತ್ತು. ಆದರೆ ಗಂಡನ ಕಿರುಕುಳ ತಾಳಲಾರದೆ ಮೊದಲ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ಗಂಡನನ್ನು ಬಿಟ್ಟು ಹೋಗಿ ಬದುಕು ಕಟ್ಟಿಕೊಂಡಿದ್ದಳು. ಪತ್ನಿಯಿಂದ ದೂರವಾಗಿದ್ದ ಆನಂದ ಸ್ವಲ್ಪ ಕಾಲ ಸುಮ್ಮನೇ ಕುಳಿತು ನಂತರ ಭದ್ರಾವತಿ ಭೋವಿ ಕಾಲೊನಿಯಲ್ಲಿರುವ ತನ್ನ ಚಿಕ್ಕಪ್ಪನ ಮಗಳ ಮೇಲೆ ಕಣ್ಣಾಕಿದ್ದ.ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದ ತನ್ನ ಚಿಕ್ಕಪ್ಪನ ಮಗಳನ್ನು ಪುಸಲಾಯಿಸಿ ತನ್ನ ಪ್ರೀತಿಯ ಬಲೆಗೆ ಕೆಡವಿಕೊಂಡಿದ್ದ. ಒಂದು ವರ್ಷದ ಹಿಂದೆ ಶಾಲೆಗೆ ಹೋಗಿದ್ದ ಬಾಲಕಿಯನ್ನು ಆನಂದ ಕಿಡ್ನಾಪ್ ಮಾಡಿದ್ದ. ಬಳಿಕ ತನಗೇನೂ ಗೊತ್ತಿಲ್ಲ ಎಂಬಂತೆ ಆಕೆಯ ಕುಟುಂಬದವರು ಹಾಗೂ ಸಂಬಂಧಿಕರೊಂದಿಗೆ ಸೇರಿ ನಾಲ್ಕು ದಿನ ಹುಡುಕುವ ನಾಟಕವನ್ನೂ ಮಾಡಿದ್ದ. ಯಾವಾಗ ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯಲ್ಲಿ ಬಾಲಕಿ ನಾಪತ್ತೆಯಾಗಿರುವ ಕುರಿತು ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಯಿತೋ ಆಗ ಆನಂದನೂ ನಾಪತ್ತೆಯಾಗಿಬಿಟ್ಟ.

ಆಗ ಕುಟುಂಬದವರಿಗೆ ಆನಂದನೇ ಬಾಲಕಿಯನ್ನು ಕಿಡ್ನಾಪ್ ಮಾಡಿದ್ದಾನೆ ಎಂಬುದು ಗೊತ್ತಾಗಿದೆ. ಕೂಡಲೇ ಇಬ್ಬರನ್ನು ಪತ್ತೆ ಹಚ್ಚಲು ಪೊಲೀಸರು ಹಾಗೂ ಬಾಲಕಿ ಕುಟುಂಬದವರು ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ. ಬರೋಬ್ಬರಿ ಒಂದು ವರ್ಷ ಕಳೆದರೂ ಇಬ್ಬರು ಎಲ್ಲಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ.

ನಾಪತ್ತೆಯಾಗಿದ್ದವಳು ಹೆಣವಾದಳು


ಹೀಗಿರುವಾಗ ಗುರುವಾರ ಬಾಲಕಿ ತಾಯಿಗೆ ಕರೆ ಮಾಡಿದ ಆನಂದ ನಾಪತ್ತೆಯಾಗಿದ್ದಳು ಎನ್ನಲಾದ ಬಾಲಕಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾನೆ. ಇಲ್ಲಿಂದಲೇ ಇಡೀ ಊರಿಗೆ ಊರೇ ರಣರಂಗವಾಗಿತ್ತು‌.ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ತಿಳಿಯುತ್ತಿದ್ದಂತೆ ಆಕೆಯ ಸಂಬಂಧಿಕರು ಹೊಸಪೇಟೆಗೆ ದೌಡಾಯಿಸಿದ್ದರು. ನೇಣು ಬಿಗಿದ ಸ್ಥಿತಿಯಲ್ಲಿದ್ದ ಬಾಲಕಿಯನ್ನು ನೋಡಿದ ಆಕೆಯ ಕುಟುಂಬದವರಿಗೆ ಇದು ಆತ್ಮಹತ್ಯೆಯಲ್ಲ, ಆನಂದನೇ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾನೆ ಎಂಬ ಅನುಮಾನ ಬಂದಿದೆ. ಆದರೂ ಈ ಬಗ್ಗೆ ಅಲ್ಲಿ ವಿಷಯ ಪ್ರಸ್ತಾಪಿಸದ ಬಾಲಕಿ ಸಂಬಂಧಿಕರು ಆಕೆಯ ಶವದೊಂದಿಗೆ ಆನಂದನನ್ನೂ ಭದ್ರಾವತಿಗೆ ಕರೆತಂದಿದ್ದಾರೆ. ಶುಕ್ರವಾರ ಬೆಳಗ್ಗೆ ಈ ವಿಷಯ ಬಡಾವಣೆಯಾದ್ಯಂತ ತಿಳಿಯುತ್ತಿದ್ದಂತೆ ರೊಚ್ಚಿಗೆದ್ದ ಜನರು ಆನಂದನ ಮೇಲೆ ಹಲ್ಲೆ ನಡೆಸಿದ್ದಾರೆ. ಉದ್ರಿಕ್ತಗೊಂಡಿದ್ದ ಜನರನ್ನು ಹತೋಟಿಗೆ ತರಲು ಯತ್ನಿಸಿದ ಮೂವರು ಪೊಲೀಸರ ಮೇಲೆಯೂ ಜನರು ಹಲ್ಲೆ ನಡೆಸಿದ್ದಾರೆ. ಇದರಿಂದ ಗಾಯಗೊಂಡ ಪೊಲೀಸರು ಭದ್ರಾವತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇನ್ನು ಗಲಾಟೆ ವೇಳೆ ಗಂಭೀರವಾಗಿ ಗಾಯಗೊಂಡಿರುವ ಸಂಬಂಧಿ ಲೋಹಿತ್ ಸಹ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಆನಂದನೇ ಬಾಲಕಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾನೆ. ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬುದು ಆಕೆಯ ಸಂಬಂಧಿಕರ ಆಗ್ರಹವಾಗಿದೆ. ಆದ್ರೆ ತನ್ನ ತಂಗಿ ಜೊತೆಗೆ ಆಪ್ರಾಪ್ತೆ ಎಂಬುದು ಗೊತ್ತಿದ್ದರೂ ಆಕೆಯನ್ನು ಕಿಡ್ನಾಪ್ ಮಾಡಿ ಮದುವೆಯಾಗಿದ್ದಲ್ಲದೆ ಆಕೆಯ ಸಾವಿಗೆ ಕಾರಣವಾದ ಆನಂದನಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಹೆಣ್ಣು ಮಕ್ಕಳ ಜೀವನದೊಂದಿಗೆ ಚೆಲ್ಲಾಟವಾಡುವ ಎಲ್ಲರಿಗೂ ಆನಂದನಿಗೆ ನೀಡುವ ಶಿಕ್ಷೆ ಎಚ್ಚರಿಕೆಯ ಗಂಟೆಯಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು