• A
  • A
  • A
ಮೊದಲ ಏಕದಿನ ಪಂದ್ಯದಲ್ಲೇ ರೆಕಾರ್ಡ್​... ಆರು ವಿಕೆಟ್​ ಪಡೆದು ಕುಲ್​ದೀಪ್​ ದಾಖಲೆ

ನ್ಯಾಟಿಂಗ್​ಹ್ಯಾಮ್​: ಅತಿಥೇಯ ಇಂಗ್ಲೆಂಡ್​ ತಂಡದ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಸ್ಪಿನ್​ ದಾಳಿಗೆ ನಲುಗಿರುವ ಇಂಗ್ಲೆಂಡ್​ ತಂಡ ರನ್​ ಗಳಿಕೆ ಮಾಡಲು ಹರಸಾಹಸ ಪಟ್ಟಿದ್ದು, ಇದರ ಮಧ್ಯೆ ಟೀಂ ಇಂಡಿಯಾ ಲೆಫ್ಟ್​ ಆರ್ಮ್​ ಬೌಲರ್​ ಕುಲ್​ದೀಪ್​ ಯಾದವ್​ ದಾಖಲೆ ಬರೆದಿದ್ದಾರೆ.

courtesy: BCCI


ಇಂಗ್ಲೆಂಡ್​ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಆರು ವಿಕೆಟ್​ ಪಡೆದುಕೊಂಡಿರುವ ಕುಲ್​ದೀಪ್​ ಯಾದವ್​, ಅತಿ ಹೆಚ್ಚು ವಿಕೆಟ್​ ಪಡೆದುಕೊಂಡಿರುವ ಮೊದಲ ಲೆಫ್ಟ್​ ಆರ್ಮ್​ ಬೌಲರ್​ ಆಗಿದ್ದಾರೆ. ಇಂದಿನ ಪಂದ್ಯದಲ್ಲಿ ಕುಲ್​ದೀಪ್​ ಯಾದವ್​ ಜೊಸನ್​ ರಾಯ್​(38), ಜಾನಿ ಬೇರ್ಸ್ಟೋವ್(38), ರೂಟ್​(3), ಬೆನ್​ ಸ್ಟೋಕ್ಸ್​(50), ಜೋಶ್ ಬಟ್ಲರ್​(53), ಡೇವಿಡ್​ ವಿಲ್ಲಿ(1) ವಿಕೆಟ್​ ಪಡೆದುಕೊಂಡರು. ಏಕದಿನ ಪಂದ್ಯದಲ್ಲಿ ಇಷ್ಟೊಂದು ವಿಕೆಟ್​ ಪಡೆದುಕೊಂಡ ಮೊದಲ ಲೆಗ್​ ಸ್ಪಿನ್ನರ್ ಕುಲ್​ದೀಪ್​ ಯಾದವ್​ ಆಗಿದ್ದಾರೆ. ಇದರ ಜತೆಗೆ ಏಕದಿನ ಪಂದ್ಯದಲ್ಲಿ ಯಾದವ್​ ಅತಿ ಹೆಚ್ಚು ವಿಕೆಟ್​ ಪಡೆದುಕೊಂಡ ಸಾಧನೆ ಸಹ ಮಾಡಿದರು.
ಇದಕ್ಕೂ ಮೊದಲು ಶಾಹಿದ್​ ಆಫ್ರಿದಿ ಕಿನ್ಯಾ ವಿರುದ್ಧ 5ವಿಕೆಟ್​, ಆಂಡ್ರೋ ಸೈಮಂಡ್ಸ್​ ಬಾಂಗ್ಲಾ ವಿರುದ್ಧ 5ವಿಕೆಟ್​, ಐರ್ಲೆಂಡ್​ ವಿರುದ್ಧ ರಾಶೀದ್​ ಖಾನ್​ 5ವಿಕೆಟ್​ ಪಡೆದುಕೊಂಡಿದ್ದರು. ಈಗಾಗಲೇ ಟಿ-20 ಪಂದ್ಯದಲ್ಲಿ ಕುಲ್​ದೀಪ್​ ಯಾದವ್​ 5ವಿಕೆಟ್​ ಪಡೆದು ಮಿಂಚಿದ್ದಾರೆ.

ಇನ್ನು ಭಾರತದ ಪರ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 2014ರಲ್ಲಿ ಸ್ಟುವರ್ಟ್​ ಬಿನ್ನಿ 6ವಿಕೆಟ್​,1993ರಲ್ಲಿ ಅನಿಲ್​ ಕುಂಬ್ಳೆ ವೆಸ್ಟ್​ ಇಂಡೀಸ್​ ವಿರುದ್ಧ 6ವಿಕೆಟ್​, 2003ರಲ್ಲಿ ಇಂಗ್ಲೆಂಡ್​ ವಿರುದ್ಧ ಆಶಿಶ್​ ನೇಹ್ರಾ 6ವಿಕೆಟ್​ ಪಡೆದುಕೊಂಡಿದ್ದಾರೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು