• A
  • A
  • A
ಪ್ರಜಾಪ್ರಭುತ್ವದ ಸೋಲಿಗಾಗಿ ದೇಶ ಶೋಕಿಸುತ್ತಿದೆ: ರಾಹುಲ್‌ ಗಾಂಧಿ

ನವದೆಹಲಿ: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ಸಂವಿಧಾನದ ಅಣಕವಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ.


ಇಂದು ಬೆಳಗ್ಗೆ ಬಿ.ಎಸ್‌‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ರಾಹುಲ್‌ ಗಾಂಧಿ ಟ್ವಿಟ್ಟರ್‌ ಮೂಲಕ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.


'ಸಂಖ್ಯಾಬಲದ ಕೊರತೆ ಹೊರತಾಗಿಯೂ ಬಿಜೆಪಿ ಹಠಕ್ಕೆ ಬಿದ್ದು ಕರ್ನಾಟಕದಲ್ಲಿ ಅಧಿಕಾರ ರಚಿಸಿರುವುದು, ಸಂವಿಧಾನದ ಅಣಕವಲ್ಲದೇ ಬೇರೇನಲ್ಲ. ಇಂದು ಬೆಳಗ್ಗೆ ಬಿಜೆಪಿ ಟೊಳ್ಳು ವಿಜಯೋತ್ಸವ ಆಚರಿಸುತ್ತಿದ್ದರೆ, ಪ್ರಜಾಪ್ರಭುತ್ವದ ಸೋಲಿಗಾಗಿ ದೇಶ ಶೋಕಿಸುತ್ತಿತ್ತು' ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು