• A
  • A
  • A
ರಾಣಾ ಸಹೋದರ ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ : ಫೋಟೋ ರಿಲೀಸ್‌ ಮಾಡಿದ ಶ್ರೀರೆಡ್ಡಿ

ಹೈದರಾಬಾದ್‌ : ಕಳೆದ ಕೆಲ ದಿನಗಳ ಕೆಳಗೆ ಟಾಲಿವುಡ್ ಫಿಲ್ಮ್ ಚೇಂಬರ್ ಮುಂದೆ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ್ದ ನಟಿ ಶ್ರೀರೆಡ್ಡಿ ಸದ್ಯ ಖ್ಯಾತ ನಿರ್ಮಾಪಕರ ಪುತ್ರ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಆರೋಪಿಸಿದ್ದಾಳೆ.


ಖ್ಯಾತ ತೆಲುಗು ನಿರ್ಮಾಪಕ ಸುರೇಶ್ ಬಾಬು ಅವರ ಪುತ್ರ ಹಾಗೂ ನಟ ರಾಣಾ ದಗ್ಗುಬಾಟಿ ಸಹೋದರ ಅಭಿರಾಮ್ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಸರ್ಕಾರದ ಫಿಲ್ಮ್ ಸ್ಟುಡಿಯೋವೊಂದರಲ್ಲಿ ಈ ಘಟನೆ ನಡೆದಿರುವುದಾಗಿ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶ್ರೀರೆಡ್ಡಿ ತಿಳಿಸಿದ್ದಾಳೆ.

ಈ ಕುರಿತು ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಹಾಗೂ ಅಭಿರಾಮ್ ನಡುವಿನ ಫೋಟೋಗಳನ್ನು ಹಂಚಿಕೊಂಡಿರುವ ಅವರು ತಮ್ಮ ಆರೋಪಕ್ಕೆ ಸಾಕ್ಷಿಗಳನ್ನು ನೀಡಿದ್ದಾಳೆ. ನಾನು ಹೇಳುತ್ತಿದ್ದ ವಿಷಯಗಳನ್ನು ಕೇವಲ ಸುಳ್ಳು ಎಂದು ಪ್ರತಿಪಾದಿಸುತ್ತಿದ್ದ ಹಲವರು ಈ ಫೋಟೋಗಳನ್ನು ಒಮ್ಮೆ ನೋಡಿ. ಇದನ್ನು ನೋಡಿದ ಬಳಿಕವಾದರೂ ನನ್ನ ಹೋರಾಟಕ್ಕೆ ಬೆಂಬಲ ನೀಡಿ ಎಂದು ಕೇಳಿಕೊಂಡಿದ್ದಾಳೆ.

ನಡು ಬೀದಿಯಲ್ಲಿ ನಟಿ ಅರೆಬೆತ್ತಲೆ ಪ್ರತಿಭಟನೆ...ಕಲಾವಿದರ ಸಂಘದಿಂದ ಮಹತ್ವದ ನಿರ್ಧಾರ
ನಟಿ ಶ್ರೀರೆಡ್ಡಿ ಈ ಫೋಟೋಗಳನ್ನು ಬಹಿರಂಗಗೊಳಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಹಿಂದೆಯೂ ಹಲವು ಸಿನಿಮಾ ನಿರ್ಮಾಪಕರು, ನಿರ್ದೇಶಕರ ವಿರುದ್ಧ ನಟಿ ಇಂತಹ ಆರೋಪ ಮಾಡಿದ್ದಳು.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು