• A
  • A
  • A
ರಸೆಲ್‌, ರಾಣಾ ಚಾವುಟಿ ಏಟಿಗೆ ಡೆಲ್ಲಿ ತತ್ತರ... ಸ್ಪಿನ್ನರ್‌ಗಳ ಮೋಡಿಗೆ ಮೈಮರೆತ ಗಂಭೀರ್‌ ಪಡೆ!

ಕೋಲ್ಕತ್ತಾ: ಇಲ್ಲಿನ ಈಡನ್‌ ಗಾರ್ಡನ್‌ ಮೈದಾನದಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡದ ವಿರುದ್ಧ ಕೋಲ್ಕತ್ತಾ ನೈಟ್‌ ರೈಡರ್ಸ್‌ ಸುಲಭದ ಜಯ ಸಾಧಿಸಿದೆ.

ಕೃಪೆ: IPL/Twitter


ನಿನ್ನೆ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಲು ಇಳಿದ ಕೋಲ್ಕತ್ತಾ ತಂಡ ಆರಂಭದಲ್ಲೇ ಅಘಾತ ಅನುಭವಿಸಿತು. ಬಳಿಕ ರಾಣಾ ಮತ್ತು ಆಂಡ್ರೆ ರಸೆಲ್‌ ಹೊಡೆತಕ್ಕೆ ಡೆಲ್ಲಿ ತತ್ತರವಾಯಿತು. ರಾಣಾ, ರಸೆಲ್‌ ಅಬ್ಬರದಿಂದ ಚೇತರಿಸಿಕೊಂಡ ಕೋಲ್ಕತ್ತಾ ತಂಡ ನಿಗದಿತ 20 ಓವರ್‌ಗಳಲ್ಲಿ 200ರನ್‌ ಗಳಿಸಿ, ಡೆಲ್ಲಿ ತಂಡದ ಗೆಲುವಿಗೆ 201ರನ್‌‌ ಟಾರ್ಗೆಟ್‌‌‌ ನೀಡಿತ್ತು.


ಡೆಲ್ಲಿ ತಂಡದ ಪರ ಬೋಲ್ಟ್‌, ಕ್ರಿಸ್‌ ಮೋರಿಸ್‌ ತಲಾ 2ವಿಕೆಟ್‌, ಮೊಹಮ್ಮದ್‌ ಶಮಿ, ನದೀಂ ತಲಾ 1ವಿಕೆಟ್‌ ಪಡೆದುಕೊಂಡರೆ, ರಾಹುಲ್‌ ತಿವಾಟಿಯಾ 3ವಿಕೆಟ್‌ ಪಡೆದುಕೊಂಡು ಮಿಂಚಿದರು.

201ರನ್‌ಗಳ ಟಾರ್ಗೆಟ್‌ ಬೆನ್ನತ್ತಿದ್ದ ಡೆಲ್ಲಿ ತಂಡ ಆರಂಭದಿಂದಲೇ ಅಘಾತ ಅನುಭವಿಸಿತು. ಡೆಲ್ಲಿ ತಂಡದ ಪರ ರಿಷಭ್‌ ಮತ್ತು ಮ್ಯಾಕ್ಸ್‌ವೆಲ್‌ ಅಬ್ಬರಿಸಿದರು ಪ್ರಯೋಜನವಾಗಲಿಲ್ಲ. ಬಳಿಕ ಬಂದ ಬ್ಯಾಟ್ಸ್‌ಮನ್ಸ್‌ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದೇ ಪೆವಿಲಿಯನ್‌ ಹಾದಿ ಹಿಡಿದರು. ಕೇವಲ 14.2 ಓವರ್‌ಗಳಿಗೆ ಸರ್ವಪತನಗೊಂಡ ಡೆಲ್ಲಿ ತಂಡ 129 ರನ್‌ಗಳನ್ನು ಗಳಿಸಿ ಸೋಲನ್ನಪ್ಪಿತು. ಡೆಲ್ಲಿ ತಂಡದ ವಿರುದ್ಧ ಕೋಲ್ಕತ್ತಾ ತಂಡ 71 ರನ್‌ಗಳ ಬೃಹತ್‌ ಮೊತ್ತದ ಜಯ ಸಾಧಿಸಿತು.

ಡೆಲ್ಲಿ ಪರ ನಾಯಕ ಗೌತಮ್‌ ಗಂಭೀರ್‌(8), ಜಾಸನ್‌ ರಾಯ್‌(1), ಶ್ರೇಯಸ್‌ ಅಯ್ಯರ್‌ (4), ರಿಷಭ್‌ ಪಂತ್‌‌ (43), ಮಾಕ್ಸ್‌ವೆಲ್‌ (47), ರಾಹುಲ್‌ ತಿವಾಟಿಯಾ (1), ವಿಜಯ್‌ ಶಂಕರ್‌ (2), ಕ್ರಿಸ್‌ ಮೋರಿಸ್‌ (2), ಮೊಹಮ್ಮದ್‌ ಶಮಿ (7), ಬೋಲ್ಟ್‌ (0) ಮತ್ತು ನದೀಂ ಔಟಾಗದೇ 6 ರನ್‌ಗಳನ್ನು ಗಳಿಸಿದರು.

ಕೋಲ್ಕತ್ತಾ ತಂಡದ ಪರ ಸುನೀಲ್‌ ನರೈನ್‌ ಮತ್ತು ಕುಲ್ದೀಪ್‌ ಯಾದವ್‌ ಮಿಂಚಿನ ದಾಳಿ ನಡೆಸಿ ತಲಾ 3 ವಿಕೆಟ್‌ಗಳನ್ನು ಪಡೆದರು. ಇನ್ನು ಚಾವ್ಲಾ, ಆಂಡ್ರೆ ರಸೆಲ್‌, ಶಿವಂ ಮಾವಿ ಮತ್ತು ಟಾಮ್‌ ಕರ್ರನ್‌ ತಲಾ ಒಂದೊಂದು ವಿಕೆಟ್‌ಗಳನ್ನು ಪಡೆದು ತಂಡಕ್ಕೆ ನೆರವಾದರು.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು