• A
  • A
  • A
ಗಂಡನನ್ನು ಕೊಂದು ಗೋಣಿಚೀಲದಲ್ಲಿ ಸಾಗಿಸಿದ್ದ ಪ್ರಕರಣ... ಹೆಂಡತಿ, ಆಕೆಯ ಸ್ನೇಹಿತೆಗೆ ಜೀವಾವಧಿ ಶಿಕ್ಷೆ

ಬಾಗಲಕೋಟೆ: ಗಂಡನ ಕೊಲೆ ಮಾಡಿ ಗೋಣಿ ಚೀಲದಲ್ಲಿ ತುಂಬಿ ಸಾಗಿಸುವಾಗ ಸಿಕ್ಕಿಬಿದ್ದಿದ್ದ ಮಹಿಳೆ ಹಾಗೂ ಸಹಾಯ ಮಾಡಿದ್ದ ಮತ್ತೊಬ್ಬ ಮಹಿಳೆಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪಿತ್ತಿದೆ.


ಕೊಲೆ ಮಾಡಿದ ಆರೋಪದ ಮೇಲೆ ಶಿಲ್ಪಾ ಮೆಹರವಾಡೆ ಹಾಗೂ ಕೊಲೆಗೆ ಸಹಕರಿಸಿದ ಗಂಗಾ ಎನ್ನುವವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 50 ಸಾವಿರ ರೂ.ಗಳ ದಂಡ ವಿಧಿಸಿದೆ.


ಘಟನೆ ವಿವರ:

ಶಿಕ್ಷಗೊಳಗಗಿರುವ ಶಿಲ್ಪಾ ಮೂಲತಃ ಹುಬ್ಬಳ್ಳಿ ನಿವಾಸಿಯಾಗಿದ್ದು, ದಾವಣಗೆರೆಯ ವಿವೇಕ ಮೆಹರವಾಡೆ ಜೊತೆ ಮದುವೆಯಾಗಿತ್ತು. ದಂಪತಿ ಮುಧೋಳ ನಗರದಲ್ಲಿ ನೆಲೆಸಿದ್ದರು. ಶಿಲ್ಪಾಳಿಗೆ ಪರಪುರುಷರ ಜೊತೆ ಸಂಬಂಧ ಇದೆ ಎಂದು ವಿವೇಕ್‌‌ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ.





ಈ ಹಿನ್ನೆಲೆಯಲ್ಲಿ ತನ್ನ ಸ್ನೇಹಿತೆ ಜೊತೆ ಸೇರಿಕೊಂಡು ಗಂಡನಿಗೆ ಊಟದಲ್ಲಿ ವಿಷ ಬೆರೆಸಿ, ಅಸ್ವಸ್ಥನಾದ ಬಳಿಕ ಹಗ್ಗ ದಿಂದ ಕುತ್ತಿಗೆ ಬಿಗಿದು ಉಸಿರು ಗಟ್ಟಿಸಿ ಅಕ್ಟೋಬರ್ 15 , 2016 ರಂದು ಕೊಲೆ ಮಾಡಿದ್ದಳು. ನಂತರ ಗೋಣಿ ಚೀಲದಲ್ಲಿ ಮೃತ ದೇಹ ಸಾಗಿಸುತ್ತಿದ್ದ ಸಂದರ್ಭದಲ್ಲಿ ಇಬ್ಬರು ಸಿಕ್ಕಿ ಬಿದ್ದಿದ್ದರು.

ಈ ಬಗ್ಗೆ ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸೀನಪ್ಪ ಅವರು, ಕೊಲೆ ಮಾಡಿದ್ದಕ್ಕೆ ಜೀವಾವಧಿ ಶಿಕ್ಷೆ ಹಾಗೂ ತಲಾ 50 ಸಾವಿರ ರೂ.ದಂಡ,
ಹಾಗೂ ಸಾಕ್ಷಿ ನಾಶಪಡಿಸಿದ ಆರೋಪಕ್ಕೆ ಏಳು ವರ್ಷ ಶಿಕ್ಷೆ ಹಾಗೂ 25 ಸಾವಿರ ರೂ.ಗಳ ದಂಡ ಜೊತೆಗೆ ಕೊಲೆಯಾದ ವಿವೇಕ್‌ ತಾಯಿಗೆ ಇಬ್ಬರೂ ಸೇರಿ ಒಂದು ಲಕ್ಷ ರೂ.ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ನಾಡಹಬ್ಬ

  ಪ್ರಮುಖ ನಗರಗಳು