• A
  • A
  • A
ಕ್ಯಾನ್ಸರ್‌, ಹೆಚ್ಐವಿಯಂತಹ ಮಾರಕ ರೋಗದ ನಿವಾರಣೆಗೆ ರಾಮಬಾಣ 'ಅಮೃತ ನೋನಿ ಹಣ್ಣು'

ಬೆಂಗಳೂರು : ಅಮೃತನೋನಿ ಹಣ್ಣು. ಹೆಸರೇ ಹೇಳುವಂತೆ ಇದು ಜೀವ ವರ್ಧಕ. ಕ್ಯಾನ್ಸರ್‌ನಂಥ ಮಾರಕ ರೋಗಗಳಿಂದ ಹಿಡಿದು ಆಧುನಿಕ ಒತ್ತಡದ ಜೀವನ ಶೈಲಿಯಿಂದ ಬರುವ ಬಹುತೇಕ ರೋಗಗಳ ನಿವಾರಣೆಗೆ ರಾಮ ಬಾಣವಾಗಿದೆ ಎಂದು ಶಿವಮೊಗ್ಗ ಜಿಲ್ಲೆಯ ಹೊಸಹಳ್ಳಿ ರಾಮೇನಕೊಪ್ಪದ ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ.


ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಾನಸಿಕ ಒತ್ತಡ, ಅಲರ್ಜಿ, ಆಮವಾತ, ಆಸ್ತಮಾ, ಕ್ಯಾನ್ಸರ್, ಗಂಟುನೋವು, ಕೂದಲು ಉದುರುವಿಕೆ, ಮೂತ್ರ ಜನಕಾಂಗದ ಕಾಯಿಲೆ, ಸಕ್ಕರೆ ಕಾಯಿಲೆ, ಕ್ಷಯ, ಚರ್ಮದ ರೋಗಗಳನ್ನೆಲ್ಲ ನಿರ್ಮೂಲನೆ ಮಾಡುವ 150ಕ್ಕೂ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ನೋನಿ ಹಣ್ಣು ಇನ್ನು ಉದ್ಯಾನನಗರಿಯಲ್ಲೂ ಸಿಗಲಿದೆ. ಕರಾವಳಿಯ ಕೆಲವೇ ಕೆಲವು ಪ್ರದೇಶ, ಗೊಂಡಾರಣ್ಯಗಳು, ದ್ವೀಪ ರಾಷ್ಟ್ರಗಳಲ್ಲಷ್ಟೇ ಸಿಗುತ್ತಿದ್ದ ಅಮೃತನೋನಿ ಹಣ್ಣು ಮತ್ತು ನೋನಿ ಗಿಡಗಳು ಇನ್ನು ಬೆಂಗಳೂರಿನಲ್ಲೂ ಸಿಗಲಿವೆ. ವಿವಿಧ ರೋಗಗಳ ಬಾಧೆಯಿಂದ ಜರ್ಝರಿತರಾಗಿರುವ ನಗರವಾಸಿಗಳ ಪಾಲಿನ ಅಮೃತವಾಗಿ ಈ ಹಣ್ಣು ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.


ಅಮೃತ ನೋನಿ ಮೂಲತಃ ಭಾರತದ ಔಷಧೀಯ ಹಣ್ಣು. ಪ್ರಕೃತಿಯಲ್ಲಿ ದೊರೆಯುವ ಅದ್ಭುತ ಆರೋಗ್ಯ ವರ್ಧಕ ಹಾಗೂ ರೋಗ ನಿರೋಧಕ. ಇದು ಮೊರಿಂಡಾ ಸಿಟ್ರಿಪೋಲಿಯ ಎಂಬ ಸಸ್ಯ ಪ್ರಭೇದಕ್ಕೆ ಸೇರಿದ್ದು ಭಾರತದ ಮಲ್ಬರಿ ಎಂದೂ ಕರೆಯುತ್ತಾರೆ. ಇದು ಪೊದೆಯ ರೂಪದಲ್ಲಿ ಬೆಳೆಯುವ ಗಿಡವಾಗಿದ್ದು, ಸುಮಾರು 10ರಿಂದ 12 ಅಡಿ ಎತ್ತರ ಬೆಳೆಯುತ್ತದೆ. ಗಿಡವೊಂದು ಸರಾಸರಿ 20 ಕೆ.ಜಿ.ಯಷ್ಟು ನೋನಿ ಹಣ್ಣುಗಳನ್ನು ನೀಡುತ್ತದೆ. ಅಮೃತ ನೋನಿ ಹಣ್ಣಿನ ಔಷಧೀಯ ಗುಣಗಳ ಬಗ್ಗೆ ವಿಶ್ವದ 40ಕ್ಕೂ ಹೆಚ್ಚು ವಿಶ್ವ ವಿದ್ಯಾಲಯಗಳಲ್ಲಿ ಸಂಶೋಧನೆಗಳು ನಡೆದಿವೆ. ಈಗಲೂ ಸಂಶೋಧನೆಗಳು ನಡೆಯುತ್ತಿವೆ. ಈ ಹಣ್ಣಿಗೆ ಸಂಸ್ಕೃತದಲ್ಲಿ ಆಯುಷ್ಕ ಎಂಬ ಹೆಸರಿದೆ. ಆಯುಷ್ಕ ಎಂದರೆ ಆಯಸ್ಸನ್ನು ವೃದ್ಧಿಸುವುದು ಎಂದು ವಿವರಿಸಿದರು.

ಔಷಧವಾಗಿ ಮಾತ್ರವಲ್ಲದೆ ಜೀವ ವರ್ಧಕವಾಗಿಯೂ ಈ ಹಣ್ಣನ್ನು ಬಳಸಬಹುದು. ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು, ಮಾನಸಿಕ ಶಾಂತಿ ಕಾಯ್ದುಕೊಳ್ಳಲು, ಚೆನ್ನಾಗಿ ನಿದ್ರಿಸಲು, ಲವಲವಿಕೆಯಿಂದ ಇರಲು, ದೇಹವನ್ನು ವಿಷಾಂಶಗಳಿಂದ ಮುಕ್ತಗೊಳಿಸಲು ನೋನಿ ಹಣ್ಣು ಉಪಯುಕ್ತ. ಉಸಿರಾಟದ ಸಮಸ್ಯೆ, ಮಲಬದ್ಧತೆ, ರಕ್ತದೊತ್ತಡ ನಿಯಂತ್ರಣಕ್ಕೂ ಅಮೃತ ನೋನಿ ಬಳಕೆಯಲ್ಲಿದೆ. ಕೀಲು ನೋವು, ಹೃದಯ ಸಂಬಂಧಿ ಕಾಯಿಲೆಗಳು, ಖಿನ್ನತೆಗೂ ನೋನಿ ಸೇವನೆ ಪರಿಣಾಮಕಾರಿ ಎಂಬುದು ಸಂಶೋಧನೆಗಳಲ್ಲಿ ದೃಢಪಟ್ಟಿದೆ. ಈ ಹಣ್ಣಿನಲ್ಲಿರುವ ರಾಸಾಯನಿಕಗಳಾದ ಝರೋನಿನ್, ಡೆಮಾನ್ ಕೆಂತಾಲ್ ಮುಂತಾದವುಗಳು ಪಿತ್ಥಜನಕಾಂಗ (ಲಿವರ್), ಹೃದಯ, ಮೂತ್ರಜನಕಾಂಗದ ಕಾರ್ಯನಿರ್ವಹಣೆ ಸುಗಮವಾಗಿರುವಂತೆ ನೋಡಿಕೊಳ್ಳಲು ನೆರವಾಗುತ್ತವೆ. ನೋವು ನಿವಾರಕವಾಗಿಯೂ ಈ ಹಣ್ಣು ಬಹಳ ಪರಿಣಾಮಕಾರಿ ಔಷಧ. ಹೆಚ್
ಐವಿ ಏಡ್ಸ್ ನಿಯಂತ್ರಣಕ್ಕೂ ವೈದ್ಯರು ಔಷಧವಾಗಿ ಶಿಫಾರಸು ಮಾಡುತ್ತಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು