• A
  • A
  • A
11 ಸಾವಿರಕ್ಕೆ 48 ಪಿಕ್ಸೆಲ್​ ಕ್ಯಾಮೆರಾ... ಧೂಳೆಬ್ಬಿಸಲು ಬಂತು ರೆಡ್ಮಿ ನೋಟ್​ 7

ಬೀಜಿಂಗ್: ಅಗ್ಗದ ದರದಲ್ಲಿ ಹಲವು ಫೀಚರ್ಸ್​ಗಳನ್ನು ನೀಡುವ ಶಿಯೋಮಿ ಸಂಸ್ಥೆ ಇಂದು ಮತ್ತೊಂದು ಮೊಬೈಲ್ ಅನಾವರಣಗೊಳಿಸಿದೆ.


ನೋಟ್ ಸಿರೀಸ್​ನ ಏಳನೇ ಮೊಬೈಲ್ ಬಿಡುಗಡೆ ಮಾಡಿರುವ ಶಿಯೋಮಿ, ಅದ್ಭುತ ಫೀಚರ್ಸ್​ಗಳನ್ನು ಗ್ರಾಹಕರಿಗೆ ನೀಡಿದೆ. ಇಂದು ಬೀಜಿಂಗ್​ನಲ್ಲಿ ರೆಡ್ಮಿ ನೋಟ್​ 7 ರಿಲೀಸ್ ಆಗಿದೆ.
ವಿಶೇಷತೆಗಳೇನು..?
ವಿನ್ಯಾಸದಲ್ಲಿ ಈ ಹಿಂದಿನ ಫೋನ್​ಗಳಿಂದ ಉತ್ತಮ ಮತ್ತು ಆಕರ್ಷಕವಾಗಿದೆ. 6.3 ಇಂಚಿನ ಸ್ಕ್ರೀನ್​ನ ನೋಟ್​​ 7 ಮೊಬೈಲ್​ 48 ​ಮೆಗಾ ಪಿಕ್ಸೆಲ್​​ ಕ್ಯಾಮೆರಾ ಹೊಂದಿದೆ. ಈ ಮೂಲಕ ರೆಡ್ಮಿ, 40 ಮೆಗಾಪಿಕ್ಸೆಲ್​​ ಕ್ಯಾಮೆರಾ ಹೊಂದಿದ ಕ್ಲಬ್​ಗೆ ಸೇರ್ಪಡೆಯಾಗಿದೆ.

ನಾಲ್ಕು ಸಾವಿರ ಎಂಎಹೆಚ್​ ಸಾಮರ್ಥ್ಯದ ಬ್ಯಾಟರಿ ಇದರಲ್ಲಿರಲಿದೆ. ಹಿಂಬದಿಯ ಇನ್ನೊಂದು ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಆಗಿರಲಿದೆ. 4 ಜಿಬಿ ರ‍್ಯಾಮ್​ ಹಾಗೂ 64 ಆಂತರಿಕ ಸಾಮರ್ಥ್ಯ, 6 ಜಿಬಿ ರ‍್ಯಾಮ್​​ ಹಾಗೂ64 ಆಂತರಿಕ ಸಾಮರ್ಥ್ಯವನ್ನು ಹೊಂದಿದ ಎರಡು ಮೊಬೈಲ್​ಗಳು ಬಿಡುಗಡೆಯಾಗಿವೆ.

ಸದ್ಯದಲ್ಲೇ ಚೀನಾ ಮಾರುಕಟ್ಟೆಗೆ ಈ ಮೊಬೈಲ್ ಬಿಡುಗಡೆಯಾಗಲಿದ್ದು, ಅಲ್ಲಿನ ದರ 999 ಯವಾನ್​ ಆಗಿರಲಿದೆ. ರೂಪಾಯಿ ಲೆಕ್ಕಾಚಾರದಲ್ಲಿ ಇದರ ಬೆಲೆ ಸರಿ ಸುಮಾರು ಹನ್ನೊಂದು ಸಾವಿರ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು