• A
  • A
  • A
ಕಾಮದಾಹಕ್ಕೆ ಮೊಮ್ಮಗಳಂತಹ ಬಾಲಕಿಯನ್ನು ಬಳಸಿಕೊಂಡ ವೃದ್ಧ! Video..

ಮಹಾರಾಜ್‌ಗಂಜ್‌: ಆತನಿಗೆ ವಯಸ್ಸಾಗಿತ್ತು. ಆದ್ರೆ ಆ ಮುದುಕ ಕಾಮಾಂಧತೆಯಲ್ಲಿ ತೇಲುತ್ತಿದ್ದ. ಆದ್ರೆ ಆತ ಮಾಡಿರುವ ಕೃತ್ಯ ಒಂದು ಬಾಲೆಯ ಬಾಳನ್ನೇ ಹಾಳು ಮಾಡಿದೆ.


ಉತ್ತರ ಪ್ರದೇಶದ ಉನ್ನಾವೋ ಪ್ರಕರಣ ಮತ್ತು ಜಮ್ಮು-ಕಾಶ್ಮೀರದಲ್ಲಿ ನಡೆದ ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರದ ಪ್ರಕರಣಗಳು ಬೂದಿ ಮುಚ್ಚಿದ ಕೆಂಡದಂತಿವೆ. ಆದ್ರೆ ಈ ಘಟನೆಗಳು ಮಾಸುವ ಮುನ್ನವೇ ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನಲ್ಲಿ ತನ್ನ ಕಾಮದಾಹಕ್ಕೆ ಮುದುಕನೊರ್ವ ಬಾಲಕಿಯನ್ನು ಉಪಯೋಗಿಸಿಕೊಂಡಿರುವ ಪ್ರಕರಣ ಸಂಚಲನ ಮೂಡಿಸುತ್ತಿದೆ.

ಸುಮಾರು 60 ವಷಕ್ಕೂ ಹೆಚ್ಚು ವಯಸ್ಸಾಗಿರುವ ವೃದ್ಧನೋರ್ವ ಆರೇಳು ವರ್ಷದ ಬಾಲಕಿಯನ್ನು ಅನೇಕ ದಿನಗಳಿಂದ ತನ್ನ ಕಾಮದಾಹಕ್ಕೆ ಬಳಸಿಕೊಂಡಿದ್ದಾನೆ. ಇದನ್ನು ಗಮನಿಸಿದ ಕೆಲವರು ವಿಡಿಯೋ ಮಾಡಿದ್ದಾರೆ.

ವೃದ್ಧನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಪೊಲೀಸರ ಗಮನಕ್ಕೆ ಬಂದಿದೆ. ಎಚ್ಚೆತ್ತ ಪೊಲೀಸರು ಕೂಡಲೇ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು