• A
  • A
  • A
ಸರ್ಕಾರಿ ಶಾಲೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ: ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ರಾಗಾ ಉತ್ತರಿಸಿದ್ದು ಹೀಗೆ! VIDEO

ಅಮೇಥಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತೊಮ್ಮೆ ನಗೆಪಾಟಲಿಗೆ ಗುರಿಯಾಗಿದ್ದಾರೆ. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ವಿಚಿತ್ರವಾದ ಉತ್ತರಗಳನ್ನು ಕೊಟ್ಟಿರುವ ರಾಹುಲ್‌, ಪ್ರತಿಯೊಂದಕ್ಕೂ ಮೋದಿಯನ್ನು ಕೇಳಿ, ಯೋಗಿಯನ್ನು ಕೇಳಿ ಎಂದಿದ್ದಾರೆ!


ಹೌದು, ಸಂಸದರೂ ಆಗಿರುವ ರಾಹುಲ್‌ ಗಾಂಧಿ, ತಮ್ಮ ಸ್ವಕ್ಷೇತ್ರವಾದ ಉತ್ತರ ಪ್ರದೇಶದ ಆಮೇಥಿಗೆ ಸೋಮವಾರ ಭೇಟಿ ಕೊಟ್ಟಿದ್ದರು. ಈ ಸಮಯದಲ್ಲಿ ಹಲವು ಕ್ಷೇತ್ರಗಳ, ವರ್ಗಗಳ ಜನರೊಂದಿಗೆ ರಾಗಾ ಸಮಾಲೋಚನೆ ನಡೆಸಿದ್ದರು.

ನಂತರ ಅಮೇಥಿಯಲ್ಲಿರುವ ಸರ್ಕಾರಿ ಶಾಲೆಯೊಂದಕ್ಕೆ ತೆರಳಿದ್ದ ಕಾಂಗ್ರೆಸ್‌ ಅಧ್ಯಕ್ಷ, ಅಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಓರ್ವ ವಿದ್ಯಾರ್ಥಿನಿ 'ಸರ್ಕಾರ ಹಲವು ಕಾನೂನುಗಳನ್ನು ಜಾರಿಗೆ ತರುತ್ತಿದೆ. ಆದರೆ, ಅವು ಯಾವು ಹಳ್ಳಿಗಳಲ್ಲಿ ಸರಿಯಾಗಿ ಅನುಷ್ಠಾನಗೊಳ್ಳುವುದಿಲ್ಲ ಯಾಕೆ' ಎಂದು ಪ್ರಶ್ನಿಸಿದ್ದಾಳೆ.
ಇದಕ್ಕೆ ರಾಹುಲ್‌ ನಗುತ್ತಾ, 'ಈ ಪ್ರಶ್ನೆಯನ್ನು ಪ್ರಧಾನಿ ಮೋದಿ ಬಳಿ ಕೇಳಿ. ಈಗ ನಮ್ಮ ಸರ್ಕಾರ ಅಧಿಕಾರದಲ್ಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಶ್ನಿಸಿ' ಎಂದು ಹೇಳಿದ್ದಾರೆ.

ಮುಂದುವರಿದು ಮತ್ತೆ ಕೆಲ ವಿದ್ಯಾರ್ಥಿಗಳು ಅಮೇಥಿ ಕುರಿತಂತೆ ಪ್ರಶ್ನೆ ಮಾಡಿದ್ದಾರೆ. ಆಗ ರಾಹುಲ್‌, 'ಇಲ್ಲ! ಇಲ್ಲ!. ಅಮೇಥಿಯನ್ನು ಯೋಗಿ ನಡೆಸುತ್ತಾರೆ. ನಾನು ಅಮೇಥಿಯ ಸಂಸದನಷ್ಟೆ. ನನ್ನ ಕಾರ್ಯ ಲೋಕಸಭೆಯಲ್ಲಿ ಕಾನೂನುಗಳನ್ನು ಜಾರಿಗೆ ತರೋದು. ಉತ್ತರ ಪ್ರದೇಶವನ್ನು ನಡೆಸೋದು ಯೋಗಿ. ಆದರೆ, ಯೋಗಿ ಬೇರೆಯದ್ದೇ ಕೆಲಸಗಳಲ್ಲಿ ನಿತರರಾಗಿದ್ದಾರೆ. ವಿದ್ಯುತ್‌, ಶಿಕ್ಷಣ, ನೀರು ಒದಗಿಸುವುದನ್ನು ಬಿಟ್ಟು ಯೋಗಿ ದ್ವೇಷ ಹರಡಿಸುತ್ತಿದ್ದಾರೆ' ಅಂತಾ ರಾಹುಲ್‌ ಉತ್ತರಿಸಿದ್ದಾರೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು