• A
  • A
  • A
ಪಾಂಡ್ಯ, ರಾಹುಲ್​ಗೆ ಗೇಟ್​ಪಾಸ್... ಶುಭ್​ಮನ್​ ಗಿಲ್​​, ವಿಜಯ್ ಶಂಕರ್​ಗೆ ಛಾನ್ಸ್​!

ಹೈದರಾಬಾದ್​: ಟಿವಿ ಶೋವೊಂದರಲ್ಲಿ ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಕೆ.ಎಲ್​.ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ವೃತ್ತಿ ಬದುಕಿನ ಮೇಲೆ ದೊಡ್ಡ ಹೊಡೆತ ಬೀಳುವ ಲಕ್ಷಣ ಕಾಣಿಸುತ್ತಿದೆ.

ಕೃಪೆ: twitter

​ಪ್ರಸ್ತುತ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಕ್ಕೆ ಆಯ್ಕೆಯಾಗಿದ್ದ ಕೆ.ಎಲ್​.ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯರ ಪ್ರವಾಸ ಮೊಟಕುಗೊಳಿಸಿ, ಭಾರತಕ್ಕೆ ಬಂದು ವಿಚಾರಣೆಗೆ ಹಾಜರಾಗುವಂತೆ ಬಿಸಿಸಿಐ ಸೂಚಿಸಿದೆ. ಇನ್ನು ಈ ಇಬ್ಬರು ಆಟಗಾರರ ಸ್ಥಾನಕ್ಕೆ ಯುವ ಆಟಗಾರರನ್ನು ಬಿಸಿಸಿಐ ಘೋಷಿಸಿದೆ.
ಆಸೀಸ್​ ವಿರುದ್ಧದ ಇನ್ನುಳಿದ ಪಂದ್ಯಗಳಿಗೆ ಶುಭ್​ಮನ್​​ ಗಿಲ್ ಹಾಗೂ ವಿಜಯ್ ಶಂಕರ್​​ ತಂಡ ಸೇರಿಕೊಳ್ಳಲಿದ್ದಾರೆ.

ಕಿವೀಸ್​ ಪ್ರವಾಸಕ್ಕೂ ಗಿಲ್​, ಶಂಕರ್​ ಸೇರ್ಪಡೆ:
ಜನವರಿ 23ರಂದು ನ್ಯೂಜಿಲ್ಯಾಂಡ್​ನ ನೇಪಿಯರ್​​ನಲ್ಲಿ ಆರಂಭವಾಗಲಿರುವ ಕಿವೀಸ್​ ಪ್ರವಾಸದ ಏಕದಿನ ಹಾಗೂ ಟಿ-20 ಸರಣಿಗೂ ಶುಭ್​ಮನ್ ಗಿಲ್ ಹಾಗೂ ವಿಜಯ್ ಶಂಕರ್​​ ತಂಡದಲ್ಲಿರಲಿದ್ದಾರೆ.

ಐದು ಏಕದಿನದ ಬಳಿಕ ಫೆಬ್ರವರಿ 6ರಂದು ಶುರುವಾಗಲಿರುವ ಮೂರು ಟಿ-20 ಸರಣಿಗೂ ಈ ಯುವ ಆಟಗಾರರು ತಂಡಕ್ಕೆ ಆಯ್ಕೆಯಾಗಿದ್ದಾರೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು