• A
  • A
  • A
ಖೋಟಾ ನೋಟ್‍ಗಳನ್ನ ಅರ್ಧ ಸೆಕೆಂಡ್‌ನಲ್ಲೇ ಪತ್ತೆ ಹಚ್ಚಬಹುದು... ಹೇಗಂತಿರಾ?

ಶಿವಮೊಗ್ಗ: ನಗರದಲ್ಲಿ ಖೋಟಾನೋಟು ದಂಧೆಯ ಜಾಡು ಹಿಡಿದಿರುವ ಜಿಲ್ಲಾ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿ ತನಿಖೆಯನ್ನ ಚುರುಕುಗೊಳಿಸಿದ್ದಾರೆ.


ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ವಿಶೇಷ ತಂಡವನ್ನ ಪಶ್ಚಿಮಬಂಗಾಳಕ್ಕೆ ಕಳುಹಿಸುವುದಾಗಿ ಹೇಳಿದರು. ಹೊಸ ನೋಟುಗಳ ರಚನೆ ಬಗ್ಗೆ ಜನರಿಗೆ ಮಾಹಿತಿಯಿಲ್ಲ. ಹಳೆಯ ನೋಟ್‍ಗಳಾಗಿದ್ದರೆ ಕಂಡು ಹಿಡಿಯುತ್ತಿದ್ದರು. ಈ ನೋಟ್‍ಗಳ ಬಗ್ಗೆ ಮಾಹಿತಿ ತಿಳಿಯಲು ಸಮಯ ಬೇಕು ಎಂದರು.




ಮೊದಲನೆಯದಾಗಿ ಖೋಟಾನೋಟ್‍ಗಳನ್ನ ಅರ್ಧ ಸೆಕೆಂಡ್‍ನಲ್ಲಿ ಕಂಡುಹಿಡಿಯಬಹುದು ಎಂದರು.

*ಅಸಲಿ ನೋಟ್ ಮುಟ್ಟಿದರೆ ಆಗುವ ಅನುಭವ ಖೋಟಾನೋಟಲ್ಲಿ ಸಿಗುವುದಿಲ್ಲ

*ಫೋಟೋ ಕಾಪಿ ನೋಟ್‍ಗಳು ಸಾಮಾನ್ಯವಾಗಿ ಸ್ವಲ್ಪ ದಪ್ಪವಾಗಿರುತ್ತವೆ.
  • ಅಸಲಿ ನೋಟ್ ಮೇಲಿನ ಮಾರ್ಕ್ ನೇರವಾಗಿ ನೋಡಿದರೆ ಹಸಿರು ಬಣ್ಣದಿಂದ ಕೂಡಿರುತ್ತದೆ. ಶೇ.40ರಷ್ಟು ಓರೆ ಮಾಡಿದರೆ ನೀಲಿ ಬಣ್ಣವಾಗಿ ಮಿನುಗುತ್ತದೆ.
  • ಖೋಟಾನೋಟ್‍ನಲ್ಲಿ ಇದನ್ನ ಕಾಪಿ ಮಾಡಲು ಸಾಧ್ಯವಿಲ್ಲ, ಸಾಮಾನ್ಯವಾಗಿ ಒಂದು ನೋಟ್ ಖೋಟಾನೋಟ್ ಆಗಿದ್ದರೆ ಅದರ ಮೇಲಿನ ಚಿಹ್ನೆ ಹಾಗೂ ಅಕ್ಷರಗಳು ಅಸಲಿ ನೋಟಿನಷ್ಟು ಸ್ಪಷ್ಟತೆ ಇರುವುದಿಲ್ಲ.
  • ಸಾಮಾನ್ಯರು ವಿಶೇಷವಾಗಿ ನೋಟ್‍ಗಳನ್ನ ಒರೆಹಚ್ಚಿ ನೋಡಲು ಸಾಧ್ಯವಾಗದಿದ್ದರೂ ಕ್ಷಣಾರ್ಧದಲ್ಲಿ ನೋಟ್ ಮುಟ್ಟಿದಾಗ ಆಗುವ ಅನುಭವದಿಂದಲೇ ಕಂಡುಹಿಡಿಬಹುದು ಎಂದು ಎಸ್‌ಪಿ ಅಭಿನವ್‌ ಖರೆ ಮಾಹಿತಿ ನೀಡಿದರು.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ನಾಡಹಬ್ಬ

  ಪ್ರಮುಖ ನಗರಗಳು