• A
  • A
  • A
ಗೆಲುವಿನ ದಡ ಸೇರಿಸಿ ರಸೆಲ್‌ರನ್ನು ತಬ್ಬಿಕೊಂಡು ಭಾವುಕರಾದ ಯೂಸೂಫ್‌... ಕಾರಣ!?

ಕೋಲ್ಕತ್ತಾ: ನಿನ್ನೆ ನಡೆದ ಪಂದ್ಯದಲ್ಲಿ ಯೂಸೂಫ್‌‌ ಪಠಾಣ್‌ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಗೆಲುವಿನ ದಡ ಸೇರಿಸಿ ಆಂಡ್ರೆ ರಸೆಲ್‌ರನ್ನು ತಬ್ಬಿಕೊಂಡು ಭಾವುಕರಾದರು.

ಕೃಪೆ: Social Media


ಮೊದಲು ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದಲ್ಲಿ ಯೂಸೂಫ್‌ 100ಕ್ಕೂ ಹೆಚ್ಚು ಪಂದ್ಯಗಳನ್ನಾಡಿದ್ದಾರೆ. ಈಡನ್‌ ಗಾರ್ಡನ್‌ನಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ ಯೂಸೂಫ್‌ ಆಡಿದ ಎಲ್ಲ ಪಂದ್ಯಗಳಲ್ಲೂ ಕೋಲ್ಕತ್ತಾ ಗೆದ್ದಿತ್ತು. ಆದ್ರೆ ನಿನ್ನೆಯ ಪಂದ್ಯದಲ್ಲಿ ಹೈದರಾಬಾದ್‌ ಪರ ಬ್ಯಾಟ್‌ ಬೀಸಿದ ಯೂಸೂಫ್‌ ಪಠಾಣ್‌ ಕೋಲ್ಕತ್ತಾ ತಂಡದ ಸೋಲಿಗೆ ಕಾರಣವಾದರು.

ಕೇವಲ 7 ಬಾಲ್‌ಗೆ ಎರಡು ಫೋರ್‌, ಒಂದು ಸಿಕ್ಸ್‌ ನೆರವಿನಿಂದ 17 ರನ್‌ಗಳನ್ನು ಯೂಸೂಫ್‌ ಪಠಾಣ್‌ ಸಿಡಿಸಿದ್ದರು. ಕೊನೆಯ ಓವರ್‌ನಲ್ಲಿ ಆಂಡ್ರೆ ರಸೆಲ್‌ ಎಸೆದ ಬಾಲ್‌ಗೆ ಯೂಸೂಫ್‌ ಸಿಕ್ಸ್‌ ಸಿಡಿಸುವ ಮೂಲಕ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಬಳಿಕ ಆಂಡ್ರೆ ರಸೆಲ್‌ರನ್ನು ತಬ್ಬಿ ಭಾವುಕರಾಗಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಂಚಲನ ಮೂಡಿಸುತ್ತಿವೆ.

ಐಪಿಎಲ್‌ ಇತಿಹಾಸದಲ್ಲಿ ಹೈದರಾಬಾದ್‌ ತಂಡ ಈಡನ್‌ ಗಾರ್ಡನ್‌ನಲ್ಲಿ ಮೊದಲ ಬಾರಿಗೆ ಕೋಲ್ಕತ್ತಾ ತಂಡವನ್ನು ಮಣಿಸಿ ಜಯ ಕಂಡಿದೆ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು