• A
  • A
  • A
ಮೋದಿಗಿಂತ ಸ್ಟಾಲಿನ್​ ಬೆಸ್ಟ್​: ಚಂದ್ರಬಾಬು ನಾಯ್ಡು

ಚೆನ್ನೈ: ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್​ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ಒಳ್ಳೆಯ ನಾಯಕ ಎಂದು ಚಂದ್ರಬಾಬು ನಾಯ್ಡು ಅವರು ಅಭಿಪ್ರಾಯಪಟ್ಟಿದ್ದಾರೆ.


ಡಿಎಂಕೆ ನಾಯಕರ ಭೇಟಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸರಕಾರದ ವಿರುದ್ಧ ಸ್ಪರ್ಧಿಸಲಿರುವ ಪಕ್ಷಗಳ ಒಕ್ಕೂಟದಲ್ಲಿ ಬಹಳಷ್ಟು ನಾಯಕರಿದ್ದಾರೆ. ಡಿಎಂಕೆ ನಾಯಕ ಸ್ಟಾಲಿನ್​ ಅವರೂ ಕೂಡ ಪ್ರಧಾನಿ ನರೇಂದ್ರ ಮೋದಿ ಅವರಿಗಿಂದ ಉತ್ತಮ ನಾಯಕ ಎಂದು ತಿಳಿಸಿದರು.
ನಮ್ಮೆಲ್ಲ ಮುನಿಸುಗಳನ್ನು ಪಕ್ಕಕ್ಕಿಟ್ಟು ದೇಶದ ಹಾಗೂ ಪ್ರಜಾಪ್ರಭುತ್ವ ಉಳಿಯಬೇಕೆಂಬ ಕಾರಣದಿಂದ ನಾವೆಲ್ಲ ಕೈ ಜೋಡಿಸುತ್ತಿದ್ದೇವೆ. ದೇಶದ ರಕ್ಷಣೆ ದೃಷ್ಟಿಯಿಂದ ನಮ್ಮಲ್ಲಿರುವ ಎಲ್ಲ ಭಿನ್ನಾಭಿಪ್ರಾಯಗಳನ್ನು ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ.

ಚುನಾವಣೆಗೆ ಇನ್ನು ಆರು ತಿಂಗಳು ಉಳಿದಿರುವಾಗ ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳ ಒಕ್ಕೂಟ ಕಟ್ಟುವ ಸಾಹಸ ಫಲ ನೀಡಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನಾಯ್ಡು, ಎನ್​ಡಿಎ ಸರಕಾರದಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗಿಲ್ಲ. ಬ್ಯಾಂಕ್​ನಲ್ಲಿಟ್ಟಿರುವ ನಮ್ಮ ದುಡ್ಡನ್ನು ನಾವು ಡ್ರಾ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯರ ಜೀವನಕ್ಕೆ ತೊಂದರೆಯಾಗುತ್ತಿರುವುದರಿಂದ ಅವರೆಲ್ಲ ಮೋದಿ ಸರಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಖಂಡಿತವಾಗಿಯೂ ಜನ ನಮ್ಮ ಕೈ ಹಿಡಿಯುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ತಮಿಳುನಾಡು ಸರಕಾರದ ಬಗ್ಗೆ ನೀವು ಏನು ಹೇಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ ತಮಿಳುನಾಡಿನಲ್ಲಿ ಸರಕಾರ ಎಲ್ಲಿದೆ? ರಿಮೋಟ್​ ಕಂಟ್ರೋಲ್​ ಮೂಲಕ ದಿಲ್ಲಿಯಿಂದ ಆಡಳಿತ ನಡೆಸಲಾಗುತ್ತಿದೆ ಎಂದು ಕುಟುಕಿದರು.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು