• A
  • A
  • A
ಟೀಂ ಇಂಡಿಯಾದಲ್ಲಿ ಜರ್ಸಿ ನಂ.18ರ ಮೋಡಿ... ಒಂದೇ ದಿನ ಶತಕ ಸಿಡಿಸಿದ ವಿರಾಟ್‌‌, ಮಂದಾನ!

ನವದೆಹಲಿ: ಟೀಂ ಇಂಡಿಯಾದ ಕ್ರಿಕೆಟ್‌‌ನಲ್ಲಿ ಜರ್ಸಿ ನಂ.18ಕ್ಕೆ ವಿಶೇಷ ಮಹತ್ವವಿದೆ. ಪುರುಷರ ತಂಡದಲ್ಲಿ ಕ್ಯಾಪ್ಟನ್‌‌ ವಿರಾಟ್‌‌ ಕೊಹ್ಲಿ ಈ ನಂಬರ್‌‌‌ನ ಜರ್ಸಿ ಹೊಂದಿದ್ದು, ಇದೇ ಜರ್ಸಿ ನಂಬರ್‌ಅನ್ನು ಮಹಿಳಾ ತಂಡದಲ್ಲಿ ಸ್ಮೃತಿ ಮಂದಾನ ಹೊಂದಿದ್ದಾರೆ.


ಸದ್ಯ ಉಭಯ ತಂಡಗಳು ಹರಿಣಗಳ ನಾಡಿನಲ್ಲಿ ಏಕದಿನ ಪಂದ್ಯ ಆಡುತ್ತಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್‌‌ ಕೊಹ್ಲಿ ಭರ್ಜರಿ ಅಜೇಯ 160ರನ್‌‌ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅದೇ ದಿನ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಮೂರು ಏಕದಿನ ಪಂದ್ಯಗಳ ಐಸಿಸಿ ಚಾಂಪಿಯನ್‌ಶಿಪ್ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಭರ್ಜರಿ 135ರನ್‌ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.


ಇದನ್ನ ನೋಡಿದಾಗ ಟೀಂ ಇಂಡಿಯಾ ತಂಡದಲ್ಲಿ ಜರ್ಸಿ ನಂಬರ್‌‌ 18ಕ್ಕೆ ವಿಶೇಷ ಮಹತ್ವವಿದೆ ಎಂಬುದು ಗೊತ್ತಾಗುತ್ತದೆ. ಈ ಹಿಂದೆ ಸಚಿನ್‌‌ ತೆಂಡೂಲ್ಕರ್‌‌ ಅವರು ಹಾಕಿಕೊಳ್ಳುತ್ತಿದ್ದ ಜರ್ಸಿ ನಂ.10ಕ್ಕೆ ಮಹತ್ವದ ಸ್ಥಾನ ನೀಡಲಾಗಿತ್ತು.

ವಿಶೇಷ ಎಂದರೆ ಸ್ಮೃತಿ ಮಂದಾನ ಅವರ ಹುಟ್ಟಿದ ದಿನಾಂಕ ಜುಲೈ 18 ಆಗಿರುವುದರಿಂದ ಅವರು ಆ ಸಂಖ್ಯೆಯ ಜರ್ಸಿ ಹೊಂದಿದ್ದಾರೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು