• A
  • A
  • A
ವಿಧಾನಸಭಾ ಕಣಕ್ಕಿಳಿಯಲು ಸಜ್ಜಾದ ಶಿವಸೇನಾ-ಶ್ರೀರಾಮಸೇನೆ

ಮುಂಬೈ: ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನಾ ಮತ್ತು ಶ್ರೀರಾಮಸೇನೆ ಮೈತ್ರಿಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿವೆ. ಚುನಾವಣೆ ಚಿಹ್ನೆ ಧನುಷ್‌ ಗುರುತಿನಿಂದಲೇ ಶಿವಸೇನಾ ಪಕ್ಷವು ರಾಜ್ಯದ 224 ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ.

ಸಂಗ್ರಹ ಚಿತ್ರ


ಮೂಲಗಳ ಪ್ರಕಾರ, ಈಗಾಗಲೇ ಶಿವಸೇನಾ ಮತ್ತು ಶ್ರೀರಾಮಸೇನೆ ನಡುವೆ ಈ ಬಗ್ಗೆ ಮಾತುಕತೆ ನಡೆದಿದೆ. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರು ಸಾಮಾಜಿಕ ಕಾರ್ಯ ಹಾಗೂ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.


ಅಲ್ಲದೆ ರಾಜ್ಯದಲ್ಲಿ ಶಿವಸೇನೆ ಕಳೆದ ಸುಮಾರು 15 ವರ್ಷಗಳಿಂದ ಕೆಲಸ ಮಾಡುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹಿಂದುತ್ವದ ಅಜೆಂಡಾ ಇಟ್ಟುಕೊಂಡು ಶ್ರೀರಾಮಸೇನೆ- ಶಿವಸೇನೆ ರಾಜಕೀಯ ಒಪ್ಪಂದ ಮಾಡಿಕೊಂಡಿವೆ.

(ಶಿವಸೇನಾ -ಶ್ರೀರಾಮಸೇನೆ ಸಂಯೋಜನೆ... 224 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಕಣಕ್ಕೆ!)

ಅಲ್ಲದೆ ಈ ಹಿಂದೆ ಶಿವಸೇನೆಯು ಜಿ.ಪಂ, ತಾ.ಪಂ ಚುನಾವಣೆಗಳಲ್ಲಿ ರಾಜ್ಯದ ಕೆಲವೆಡೆ ಯಶಸ್ಸು ಸಾಧಿಸಿತ್ತು. ಕಲಬುರಗಿ, ಕಾರವಾರ, ಬೀದರ್, ಬೆಳಗಾವಿ ಜಿಲ್ಲೆಗಳಲ್ಲಿ ನಡೆದ ಚುನಾವಣೆಗಳಲ್ಲಿ ಜಯ ಗಳಿಸಿತ್ತು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯಾದ್ಯಂತ ಸ್ಪರ್ಧಿಸಲು ಸಜ್ಜಾಗಿದೆ.

ಅಲ್ಲದೆ ಈಗಾಗಲೇ ಶಿವಸೇನೆಯ ಕೆಲ ಮುಖಂಡರಿಗೆ ಆಯಾ ಜಿಲ್ಲೆಗಳ ಜವಾಬ್ದಾರಿ ವಹಿಸಿದೆ. ರಾಜು ಭವಾನಿಗೆ ಕಲಬುರಗಿ, ಬೀದರ್‌‌, ರಾಯಚೂರು, ಯಾದಗಿರಿ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ. ಕುಮಾರ್‌‌ ಹಕಾರಿ ಎಂಬುವರು ಹುಬ್ಬಳ್ಳಿ-ಧಾರವಾಡ, ಹಾವೇರಿ, ಕಾರವಾರ, ಕೊಪ್ಪಳ, ಗದಗ, ಬಳ್ಳಾರಿ ಹಾಗೂ ಮಹಾನಿಂಗಪ್ಪ ಗುಂಜಗಾವಿಯವರು ವಿಜಯಪುರ, ಬಾಗಲಕೋಟೆ, ಮಂಗಳೂರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜವಾಬ್ದಾರಿ ಹೊಂದಿದ್ದಾರೆ.

ಹಾಗೆಯೇ ಆನಂದ್ ಶೆಟ್ಟಿ ಮತ್ತು ಶಿವಕುಮಾರ್ ರೆಡ್ಡಿಯವರು ಬೆಂಗಳೂರು, ಮೈಸೂರು ಸೇರಿದಂತೆ ದಕ್ಷಿಣ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಶಿವಸೇನೆಯ ಚುನಾವಣಾ ಉಸ್ತುವಾರಿ ನಿಭಾಯಿಸಲಿದ್ದಾರೆ. ಇನ್ನು ಮಹೇಶ್ ಕೊಪ್ಪ ಅವರಿಗೆ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ. ಹಾಗೆಯೇ ಹೇಮಂತ್ ಅವರು ಕೊಡಗು ಜಿಲ್ಲೆಯಲ್ಲಿ ಪಕ್ಷದ ಜವಾಬ್ದಾರಿ ನಿಭಾಯಿಸಲಿದ್ದಾರೆ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು