• A
  • A
  • A
ಉಗ್ರ ಸಮೀರ್‌‌ ಟೈಗರ್‌ ಎನ್‌‌ಕೌಂಟರ್‌‌ನಲ್ಲಿ ಭಾಗಿಯಾಗಿದ್ದ ಭಾರತೀಯ ಯೋಧನ ಅಪಹರಣ,ಹತ್ಯೆ

ಶ್ರೀನಗರ: ಕಳೆದ ಮೇ ತಿಂಗಳಲ್ಲಿ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್‌ ಉಗ್ರ ಸಮೀರ್ ಟೈಗರ್‌ನ ಎನ್‌‌ಕೌಂಟರ್‌‌ನಲ್ಲಿ ಭಾಗಿಯಾಗಿದ್ದ ಭಾರತೀಯ ಸೇನಾ ಪಡೆಯ ಯೋಧನನ್ನು ಅಪಹರಿಸಲಾಗಿದೆ.


ಯೋಧ ಔರಂಗಜೇಜ್ ಅವರು 44ನೇ ರಾಷ್ಟ್ರೀಯ ರೈಫಲ್ಸ್‌‌‌ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕೆಲಸ ಮುಗಿಸಿ ಮನೆಗೆ ಖಾಸಗಿ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಪುಲ್ವಾಮಾದಲ್ಲಿ ಅವರನ್ನು ಶಸ್ತ್ರ ಸಜ್ಜಿತ ಉಗ್ರರ ತಂಡ ಅಪಹರಿಸಿದೆ ಎಂದು ತಿಳಿದುಬಂದಿದೆ. ಇವರು ಕಾಶ್ಮೀರದ ಪೂಂಚ್‌‌ನಲ್ಲಿ ನೆಲೆಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ರಮಕೈಗೊಂಡಿರುವುದಾಗಿ ತಿಳಿದು ಬಂದಿದೆ.


ಕಳೆದ ಮೇ ತಿಂಗಳಲ್ಲಿ ಮೋಸ್ಟ್ ವಾಂಟೆಡ್ ಉಗ್ರ ಸಮೀರ್ ಟೈಗರ್ ಹಾಗೂ ಮತ್ತೋರ್ವ ಉಗ್ರನನ್ನು ಭಾರತೀಯ ಪಡೆ ಹತ್ಯೆ ಮಾಡಿತ್ತು.

ಇನ್ನು ಯೋಧ ಔರಂಗಜೇಬ್‌ರನ್ನು ಅಪಹರಿಸಿದ್ದ ಉಗ್ರರು ಅವರನ್ನು ಹತ್ಯೆ ಮಾಡಿದ್ದಾರೆ. ಯೋಧ ಔರಂಗಜೇಬ್‌ ಶವ ಪುಲ್ವಾಮದ ಬಳಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು