• A
  • A
  • A
ನಾಯಿ ಮರಿ ನುಂಗಿದ ನಾಗರಹಾವು... ಮುಂದೇನಾಯ್ತು ಗೊತ್ತಾ!?

ಧಾರವಾಡ: ಹಾವು ಕಪ್ಪೆಯನ್ನು ನುಂಗಿದ್ದನ್ನು ನಾವು ನೋಡಿದ್ದೇವೆ, ಅಷ್ಟೇ ಏಕೆ ಬೆಕ್ಕಿನ ಮರಿಯನ್ನೂ ನುಂಗಿದ ಉದಾಹರಣೆ ಇದೆ. ಆದರೆ, ನಾಗರ ಹಾವೊಂದು ನಾಯಿ ಮರಿಯನ್ನು ನುಂಗಲು ಬಂದಿದ್ದ ಅಪರೂಪದ ಘಟನೆಗೆ ಪೇಡಾನಗರಿ ಧಾರವಾಡ ಸಾಕ್ಷಿಯಾಗಿದೆ.

ಹೌದು! ಹೊಟ್ಟೆ ಹಸಿವು ತಾಳಲಾರದೇ ನಾಗರಹಾವು ನಾಯಿ ಮರಿಯನ್ನು ನುಂಗಲು ಬಂದ ಘಟನೆ ಇಲ್ಲಿನ ವೀರಭದ್ರೇಶ್ವರ ನಗರದಲ್ಲಿ ನಡೆದಿದೆ. ವೀರಭದ್ರೇಶ್ವರ ನಗರದಲ್ಲಿ ನಾಯಿಯೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ದೊಡ್ಡ ಗಾತ್ರದ ನಾಗರಹಾವು ಆಹಾರ ಅರಸುತ್ತ ನಾಯಿಮರಿಗಳು ಇದ್ದ ಜಾಗಕ್ಕೆ ಬಂದಿತ್ತು.ತನ್ನ ಹಸಿವು ನೀಗಿಸಿಕೊಳ್ಳಲು ಆ ನಾಗರಹಾವು ಮುದ್ದಾದ ಪುಟಾಣಿ ನಾಯಿಮರಿಯನ್ನೇ ಅರ್ಧ ಭಾಗದಷ್ಟು ನುಂಗಿ ಹಾಕಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಉರಗ ತಜ್ಞ ಯಲ್ಲಪ್ಪ ಜೋಡಳ್ಳಿ ಆ ನಾಯಿ ಮರಿಯನ್ನು ರಕ್ಷಣೆ ಮಾಡಿದರು.ನಾಗರಹಾವು ನಾಯಿ ಮರಿಯ ಅರ್ಧದಷ್ಟು ದೇಹವನ್ನು ನುಂಗಿದ್ದರೂ ಆ ನಾಯಿ ಮರಿ ತನ್ನ ಜೀವವನ್ನು ಹಿಡಿದುಕೊಂಡಿತ್ತು. ಯಲ್ಲಪ್ಪ ಅವರು ಹಾವಿನಿಂದ ನಾಯಿಮರಿಯನ್ನು ಬಿಡಿಸಿದಾಗ ನಾಯಿ ಮರಿ ನಿಟ್ಟುಸಿರು ಬಿಟ್ಟಿತು. ನಂತರ ಯಲ್ಲಪ್ಪ ಅವರು ದೊಡ್ಡ ಗಾತ್ರದ ಆ ನಾಗರಹಾವನ್ನು ಹಿಡಿದುಕೊಂಡು ಹೋಗಿ ಕಾಡಿಗೆ ಬಿಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು