• A
  • A
  • A
ಬದಲಿ ವಿಕೆಟ್​ ಕೀಪರ್​ಗೆ ಈಗಿನಿಂದಲೇ ನಡೆಯುತ್ತಿದ್ಯಾ ಹಂಟಿಂಗ್​... ಇದು ಧೋನಿ ನಿವೃತ್ತಿ ಸೂಚನೆಯೇ!?

ಮುಂಬೈ: ಮುಂಬರುವ ಒನ್​ ಡೇ ಕ್ರಿಕೆಟ್​ ಟೂರ್ನಿಯ ಮೊದಲೆರಡು ಪಂದ್ಯಗಳಿಗೆ ರಿಷಭ್​ ಪಂತ್​ ಅವರನ್ನ ಆಯ್ಕೆ ಮಾಡಲಾಗಿದೆ. ಈ ಮೂಲಕ ರಿಷಭ್ ಪಂತ್​ ಅಕ್ಟೋಬರ್​ 21ರಿಂದ ಆರಂಭವಾಗುವ ಏಕದಿನ ಸರಣಿಯಲ್ಲಿ ಮೊದಲ ಬಾರಿಗೆ ಏಕದಿನ ಪಂದ್ಯ ಆಡುವ ಚಾನ್ಸ್ ಪಡೆದಿದ್ದಾರೆ.


ಇನ್ನೊಂದು ವಿಷಯ ಎಂದರೆ, ದಿನೇಶ್​ ಕಾರ್ತಿಕ್ ಜಾಗದಲ್ಲಿ ಆಯ್ಕೆ ಆಗಿರುವ ರಿಷಭ್​ ಪಂತ್ ಇಲ್ಲಿ ವಿಕೆಟ್ ಕೀಪಿಂಗ್ ಬದಲಿಗೆ ಬ್ಯಾಟ್ಸ್​ಮನ್​ ಆಗಿ ಕಣಕ್ಕಿಳಿಯಲಿದ್ದಾರೆ. ಇದು ವಿಶ್ವಕಪ್​ ಬಳಿಕ ಮಾಜಿ ನಾಯಕ ಧೋನಿ ಅವರ ವಿಕೆಟ್​ ಕೀಪಿಂಗ್​ ಜಾಗದಲ್ಲಿ ಹೊಸ ಆಟಗಾರರನ್ನು ಹುಡುಕುವ ಪ್ರಯತ್ನಕ್ಕೆ ಆಯ್ಕೆ ಸಮಿತಿ ಈಗಿನಿಂದಲೇ ಶುರು ಮಾಡಿದೆ ಎಂದು ಬಣ್ಣಿಸಲಾಗುತ್ತಿದೆ.
ಇಂಗ್ಲೆಂಡ್​ ವಿರುದ್ಧ ಟೆಸ್ಟ್ ಕ್ಯಾರಿಯರ್​ ಆರಂಭಿಸಿದ್ದ ರಿಷಭ್​ ಪಂತ್​ ಸೆಂಚುರಿ ಬಾರಿಸಿ ಗಮನ ಸೆಳೆದರೆ, ವೆಸ್ಟ್​ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್​ನಲ್ಲಿ 92 ರನ್​ ಗಳಿಸಿ ಮಿಂಚಿದ್ದರು. ಇದು ಆಯ್ಕೆ ಸಮಿತಿಯನ್ನ ಇಂಪ್ರೆಸ್​ ಮಾಡಿದೆ.


ಇನ್ನು ವಿಶ್ವಕಪ್​ಗೆ ಕೇವಲ 9 ತಿಂಗಳು ಬಾಕಿ ಇರುವಾಗಲೇ ತಂಡಕ್ಕೆ ಹೊಸ ಮುಖಗಳನ್ನ ಪರಿಚಯಿಸುವತ್ತ ಆಯ್ಕೆ ಸಮಿತಿ ದೃಷ್ಟಿ ಹರಿಸಿದೆ. ಈ ಬಗ್ಗೆ ಮಾತನಾಡಿದ, ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್​, ಖಂಡಿತವಾಗಿ ಅವಶ್ಯ ಬಿದ್ದಲ್ಲಿ ರಿಷಭ್​ ಪಂತ್​ ಬ್ಯಾಕಪ್​ ಕೀಪರ್​ ಆಗಲಿದ್ದಾರೆ ಎಂದಿದ್ದಾರೆ.

ಅವರ ಈ ಮಾತು ಮಾಜಿ ನಾಯಕ, ವಿಕೆಟ್​ ಕೀಪರ್​ಗೆ ಭಾರತ ತಂಡ ಪರ್ಯಾಯ ಆಟಗಾರನ ಹುಡುಕಾಟದಲ್ಲಿ ತೊಡಗಿಸಿಕೊಂಡಿದೆ ಎಂಬುದನ್ನ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು