• A
  • A
  • A
ಯಾರೂ ಶಬರಿಮಲೆಗೆ ಬರಬೇಡಿ... ಸಂಕಷ್ಟದಲ್ಲಿರುವ ಕನ್ನಡಿಗರ ಮನವಿ; ವಿಡಿಯೋ

ಪಂಬಾ(ಕೇರಳ): ವಿಶೇಷ ಪೂಜೆಯ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನಕ್ಕೆ ಸೋಮವಾರ ಸಂಜೆ ದೇವಸ್ಥಾನದ ಬಾಗಿಲು ತೆರೆಯಲಿದ್ದು, ಈಗಾಗಲೇ ಸಾವಿರಾರು ಭಕ್ತರು ಮಲೆಯತ್ತ ಧಾವಿಸಿದ್ದಾರೆ.


ಈ ಪೈಕಿ ಕನ್ನಡಿಗರೂ ಸೇರಿದ್ದು ತಮಗಾಗುತ್ತಿರುವ ತೊಂದರೆ ಕುರಿತು ಮಾತನಾಡಿದ್ದಾರೆ. ಅಸಮರ್ಪಕ ನಿರ್ವಹಣೆ, ಹಾಗೂ ಕೇರಳ ಸರ್ಕಾರದ ನಿರ್ಲಕ್ಷ್ಯವನ್ನು ಬೆಂಗಳೂರಿನಿಂದ ತೆರಳಿರುವ ಭಕ್ತರು ಆಕ್ರೋಶ ಹೊರಹಾಕಿದ್ದಾರೆ.
ಬಸ್​ ಸೌಲಭ್ಯ ಸರಿಯಾಗಿಲ್ಲ. ಜೊತೆಗೆ ಪೊಲೀಸರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎನ್ನುವ ಆರೋಪ ಭಕ್ತರದ್ದು. ಮಹಿಳಾ ಭಕ್ತಾದಿಗಳನ್ನು ನಿಷೇಧಿಸುವ ನೆಪದಲ್ಲಿ ನಮಗೆ ಯಾಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.


ಕೇರಳದ ವಾಹನಗಳಿಗೆ ತಕ್ಷಣವೇ ಅನುವು ಮಾಡಿಕೊಡುತ್ತಿದ್ದು, ಕರ್ನಾಟಕ ವಾಹನಗಳನ್ನು ವಿನಾಕಾರಣ ತಡೆಯೊಡ್ಡುತ್ತಿದ್ದಾರೆ ಎಂದು ಭಕ್ತಾದಿಗಳು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಿದ್ದಾರೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು