• A
  • A
  • A
ದೀಪಕ್​ ಚಹಾರ್​ ಎಂದಿಗೂ ಕ್ರಿಕೆಟರ್​ ಆಗೋದಿಲ್ಲ ಎಂದಿದ್ರಂತೆ ಆ ಕೋಚ್​!

ಮುಂಬೈ: ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಪರ ಅದ್ಭುತ ಪ್ರದರ್ಶನ ನೀಡಿ ಟೀಂ ಇಂಡಿಯಾಗೆ ಆಯ್ಕೆಗೊಂಡಿರುವ ವೇಗದ ಬೌಲರ್​ ದೀಪಕ್​ ಚಹಾರ್​ ಕುರಿತು ಭಾರತದ ಮಾಜಿ ಆಟಗಾರ ಆಕಾಶ್​ ಚೋಪ್ರಾ ಮಹತ್ವದ ಮಾಹಿತಿವೊಂದನ್ನ ಬಹಿರಂಗಗೊಳಿಸಿದ್ದಾರೆ.


ಫೇಸ್​ಬುಕ್​​ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಆಕಾಶ್​ ಚೋಪ್ರಾ, ದೀಪಕ್​ ಚಹಾರ್​ ಎಂದಿಗೂ ಕ್ರಿಕೆಟರ್​​ ಆಗುವುದಿಲ್ಲ ಎಂದು ಟೀಂ ಇಂಡಿಯಾ ಮಾಜಿ ಕೋಚ್​ ಗ್ರೇಗ್​ ಚಾಪೆಲ್​ ಹೇಳಿದ್ದರು. ಇದರಿಂದ ಚಹಾರ್​​ ಕೆಲ ದಿನಗಳ ಕಾಲ ಆತ್ಮವಿಶ್ವಾಸ ಕಳೆದುಕೊಂಡಿದ್ದರು ಎಂದು ಅವರು ಹೇಳಿದ್ದಾರೆ.
ಯುವ ಕ್ರಿಕೆಟಿಗನಾಗಿದ್ದಾಗ ದೀಪಕ್​ ಚಹಾರ್​​, ರಾಜಸ್ಥಾನದ ಹನುಮನಗರದಲ್ಲಿ ಅಭ್ಯಾಸ ನಡೆಸುತ್ತಿದ್ದರು. ಆ ವೇಳೆ ರಾಜಸ್ತಾನ ಕ್ರಿಕೆಟ್​ ಅಕ್ಯಾಡೆಮಿಗೆ ಚಾಪೆಲ್ ಭೇಟಿ ನೀಡಿದ್ದರು. ಇದೇ ವೇಳೆ, ಚಾಪಲ್​ ಅಲ್ಲಿನ ಕ್ರಿಕೆಟಿಗರೊಂದಿಗೆ ಸಂವಾದ ನಡೆಸಿದ್ದರು. ಆ ವೇಳೆ ದೀಪಕ್​ ಚಹಾರ್​ ಕುರಿತು, ನೀನು ಕ್ರಿಕೆಟ್​ ಆಡುವುದನ್ನ ಬಿಟ್ಟು ಬಿಡು. ಯಾವುದೇ ಕಾರಣಕ್ಕೂ ನೀನು ಟೀಂ ಇಂಡಿಯಾಗೆ ಆಯ್ಕೆಯಾಗುವುದಿಲ್ಲ. ಜತೆಗೆ ನಿನ್ನೊಬ್ಬ ಉತ್ತಮ ಕ್ರಿಕೆಟರ್​ ಆಗಲು ಸಾಧ್ಯವಿಲ್ಲ ಎಂದಿದ್ದರು ಎನ್ನೋ ಮಾಹಿತಿ ಹೊರ ಹಾಕಿದರು.

ಕಳೆದ ಐಪಿಎಲ್​​ನಲ್ಲಿ ಸಿಎಸ್​ಕೆ ಪರ ಆಡಿರುವ ಚಹಾರ್​, ಆಡಿರುವ 12 ಪಂದ್ಯಗಳಿಂದ 10ವಿಕೆಟ್​ ಪಡೆದುಕೊಂಡು ಗಮನ ಸೆಳೆದಿದ್ದರು. ಸದ್ಯ ಇಂಡಿಯಾ ಎ ತಂಡದಲ್ಲಿ ಆಡುತ್ತಿದ್ದ ಚಹರ್​, ಬೂಮ್ರಾ ಹೊರಬಿದ್ದಿರುವ ಕಾರಣ ಟಿ20 ಸರಣಿಗಾಗಿ ಇಂಡಿಯಾ ತಂಡಕ್ಕೆ ಆಯ್ಕೆಗೊಂಡಿದ್ದಾರೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು