• A
  • A
  • A
ಬರುವ ಐಪಿಎಲ್‌ಗಾಗಿ ಆರ್‌ಸಿಬಿ ತಯಾರಿ... ಈ ಮೂವರು ಕ್ರಿಕೆಟರ್ಸ್‌ಗೆ ಗೇಟ್‌ಪಾಸ್‌!?

ಹೈದರಾಬಾದ್‌: ಪ್ರಸಕ್ತ ಸಾಲಿನ ಇಂಡಿಯನ್‌ ಪ್ರೀಮಿಯರ್‌ ಲೀಗ್‌‌ನಲ್ಲಿ ಕಪ್‌‌ ನಮ್ದೇ ಎಂಬ ಘೋಷ ವಾಖ್ಯದೊಂದಿಗೆ ಮೈದಾನಕ್ಕಿಳಿದಿದ್ದ ಆರ್‌ಸಿಬಿ ತಂಡ ಲೀಗ್‌ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದು, ಅಭಿಮಾನಿಗಳಿಗೆ ನಿರಾಸೆ ಮೂಡಿಸಿರುವುದು ಎಲ್ಲರಿಗೂ ಗೊತ್ತು.


ತಂಡದ ಕಳಪೆ ಪ್ರದರ್ಶನದಿಂದ ನಿರಾಸೆ ಅನುಭವಿಸಿರುವ ಆರ್‌ಸಿಬಿ ಮ್ಯಾನೇಜ್‌ಮೆಂಟ್‌, ಮುಂದಿನ ವರ್ಷದ ಟೂರ್ನಿಗೆ ಸಜ್ಜಾಗಲು ಮುಂದಾಗಿದೆ. ಅದಕ್ಕಾಗಿ ತಂಡದಲ್ಲಿ ಕೆಲವೊಂದು ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಕೋಟಿ ಕೋಟಿ ನೀಡಿ ಕೆಲ ಆಟಗಾರರನ್ನ ಖರೀದಿ ಮಾಡಿದರೂ ಅವರಿಂದ ಉತ್ತಮ ಪ್ರದರ್ಶನ ಮೂಡಿ ಬರದ ಕಾರಣ ಮುಂದಿನ ವರ್ಷ ಅವರನ್ನ ತಂಡದಿಂದ ಡ್ರಾಪ್‌ ಮಾಡುವ ಇರಾದೆಯಲ್ಲಿದೆ.


ಲಭ್ಯವಾಗಿರುವ ಮಾಹಿತಿ ಪ್ರಕಾರ ತಂಡದ ಬ್ಯಾಟ್ಸ್‌ಮನ್‌ ಸರ್ಫರಾಜ್‌ ಖಾನ್‌ನನ್ನ ತಂಡದಿಂದ ಹೊರಗೆ ಹಾಕಲು ಮ್ಯಾನೇಜ್‌ಮೆಂಟ್‌ ನಿರ್ಧರಿಸಿದೆ ಎನ್ನಲಾಗಿದೆ. ಈ ಸಲ 7 ಪಂದ್ಯಗಳನ್ನಾಡಿರುವ ಸರ್ಫರಾಜ್‌ ಖಾನ್‌ ಕೇವಲ 51ರನ್‌ ಗಳಿಕೆ ಮಾಡಿ ನಿರಾಸೆ ಮೂಡಿಸಿದ್ದಾರೆ.

ಇತ್ತ ಭಾರಿ ನೀರಿಕ್ಷೆಯೊಂದಿಗೆ ಖರೀದಿ ಮಾಡಿದ್ದ ನ್ಯೂಜಿಲೆಂಡ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ ಬ್ರೆಂಡನ್‌ ಮೆಕ್‌ಲಮ್‌ ಸರಣಿಯಲ್ಲಿ ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರಿಂದ ಅವರನ್ನ ತಂಡದಿಂದ ಕೈಬಿಡುವ ಯೋಚನೆಯಲ್ಲಿದೆ ಎಂದು ತಿಳಿದು ಬಂದಿದೆ. ಪ್ರಸಕ್ತ ಸಾಲಿನಲ್ಲಿ ತಂಡದ ಪರ ಆರು ಪಂದ್ಯ ಆಡಿರುವ ಮೆಕ್‌ಲಮ್‌ ಕೇವಲ 134ರನ್‌ ಗಳಿಕೆ ಮಾಡಿದ್ದು, ಅದರಲ್ಲಿ 43ರನ್‌ ಅತ್ಯಧಿಕ ಸ್ಕೋರ್‌ ಆಗಿದೆ.

ಇನ್ನು ಮತ್ತೋರ್ವ ಆಲ್‌ರೌಂಡರ್‌ ಆಟಗಾರ ಕೋರೆ ಆಂಡರ್ಸನ್‌ ಸಹ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದ ಕಾರಣ ಅವರನ್ನು ತಂಡದಿಂದ ಕೈಬಿಡುವ ನಿರ್ಧಾರ ಮಾಡಿದೆ. ಆಸ್ಟ್ರೇಲಿಯಾದ ವೇಗದ ಬೌಲರ್‌ ನಾಥನ್ ಕೌಲ್ಟರ್‌‌ ಸ್ಥಾನದಲ್ಲಿ ಆಯ್ಕೆಗೊಂಡಿದ್ದ ಆಂಡರ್ಸನ್‌ ಯಾವುದೇ ರೀತಿಯ ಉತ್ತಮ ಪ್ರದರ್ಶನ ನೀಡಿಲ್ಲ.

11ನೇ ಆವೃತ್ತಿಯಲ್ಲಿ ಕಪ್ ನಮ್ದೇ ಎನ್ನುವ ಕನಸಿನೊಂದಿಗೆ ಕಣಕ್ಕಿಳಿದಿದ್ದ ಆರ್‌‌ಸಿಬಿ ಕನಸು ಮುಂದಿನ ವರ್ಷವಾದರೂ ಕಪ್ ಗೆಲ್ಲುತ್ತಾ ಕಾದು ನೋಡಬೇಕಿದೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು