• A
  • A
  • A
ಕೊಹ್ಲಿಗೆ ಸವಾಲ್ ಹಾಕಿದ ಪಾಕ್‌ ಕೋಚ್‌... ಏನದು ಗೊತ್ತಾ!?

ಹೈದರಾಬಾದ್‌: ಟೀಮ್‌ ಇಂಡಿಯಾ ಕ್ಯಾಪ್ಟನ್ ವಿರಾಟ್‌ ಕೊಹ್ಲಿಗೆ ಪಾಕಿಸ್ತಾನದ ಕ್ರಿಕೆಟ್‌ ತಂಡದ ಕೋಚ್‌ ಹೊಸ ಸವಾಲು ಹಾಕಿದ್ದಾರೆ. ಈ ಮೂಲಕವಾದ್ರು ಭಾರತ ತಂಡ ಪಾಕ್‌ನಲ್ಲಿ ಆಡುವಂತೆ ಪ್ರೇರೆಪಿಸುತ್ತಿದ್ದಾರೆ.


ಹೌದು, ದಾಖಲೆಗಳ ಸರದಾರನ ಬಗ್ಗೆ ಮಾತನಾಡಿದ ಪಾಕ್‌ ಕೋಚ್‌ ಮಿಕ್ಕಿ, ಕೊಹ್ಲಿ ಗ್ರೇಟ್‌ ಆಟಗಾರ ಎಂಬುದರಲ್ಲಿ ಸಂದೇಹವೇ ಇಲ್ಲ. ಆತ ಆಡಿದ ಎಲ್ಲ ದೇಶದಲ್ಲಿ ಕೊಹ್ಲಿ ಶತಕ ಬಾರಿಸಿದ್ದು ಸಂತಸದ ಸಂಗತಿಯೇ. ಕೊಹ್ಲಿ ಬ್ಯಾಟಿಂಗ್‌ ಸ್ಟೈಲ್‌ ನನಗೆ ಇಷ್ಟವಾಗುತ್ತದೆ. ಆತನ ಬ್ಯಾಟಿಂಗ್‌ ನೋಡಲು ನನಗೆ ಬಹಳ ಇಷ್ಟ. ಎಲ್ಲ ದೇಶದಲ್ಲಿ ಶತಕ ಸಿಡಿಸಿರುವ ಕೊಹ್ಲಿ ಪಾಕ್‌ ನೆಲದಲ್ಲಿ ಶತಕ ಬಾರಿಸಲು ಸಾಧ್ಯವಾಗುವುದಿಲ್ಲ. ಇದು ಆತನಿಗೆ ಅಷ್ಟು ಸುಲಭವಾದದಲ್ಲ. ನಮ್ಮ ಆಟಗಾರರು ಕೊಹ್ಲಿಗೆ ಬಾಲ್‌ ಬಾರಿಸಲು ಸಾಧ್ಯವಾಗದ ರೀತಿಯಲ್ಲಿ ಬೌಲಿಂಗ್‌ ಎಸೆಯುತ್ತಾರೆ ಎಂದು ಕೋಚ್‌ ಅಭಿಪ್ರಾಯಪಟ್ಟಿದ್ದಾರೆ.


ಭಾರತ-ಪಾಕ್‌‌ ಮಧ್ಯ ದ್ವಿಪಕ್ಷಿಯ ಸರಣಿ ನಡೆದು ಬಹಳ ವರ್ಷಗಳೇ ಕಳೆದಿವೆ. ಭಾರತ-ಪಾಕ್‌ ಮಧ್ಯೆ ಉದ್ರಿಕ್ತ ಪರಿಸ್ಥಿತಿ ಹಿನ್ನೆಲೆ ಉಭಯ ತಂಡಗಳ ನಡುವಿನ ಸರಣಿಗೆ ಅವಕಾಶ ನೀಡಿಲ್ಲ. ಕೊಹ್ಲಿಗೆ ಸವಾಲ್‌ ಹಾಕುವ ಮೂಲಕ ಪಾಕ್‌ನಲ್ಲಿ ಆಡುವಂತೆ ಆಹ್ವಾನ ನೀಡಿದ್ದಾರೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು