• A
  • A
  • A
ಪ್ರಿಯಕರನ ಬಣ್ಣದ ಮಾತಿಗೆ ಮರಳಾಗಿ ಗಂಡ, ಮಗುವನ್ನೇ ಬಿಟ್ಟು ಬಂದ್ಲು... ಮುಂದಾಗಿದ್ದೇನು?

ಶಿವಮೊಗ್ಗ: ಅವರದ್ದು ಸುಖಿ ಕುಟುಂಬ. ಪತಿ, ಪತ್ನಿ ಹಾಗೂ ಒಂದು ಮಗುವಿದ್ದ ಚಿಕ್ಕ ಸಂಸಾರ. ಜೀವನ ನಿರ್ವಹಣೆಗೆ ಯಾವುದೇ ಕೊರತೆ ಇರಲಿಲ್ಲ. ಬರುತ್ತಿದ್ದ ಆದಾಯದಲ್ಲೇ ಉತ್ತಮ ಜೀವನ ಕಟ್ಟಿಕೊಂಡ ಕುಟುಂಬವದು. ಯಾವಾಗ ಈ ಕುಟುಂಬದಲ್ಲಿ ಸಂಬಂಧಿಕನೊಬ್ಬ ಎಂಟ್ರಿಕೊಟ್ಟನೋ ಆಗ ಆ ಸಂಸಾರದ ನೆಮ್ಮದಿಯೇ ಹಾಳಾಗಿತ್ತು. ಜತೆಗೆ ಮನೆಯ ಗೃಹಿಣಿಯೇ ಪ್ರಾಣ ಕಳೆದುಕೊಳ್ಳಬೇಕಾಯಿತು.


ಮಂಡ್ಯ ಮೂಲದ ಕೀರ್ತಿ(ಹೆಸರು ಬದಲಿಸಲಾಗಿದೆ) ಎಂಬ ಯುವತಿಯನ್ನು ಬೆಂಗಳೂರು ಮೂಲದ ಯುವಕನಿಗೆ ಕೊಟ್ಟು ಎರಡು ವರ್ಷದ ಹಿಂದೆ ಮದುವೆ ಮಾಡಲಾಗಿತ್ತು. ಇವರಿಗೆ ಒಂದು ವರ್ಷದ ಮಗುವೂ ಇತ್ತು. ಈ ಕುಟುಂಬ ಸಂತೋಷದಿಂದ ಜೀವನ ನಡೆಸುವಾಗ ಸಂಬಂಧಿಕನಾದ ಅನಿಲ ಎಂಬಾತ ಈ ಕುಟುಂಬದಲ್ಲಿ ಎಂಟ್ರಿ ಕೊಟ್ಟಿದ್ದ. ಅಂದಿಗೆ ಕುಟುಂಬದ ಸಂತೋಷವೆಲ್ಲಾ ಹಾಳಾಗಿ ಹೋಗಿತ್ತು.


ವರಸೆಯಲ್ಲಿ ದೊಡ್ಡಪ್ಪನ ಮಗನಾಗಿದ್ದ ಅನಿಲ ಕೀರ್ತಿ ಮೇಲೆಯೇ ಕಣ್ಣು ಹಾಕಿದ್ದ. ತನ್ನ ಬಣ್ಣದ ಮಾತುಗಳಿಂದ ಕೀರ್ತಿಯನ್ನು ಮರಳು ಮಾಡಿ ಆಕೆಯನ್ನು ಗಂಡ ಹಾಗೂ ಮಗುವಿನಿಂದ ದೂರಮಾಡಿ ಶಿವಮೊಗ್ಗ ಹೊರವಲಯದ ಲಕ್ಕಿನಕೊಪ್ಪಕ್ಕೆ ತಂದು ಬಾಡಿಗೆ ಮನೆಯಲ್ಲಿಟ್ಟಿದ್ದ. ಇದೀಗ ತಾನು ಮಾಡಿದ ತಪ್ಪಿಗೆ ಕೀರ್ತಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕರೆತಂದ...

ಕೀರ್ತಿಯನ್ನು ಗಂಡ ಮಗುವಿನಿಂದ ದೂರ ಮಾಡಿದ ಅನಿಲ ಆಕೆಯನ್ನು ಬೆಂಗಳೂರಿನಿಂದ ಕರೆತಂದು ಶಿವಮೊಗ್ಗ ಜಿಲ್ಲೆಯ ಲಕ್ಕಿನಕೊಪ್ಪದ ಬಾಡಿಗೆ ಮನೆಯಲ್ಲಿಟ್ಟಿದ್ದ. ಆರು ತಿಂಗಳಿನಿಂದಲೂ ಇಬ್ಬರೂ ಒಟ್ಟಿಗೆ ಇದ್ದರು. ಮೂರು ತಿಂಗಳ ಹಿಂದೆ ಕುಟುಂಬದವರು ಬಂದು ಇಬ್ಬರಿಗೂ ಬುದ್ಧಿ ಹೇಳಿ ಕೀರ್ತಿಯನ್ನು ಆಕೆಯ ತಾಯಿ ಕರೆದೊಯ್ದಿದ್ದರು. ಆದರೆ ಮತ್ತೆ ಕೆಲ ದಿನಗಳಲ್ಲೇ ಕೀರ್ತಿ ಮತ್ತೆ ಲಕ್ಕಿನಕೊಪ್ಪಕ್ಕೆ ಮರಳಿ ಬಂದು ಅನಿಲನೊಂದಿಗೆ ಬದುಕಲಾರಂಭಿಸಿದ್ದಳು. ಆದರೆ ಶನಿವಾರ ಮಧ್ಯರಾತ್ರಿ ಕೀರ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಕೀರ್ತಿಯ ಪಾಲಕರು ಅನಿಲನೇ ತಮ್ಮ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಂಚಕನ ಬಣ್ಣದ ಮಾತುಗಳಿಗೆ ಮರುಳಾದ ಕೀರ್ತಿ ಗಂಡ ಹಾಗೂ ತನ್ನ ಕರುಳ ಕುಡಿಯನ್ನೂ ಬಿಟ್ಟು ಬಂದಿದ್ದಳು. ಆದರೆ ಕೇವಲ ಆರೇ ತಿಂಗಳಲ್ಲಿ ಆಕೆ ಪ್ರಿಯಕರನ ಮನೆಯಲ್ಲಿ ಶವವಾಗಿ ಹೋಗಿದ್ದಾಳೆ. ಏನು ಅರಿಯದ ಹಸುಗೂಸು ತಬ್ಬಲಿಯಾಗಿದೆ. ಕೀರ್ತಿ ಸಾವಿಗೆ ಕಾರಣನಾಗಿ ತುಂಗಾ ನಗರ ಪೊಲೀಸರ ಅತಿಥಿಯಾಗಿರುವ ಅನಿಲನಿಗೆ ತಕ್ಕ ಶಿಕ್ಷೆಯಾಗಬೇಕು ಎಂಬುದು ಕೀರ್ತಿ ಪಾಲಕರ ಆಗ್ರಹವಾಗಿದೆ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು