• A
  • A
  • A
ರೈಲ್ವೆಯಲ್ಲಿ 62,907ಹುದ್ದೆಗಳಿಗೆ ಅರ್ಜಿ ಆಹ್ವಾನ: ಇಂದಿನಿಂದಲೇ ಅರ್ಜಿ ಸಲ್ಲಿಸಿ....

ನವದೆಹಲಿ: ಭಾರತೀಯ ರೈಲ್ವೆ ಇಲಾಖೆ ಅತಿ ದೊಡ್ಡ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ಖಾಲಿ ಇರುವ 62,907ಡಿ ಗ್ರೂಪ್‌ ಹುದ್ದೆಗಳಿಗೆ ರೈಲ್ವೆ ಇಲಾಖೆ ಅರ್ಜಿ ಆಹ್ವಾನಿಸಿದೆ.


62,907ಡಿ ಗ್ರೂಪ್‌ ಹುದ್ದೆಗಳಿಗೆ ಬೆಳಗ್ಗೆ 10 ಗಂಟೆಯಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್‌ 12 ಕೊನೆಯ ದಿನಾಂಕವಾಗಿದೆ. ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ



ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಅಥವಾ ಐಟಿಐ ಪಾಸ್‌ ಆಗಿರಬೇಕು. ವಯಸ್ಸು ಕನಿಷ್ಟ 18 ಹಾಗೂ ಗರಿಷ್ಟ 31ರ ಒಳಗಿರಬೇಕು.

18 ಸಾವಿರ ರೂಪಾಯಿ ಸಂಬಳ

ಹುದ್ದೆಗಳಿಗೆ ನೇಮಕವಾದ ಅಭ್ಯರ್ಥಿಗಳಿಗೆ ತಿಂಗಳ 18 ಸಾವಿರ ರೂಪಾಯಿ ವೇತನ ಜೊತೆಗೆ 7ನೇ ವೇತನ ಆಯೋಗದ ಅನ್ವಯ ಭತ್ಯೆ ಸಿಗಲಿದೆ.

ಅರ್ಜಿ ಶುಲ್ಕ

ಜನರಲ್‌ ವರ್ಗ - 500 ರೂಪಾಯಿ
ಎಸ್‌ಸಿ/ಎಸ್‌ಟಿ, ಮಹಿಳೆ, ತೃತೀಯ ಲಿಂಗಿ, ಆರ್ಥಿಕ ಹಿಂದುಳಿದ ವರ್ಗ, ಮಾಜಿ ಸೈನಿಕ - 250 ರೂಪಾಯಿ


ಹುದ್ದೆಗಳು

ಕ್ಯಾಬಿನ್‌ ಮ್ಯಾನ್‌, ಟ್ರ್ಯಾಕ್‌ಮ್ಯಾನ್‌, ಲೆವೆಲ್‌ ಮ್ಯಾನ್‌, ಪಿಯಿಂಟ್‌ಮ್ಯಾನ್‌, ಹೆಲ್ಪರ್‌-2, ಕೀ ಮ್ಯಾನ್‌, ಶಂಟರ್‌, ವೆಲ್ಡರ್‌, ಫಿಟ್ಟರ್‌, ಗ್ಯಾಂಗ್‌ಮ್ಯಾನ್‌, ಸ್ವಿಚ್‌ಮ್ಯಾನ್‌ ಸೇರಿದಂತೆ 16 ವಿಭಾಗಗಳಲ್ಲಿ ಹುದ್ದೆಗಳಿವೆ.



CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು