• A
  • A
  • A
ವಾಹನ ಸವಾರರಿಗೊಂದು ಗುಡ್‌ ನ್ಯೂಸ್‌... ಮೊಬೈಲ್‌ನಲ್ಲೇ ತೋರಿಸಬಹುದು ವಾಹನ ದಾಖಲೆ

ಬೆಂಗಳೂರು : ವಾಹನ ಸವಾರರಿಗೆ ಒಂದು ಸಿಹಿ ಸುದ್ದಿ… ಇನ್ನುಮುಂದೆ ವಾಹನ ಸವಾರರು ತಮ್ಮ ದಾಖಲೆಗಳನ್ನು ಮೊಬೈಲ್ ನಲ್ಲೇ ತೋರಿಸಬಹುದು.


ವಾಹನಗಳ ದಾಖಲೆಯನ್ನು ಸಂಗ್ರಹಿಸಿಡುವ ಡಿಜಿ (ಡಿಜಿಟಲ್) ಲಾಕರ್ ಆಪ್‌ಗೆ ಸಾರಿಗೆ ಇಲಾಖೆ ಅಧಿಕೃತ ಮಾನ್ಯತೆ ನೀಡಿದೆ. ಇದರಿಂದಾಗಿ ಇನ್ಮುಂದೆ ಸಂಚಾರ ಪೊಲೀಸರು, ಸಾರಿಗೆ ಇಲಾಖೆ ಅಧಿಕಾರಿಗಳು ವಾಹನಗಳನ್ನು ಅಡ್ಡಹಾಕಿ ದಾಖಲೆ ಕೇಳಿದರೆ ಸವಾರರು/ಚಾಲಕರು ಮೊಬೈಲ್‌ನಲ್ಲಿರುವ ದಾಖಲೆ ತೋರಿಸಿ ದಂಡ ಕಟ್ಟುವುದರಿಂದ ಪಾರಾಗಬಹುದು.


ಈ ಸಂಬಂಧ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ ಸ್ಮಾರ್ಟ್‌ಕಾರ್ಡ್ ಅಥವಾ ಕಾಗದ ರೂಪದ ದಾಖಲೆಗಳಿಗೆ ಡಿಜಿಟಲ್ ದಾಖಲೆ ಸಮಾನ ಎಂಬುದನ್ನು ಉಲ್ಲೇಖಿಸಲಾಗಿದೆ. ಸದ್ಯ ಇಲಾಖೆ ಡಿಜಿಲಾಕರ್ ಆಪ್‌ನಲ್ಲಿ ಚಾಲನಾ ಪರವಾನಗಿ (ಡಿಎಲ್), ನೋಂದಣಿ ಪತ್ರ (ಆರ್‌ಸಿ) ಮತ್ತು ವಾಯುಮಾಲಿನ್ಯ ಪ್ರಮಾಣಪತ್ರದ ಡಿಜಿಟಲ್ ಪ್ರತಿ ಲಭ್ಯವಿದೆ.

ಈ ಎಲ್ಲ ಮಾಹಿತಿ ಆಧಾರ್ ಮತ್ತು ಸಾರಿಗೆ ಇಲಾಖೆ ಡಟಾಬೇಸ್‌ಗೆ ಜೋಡಿಸಲ್ಪಟ್ಟಿದ್ದು, ಇಲಾಖೆ ಡಿಜಿಟಲ್ ದಾಖಲೆಗಳನ್ನು ಪ್ರಮಾಣೀಕರಿಸಿದೆ. ವಿಮೆಯ ಪತ್ರವೂ ಡಿಜಿಟಲ್ ರೂಪದಲ್ಲಿ ಆಪ್‌ನಲ್ಲೇ ಲಭ್ಯವಾಗುವಂತೆ ಇಲಾಖೆ ಪ್ರಕ್ರಿಯೆ ಪ್ರಾರಂಭಿಸಿದೆ ಎಂದು ಸಾರಿಗೆ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಅಧಿಕಾರಿಗಳು ಕಾನೂನು ರೀತಿ ಡಿಎಲ್ ಮತ್ತು ಆರ್‌ಸಿ ಜಪ್ತಿ ಮಾಡಬೇಕಾದ ಪ್ರಕರಣಗಳಲ್ಲಿ ದಾಖಲೆಯ ಮೂಲ ಪ್ರತಿ ಅಗತ್ಯವಾಗಿರಲಿದೆ. ಕುಡಿದು ಚಾಲನೆ ಮಾಡುವುದು, ಅಜಾಗರೂಕ ಚಾಲನೆ ಮುಂತಾದ ಸಂದರ್ಭಗಳಲ್ಲಿ ಸಂಚಾರಿ ಪೊಲೀಸರು ಡಿಎಲ್ ಜಪ್ತಿ ಮಾಡುತ್ತಾರೆ. ಡಿಜಿಲಾಕರ್ ಆಪ್ ಮಾನ್ಯ ಮಾಡಿರುವ ಬಗ್ಗೆ ಸಂಚಾರಿ ಪೊಲೀಸ್ ಇಲಾಖೆಗೂ ಮಾಹಿತಿ ನೀಡಲಾಗಿದೆ. ಇನ್ನು ಮುಂದೆ ಮೊಬೈಲ್‌ನಲ್ಲೇ ವಾಹನಗಳ ದಾಖಲೆ ತೋರಿಸಬಹುದು ಎಂದು ಅವರು ಹೇಳಿದ್ದಾರೆ.

ಇದರಿಂದಾಗುವ ಅನುಕೂಲತೆಗಳೇನು? : ಡಿಜಿಟಲ್ ಮಾದರಿಯಲ್ಲಿ ದಾಖಲೆಗಳು ಸಿಗುತ್ತವೆ. ದಾಖಲೆಗಳು ಕಳೆದುಹೋಗುವ ಭಯವಿರುವುದಿಲ್ಲ. ಇ-ಆಧಾರ್ ಡಿಜಿಲಾಕರ್‌‌ನಲ್ಲೇ ಸಿಗಲಿದೆ. ಇನ್ನು ಈ ಸೇವೆ ಬಳಸಲು ಸ್ಮಾರ್ಟ್ ಫೋನ್, ಇಂಟರ್ ನೆಟ್ ಅಗತ್ಯವಿದೆ. ಆಧಾರ್ ಸಂಖ್ಯೆ ಇಲ್ಲದವರಿಗೆ ಈ ಸೇವೆ ಸಿಗುವುದಿಲ್ಲ.
ದಾಖಲೆ ಪಡೆಯುವುದೇಗೆ? :

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಡಿಜಿಲಾಕರ್ ಆಪ್ ಡೌನ್‌ಲೋಡ್ ಮಾಡಬೇಕು. ಸೈನ್ ಅಪ್ ಆಯ್ಕೆ ಒತ್ತಿ, ಹೊಸ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಹಾಕಿ, ಆಧಾರ್ ಸಂಖ್ಯೆ ನಮೂದಿಸಿ (ಈ ಮಾಹಿತಿ ಗೌಪ್ಯವಾಗಿಡಿ), ಇಷ್ಯೂಡ್ ಡಾಕ್ಯುಮೆಂಟ್ ಆಯ್ಕೆ ಒತ್ತಿ ಅಲ್ಲಿ ಸರ್ಚ್‌ನಲ್ಲಿ ಸಾರಿಗೆ ಇಲಾಖೆ- ಕರ್ನಾಟಕ ಸರ್ಕಾರ’(ಟ್ರಾನ್ಸ್‌ಪೋರ್ಟ್ ಡಿಪಾರ್ಟ್‌ಮೆಂಟ್) ಆಯ್ಕೆ ಮಾಡಿ, ಪ್ರಸ್ತುತ ಡಿಎಲ್, ಆರ್‌ಸಿ ಮತ್ತು ಮಾಲಿನ್ಯ ಪ್ರಮಾಣಪತ್ರವನ್ನಷ್ಟೇ ಇಲ್ಲಿ ಪಡೆಯಬಹುದಾಗಿದೆ.

ಡಿಜಿಟಲ್ ಡಿಎಲ್ ಪಡೆಯಲು ನಿಮ್ಮ ಡಿಎಲ್ ಸಂಖ್ಯೆ ನಮೂದಿಸಿ, ಆರ್‌ಸಿ ಪಡೆಯಲು ನೋಂದಣಿ ಸಂಖ್ಯೆ, ಚಾರ್ಸಿ ಸಂಖ್ಯೆ ನಮೂದಿಸಬೇಕು.ಗಾಡಿ ನಿಮ್ಮ ತಂದೆ, ಅಣ್ಣ ಅಥವಾ ತಾಯಿಯ ಹೆಸರಲ್ಲಿ ನೋಂದಣಿಯಾಗಿದ್ದರೆ ಅವರ ಡಿಎಲ್ ಸಂಖ್ಯೆ, ಹೆಸರು ನಮೂದಿಸಿದರಷ್ಟೇ ಡಿಜಿಟಲ್ ಆರ್‌ಸಿ ಸಿಗಲಿದೆ. ವಾಯು ಮಾಲಿನ್ಯ ಪ್ರಮಾಣಪತ್ರ ಪಡೆಯಲು ಕೇವಲ ವಾಹನದ ಸಂಖ್ಯೆ ನಮೂದಿಸಿದರೆ ಸಾಕು ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು