• A
  • A
  • A
5ನೇ ODIನಲ್ಲಿ ಟೀಂ ಇಂಡಿಯಾಗೆ ಭರ್ಜರಿ ಗೆಲುವು... ಅಫ್ರಿಕಾ ವಿರುದ್ಧ ಐತಿಹಾಸಿಕ ವಿಜಯ

ಪೋರ್ಟ್ ಎಲಿಜಬೆತ್: ದಕ್ಷಿಣ ಆಫ್ರಿಕಾ ವಿರುದ್ಧದ 5 ನೇ ಏಕದಿನ ಪಂದ್ಯ ಗೆಲ್ಲುವ ಮೂಲಕ ಕೊಹ್ಲಿ ಪಡೆ 25 ವರ್ಷಗಳ ನಂತರ ಹರಿಣಗಳ ನಾಡಿನಲ್ಲಿ ಏಕದಿನ ಸರಣಿ ಜಯಿಸಿ ಇತಿಹಾಸ ನಿರ್ಮಿಸಿದ್ದಾರೆ. ನಿನ್ನೆ ನಡೆದ 5ನೇ ಪಂದ್ಯದಲ್ಲಿ ಭಾರತ ತಂಡ 73 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಆಫ್ರಿಕಾ ನಾಯಕ ಐಡೆನ್ ಮಾರ್ಕ್ರಾಮ್ ನಿರ್ಧಾರವನ್ನು ಭಾರತದ ಆರಂಭಿಕರು ಬುಡಮೇಲು ಮಾಡಿದರು.

ಕೃಪೆ: BCCI twitter


ರೋಹಿತ್‌ ಹಾಗೂ ಧವನ್‌ ಮೊದಲ ವಿಕೆಟ್‌ ಪತನವಾಗುವ ವೇಳೆಗೆ 53ರನ್‌ ಗಳಿಸಿ ಭರ್ಜರಿ ಆರಂಭ ನೀಡಿದರು. ಅದರಲ್ಲೂ ಧವನ್‌ ಸ್ಪೋಟಕ ಆಟಕ್ಕೆ ಮುಂದಾಗಿ 23 ಎಸೆತಗಳಲ್ಲಿ 8 ಬೌಂಡರಿ ಸಹಿತ 34 ರನ್‌ಗಳಿಸಿ ಔಟಾದರು.


ನಂತರ ಕೊಹ್ಲಿ (36), ರಹಾನೆ (8) ರನ್‌ ಕದಿಯುವ ಗೊಂದಲದಲ್ಲಿ ರನ್‌ಔಟ್‌ ಆದರು. ಇನ್ನು ತಾಳ್ಮೆಯ ಇನಿಂಗ್ಸ್‌ ಕಟ್ಟಿದ ರೋಹಿತ್‌ 126 ಎಸೆತಗಳಲ್ಲಿ ಭರ್ಜರಿ 115 ರನ್‌ ಗಳಿಸಿದರು. ಕೊನೆಯಲ್ಲಿ ಶ್ರೇಯಸ್‌ 30, ಭುವನೇಶ್ವರ್‌ 19 ರನ್‌ ಗಳಿಸಿ ಆಫ್ರಿಕಾಗೆ 275 ರನ್‌ಗಳ ಸವಾಲಿನ ಗುರಿ ನೀಡಲು ನೆರವಾದರು.

ಇನ್ನು 275 ರನ್‌ಗಳ ಗುರಿ ಪಡೆದ ಆಫ್ರಿಕಾ ತಂಡದ ಆರಂಭಿಕ ದಾಂಡಿಗರಾದ ಆಮ್ಲಾ ಹಾಗೂ ಮಾರ್ಕ್ರಾಮ್ 52 ರನ್‌ಗಳ ಭರ್ಜರಿ ಆರಂಭ ನೀಡಿದರು. ಮಾರ್ಕ್ರಾಮ್(32) ಸ್ಫೋಟಕ ಆಟಕ್ಕೆ ಮುಂದಾಗಿ ಬುಮ್ರಾಗೆ ಮೊದಲ ಬಲಿಯಾದರು.'

ನಂತರ ಬಂದ ಡುಮಿನಿ 1, ವಿಲಿಯರ್ಸ್‌ 6 ರನ್‌ಗಳಿಸಿ ಹಾರ್ದಿಕ್‌ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಮಿಲ್ಲರ್‌, ಆಮ್ಲಾ ಜೊತೆಗೂಡಿ 62 ರನ್‌ಗಳ ಸೇರಿಸಿ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ ಮಿಲ್ಲರ್‌(36), ಚಹಾಲ್‌ರ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತ ಬಾರಿಸಲು ಹೋಗಿ ಬೌಲ್ಡ್‌ ಆದರು. ಕೆಲವೇ ಕ್ಷಣದಲ್ಲಿ ಅರ್ಧಶತಕ ಬಾರಿಸಿ ಉತ್ತಮವಾಗಿ ಆಡುತ್ತಿದ್ದ ಆಮ್ಲಾ(71) ಕೂಡ ಇಲ್ಲದ ರನ್‌ ಕದಿಯಲು ಹೋಗಿ ಪಾಂಡ್ಯರ ಅದ್ಭುತ ಕ್ಷೇತ್ರ ರಕ್ಷಣೆಯಿಂದ ರನ್‌ ಔಟಾದರು.

ಒಂದು ಹಂತದಲ್ಲಿ 166ಕ್ಕೆ 5 ವಿಕೆಟ್‌ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಆಫ್ರಿಕಾಗೆ ಕುಲದೀಪ್‌ ಒಂದೇ ಓವರ್‌ನಲ್ಲಿ ಪೆಹ್ಲುಕ್ವಾಯೋ(0), ರಬಾಡ(03), ಕ್ಲಾಸೆನ್‌(39) ವಿಕೆಟ್‌ ಪಡೆದು ಭರ್ಜರಿ ಹೊಡೆತ ನೀಡಿದರು. ಕೊನೆಗೆ ಚಹಾಲ್‌ ಮೊರ್ನೆ ಮಾರ್ಕೆಲ್‌ರನ್ನು ಎಲ್‌ಬಿ ಬಲೆಗೆ ಬೀಳಿಸುವ ಮೂಲಕ ಹರಿಣಗಳ ಇನಿಂಗ್ಸ್‌ಗೆ ತೆರೆ ಎಳೆದರು.
ಕುಲದೀಪ್‌ 4, ಚಹಾಲ್‌ 2, ಪಾಂಡ್ಯ 2, ಬುಮ್ರಾ 1 ವಿಕೆಟ್‌ ಪಡೆದು ಮಿಂಚಿದರು.CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು