• A
  • A
  • A
ಒಂದೇ ಕುಟುಂಬದ 9 ಮಕ್ಕಳು ತೀವ್ರ ಅಸ್ವಸ್ಥ: ಇದಕ್ಕೆ ಮ್ಯಾಗಿ ನೂಡಲ್ಸ್​ ಕಾರಣವಾಯ್ತೇ?

ಛತಪುರ್​: ಇನ್ಸ್​ಟ್ಯಾಂಟ್​ ನೂಡಲ್ಸ್​ ತಿಂದ ಒಂದೇ ಕುಟುಂಬದ 9 ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡು, ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.


ಹತ್ತಿರದ ಅಂಗಡಿಯಿಂದ ಖರೀದಿಸಿ ತಂದಿದ್ದ ನೂಡಲ್ಸ್​ ತಿಂದ ನಂತರವೇ 9 ಮಕ್ಕಳು ಅಸ್ವಸ್ಥರಾದರು ಎಂದು ಕುಟುಂಬದವರು ಆರೋಪಿಸಿದ್ದಾರೆ. ಅಸ್ವಸ್ಥಗೊಂಡ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು, ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಗ್ವಾಲಿಯರ್ ಮೆಡಿಕಲ್​ ಕಾಲೇಜಿಗೆ ಕರೆದೊಯ್ಯಲಾಗಿದೆ.
5 ರೂ. ಬೆಲೆಯ 8 ಮ್ಯಾಗಿ ನೂಡಲ್ಸ್​ ಪ್ಯಾಕೇಟುಗಳನ್ನು ಮಕ್ಕಳು ತಂದಿದ್ದರು. ಅದನ್ನು ತಿಂದ ನಂತರ ಅಸ್ವಸ್ಥರಾಗಿ ಒದ್ದಾಡಿದರು. ಅವರನ್ನು ಛತಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯರು ಇಲ್ಲದ ಕಾರಣ ಕೆಲ ಕಾಲ ಕಾಯಲು ಹೇಳಿದರು. ನಂತರ ಗ್ವಾಲಿಯರ್​ ಮೆಡಿಕಲ್​ ಕಾಲೇಜಿಗೆ ಕರೆದೊಯ್ಯುವಂತೆ ಸೂಚಿಸಿದರು ಎಂದು ಮಕ್ಕಳ ತಂದೆ ರಾಮ್​ಕೃಷ್ಣ ಹೇಳಿದ್ದಾರೆ.

ಆ ಮಕ್ಕಳ ಅಜ್ಜಿಯೂ ಸಹ ಮ್ಯಾಗಿ ತಿಂದು ಅಸ್ವಸ್ಥರಾಗಿದ್ದರು, ತದನಂತರ ಅವರಿಗೆ ಪ್ರಜ್ಞೆ ಬಂದಿತು ಎಂದು ಅವರು ತಿಳಿಸಿದ್ದಾರೆ. ನೂಡಲ್ಸ್​ ತಿಂದ ನಂತರವೇ ಹೀಗಾದ್ದರಿಂದ ಅದರ ಉತ್ಪಾದಕ ಕಂಪನಿ ನೆಸ್ಲೆ ಇಂಡಿಯಾ ಬಗ್ಗೆ ಆರೋಪಗಳು ಕೇಳಿಬಂದಿವೆ.

ಆದರೆ, ನೆಸ್ಲೆ ಕಂಪನಿ ಈ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ. ಅಸ್ವಸ್ಥಗೊಂಡ ಮಕ್ಕಳ ಬಗ್ಗೆ ಕನಿಕರವಿದ್ದು, ಅವರು ಶೀರ್ಘ ಗುಣಮುಖರಾಗಲೆಂದು ಬಯಸುತ್ತೇವೆ. ಆದರೆ ಕಂಪನಿಯ ಮೇಲೆ ಮಾಡಿರುವ ಆರೋಪವನ್ನು ಒಪ್ಪುವುದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ಈ ಪ್ರಕರಣದಲ್ಲಿ ಕಂಪನಿಯ ಬ್ರಾಂಡ್​ ಕಾರಣವಲ್ಲ ಎಂಬುದು ಖಚಿತ ಎಂದು ಕಂಪನಿಯ ವಕ್ತಾರ ಸಮರ್ಥಿಸಿಕೊಂಡಿದ್ದಾರೆ.

ಈ ಬಗ್ಗೆ ವೈದ್ಯರೂ ಸಹ ಆತಂಕ ವ್ಯಕ್ತಪಡಿಸಿದ್ದು, ನೂಡಲ್ಸ್​ನಿಂದಾಗಿ 2-3 ಮಕ್ಕಳ ಜ್ಞಾಪಕಶಕ್ತಿ ಮೇಲೆ ಸಹ ಪರಿಣಾಮ ಉಂಟಾಗಲಿದೆ. ಮಕ್ಕಳಲ್ಲಿ ಮಾನಸಿಕ ಅಸ್ವಸ್ಥತೆಯೂ ಸಹ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು