• A
  • A
  • A
ಹೆಣ್ಮಕ್ಳೇ ನೈಟಿ ಹಾಕಿದ್ರೆ ಹುಷಾರ್​, ನಿಯಮ ಉಲ್ಲಂಘಿಸಿದರೆ ದಂಡ ಪಕ್ಕಾ

ಅಮರಾವತಿ​: ಆಂಧ್ರಪ್ರದೇಶದ ತೋಕಲಪಲ್ಲಿ ಪಂಚಾಯಿತಿಯು ಗ್ರಾಮದ ಮಹಿಳೆಯರು ನೈಟಿ ಧರಿಸುವುದಕ್ಕೆ ನಿಷೇಧ ಹೇರಿದ್ದು, ನಿಯಮ ಮೀರಿದರೆ 2 ಸಾವಿರ ರೂ. ದಂಡ ವಿಧಿಸಲೂ ತೀರ್ಮಾನಿಸಿದೆ.


ಈ ಆದೇಶದ ಪ್ರಕಾರ ಮಹಿಳೆಯರು ಸಂಜೆ 6 ಗಂಟೆಯಿಂದ ಬೆಳಗ್ಗೆ 8 ಗಂಟೆವರೆಗೆ ಮಾತ್ರ ನೈಟಿ ಧರಿಸಲು ಅವಕಾಶವಿದೆ. ನಿಯಮ ಮೀರಿ ನೈಟಿ ಧರಿಸಿದವರನ್ನು ಹಿಡಿದುಕೊಟ್ಟರೆ ಒಂದು ಸಾವಿರ ರೂಪಾಯಿ ಬಹುಮಾನ ಕೊಡುವುದಾಗಿಯೂ ಪಂಚಾಯಿತಿ ಘೋಷಿಸಿದೆ.

2400 ಮಹಿಳೆಯರಿರುವ ಈ ಊರಿನ ಯಾವೊಬ್ಬ ಹೆಂಗಸೂ ಪಂಚಾಯಿತಿ ಹೊರಡಿಸಿರುವ ಈ ಆದೇಶವನ್ನು ಪ್ರಶ್ನಿಸಿಲ್ಲ. ಕೆಲವು ಗ್ರಾಮಸ್ಥರು ನೈಟಿ ನಿಷೇಧ ಕುರಿತು ಡಂಗೂರ ಸಾರಿದ್ದಾರೆ.

ಸ್ಥಳೀಯ ವಾಹಿನಿಯಲ್ಲಿ ಪ್ರಸಾರವಾದ ಸುದ್ದಿಯನ್ನು ನೋಡಿದ ತಹಸೀಲ್ದಾರ್​ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ನೈಟಿ ರದ್ದು ಆದೇಶದ ಬಗ್ಗೆ ಯಾವುದೇ ಘರ್ಷಣೆಗಳು ನಡೆದಿಲ್ಲ.
ನೈಟಿ ಧರಿಸದಿರಲು ಮಹಿಳೆಯರೆಲ್ಲ ಒಮ್ಮತದ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತೋಕಲಪಲ್ಲಿ ಮಹಿಳೆಯ ಮಹಿಳೆಯರೊಬ್ಬರು ತಿಳಿಸಿದ್ದಾರೆ.
ನೈಟಿ ಪ್ರಕರಣ ಸಂಬಂಧ ನಾವು ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದೇವೆ. ನಮ್ಮ ಸಂಪ್ರದಾಯವನ್ನು ಉಳಿಸಲು ಮಾತ್ರ ಈ ಕ್ರಮ ಕೈಗೊಳ್ಳಲಾಗಿತ್ತು ಎಂದು ಗ್ರಾಮಸ್ಥ ಸತ್ಯನಾರಾಯಣ್​ ತಿಳಿಸಿದ್ದಾರೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು