• A
  • A
  • A
ದರ್ಶನ್ ದುಬಾರಿ ಬೆಲೆಯ 'ಲ್ಯಾಂಬರ್ಗಿನಿ' ಏಕೆ ಖರೀದಿಸಿದರು ಗೊತ್ತಾ..? ಇಂಟ್ರೆಸ್ಟಿಂಗ್ ಸ್ಟೋರಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಬರೋಬ್ಬರಿ ಐದೂವರೆ ಕೋಟಿಯ ಲ್ಯಾಂಬರ್ಗಿನಿ ಕಾರು ಖರೀದಿಸಿದ್ದು, ಅದು ಅನೇಕರ ಕಣ್ಣು ಚುಚ್ಚಿದ್ದೂ ಆಯ್ತು.


ಆದರೆ ದರ್ಶನ್ ಲ್ಯಾಂಬರ್ಗಿನಿಯನ್ನೇ ಯಾಕೆ ತಗೊಂಡ್ರು ಗೊತ್ತಾ? ಇದರ ಹಿಂದೆ ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಇದೆ. ಸದ್ಯಕ್ಕೆ ದರ್ಶನ್ ನಟಿಸ್ತಿರೋ ಬಿಗ್ ಬಜೆಟ್ ಚಿತ್ರ ಎಂದರೆ ಕುರುಕ್ಷೇತ್ರ. ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ. ದರ್ಶನ್ ದುರ್ಯೋಧನನ ಪಾತ್ರ ನಿರ್ವಹಿಸಿದ್ರೆ ಮತ್ತೋರ್ವ ನಟ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್, ಅಭಿಮನ್ಯು ಪಾತ್ರ ಮಾಡ್ತಿದ್ದಾರೆ.

ನಿಖಿಲ್‌ ಬಳಿ ದುಬಾರಿ ಕಾರುಗಳ ದೊಡ್ಡ ಕಲೆಕ್ಷನ್ ಇದೆ. ಈ ವಿಷಯ ಎಲ್ರಿಗೂ ಗೊತ್ತಿರೋದೆ. ಕುರುಕ್ಷೇತ್ರ ಚಿತ್ರದ ಮೊದಲ ದಿನದ ಶೂಟಿಂಗ್‌‌ಗೆ ನಿಖಿಲ್ ತಮ್ಮ ಲ್ಯಾಂಬರ್ಗಿನಿ ಕಾರಲ್ಲಿ ಜುಮ್ ಅಂತ ಬಂದು ಇಳಿದ್ರಂತೆ. ಆಗ ಈ ಕಾರನ್ನು ಹತ್ತಿರದಿಂದ ನೋಡಿ ಗಮನಿಸಿದ ದಾಸ ಈ ಕಾರಿಗೆ ಫಿದಾ ಆಗಿ ಮರುದಿನವೇ ಲ್ಯಾಂಬರ್ಗಿನಿ ಕಾರ್ ಬುಕ್ ಮಾಡೇ ಬಿಟ್ರಂತೆ.‌

ದರ್ಶನ್ ಬಳಿಯೂ ದುಬಾರಿ ಕಾರುಗಳ ಕಲೆಕ್ಷನ್ ಇದ್ದೇ ಇದೆ. ಅದಕ್ಕೆ ಲ್ಯಾಂಬರ್ಗಿನಿ ಸೇರೋಕೆ ಕಾರಣ ಏನು ಎಂಬುದನ್ನು ತಿಳಿದ ಗಾಂಧಿನಗರ ಹುಬ್ಬೇರಿಸುತ್ತಿದೆಯಂತೆ.




CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ನಾಡಹಬ್ಬ

  ಪ್ರಮುಖ ನಗರಗಳು