• A
  • A
  • A
3 ವರ್ಷಗಳ ನಂತ್ರ ಭಾರತ ತಂಡಕ್ಕೆ ಮರಳಿದ ಪವರ್​ ಹಿಟ್ಟರ್​... ಅಖಾಡದಲ್ಲಿ ಅಬ್ಬರಿಸ್ತಾರಾ!?

ನ್ಯಾಟಿಂಗ್​ಹ್ಯಾಮ್​: ಟೀಂ ಇಂಡಿಯಾದ ಕಾಯಂ ಸದಸ್ಯ ಹಾಗೂ ಫಿನಿಶರ್​ ಎಂಬ ಪಟ್ಟ ಕಟ್ಟಿಕೊಂಡಿದ್ದ ಸುರೇಶ್​ ರೈನಾ ಬರೋಬ್ಬರಿ ಮೂರು ವರ್ಷಗಳ ನಂತರ ಏಕದಿನ ತಂಡಕ್ಕೆ ಮರಳಿದ್ದು, ಇಂಗ್ಲೆಂಡ್​ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಡುವ 11ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.


ಆತಿಥೇಯ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಪವರ್ ಹಿಟ್ಟರ್ ಸುರೇಶ್​ ರೈನಾ, ಭಾರತ ಏಕದಿನ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದು, ಅಖಾಡದಲ್ಲಿ ಅಬ್ಬರಿಸುವ ಸಾಧ್ಯತೆ ಇದೆ.
31 ವರ್ಷದ ಸುರೇಶ್ ರೈನಾ ಈ ಹಿಂದೆ 2015ರ ನವೆಂಬರ್‌ನಲ್ಲಿ ಭಾರತ ಪರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಕೊನೆಯ ಏಕದಿನ ಪಂದ್ಯ ಆಡಿದ ನಂತರ ಅವರು ಅವಕಾಶ ವಂಚಿತರಾಗಿದ್ದರು.

ಪ್ರಸಕ್ತ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದ್ದ ತಂಡದಲ್ಲಿ ಸುರೇಶ್ ರೈನಾ ಆರಂಭದಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ ಹೈದರಾಬಾದ್‌ನ ಅಂಬಾಟಿ ರಾಯುಡು ಯೋ-ಯೋ ಟೆಸ್ಟ್‌ನಲ್ಲಿ ಫೇಲ್ ಆಗಿ ತಂಡದಿಂದ ಹೊರಬಿದ್ದ ಕಾರಣ, ಅವರ ಬದಲು ರೈನಾಗೆ ಅವಕಾಶ ನೀಡಲಾಗಿತ್ತು.

ಭಾರತ ಪರ ಇದುವರೆಗೆ 223 ಏಕದಿನ ಪಂದ್ಯಗಳನ್ನಾಡಿರುವ ಸುರೇಶ್ ರೈನಾ, 5 ಶತಕಗಳ ಸಹಿತ 5568 ರನ್ ಗಳಿಸಿದ್ದಾರೆ. ಬೌಲಿಂಗ್‌ನಲ್ಲೂ ತಮ್ಮ ಸಾಮರ್ಥ್ಯ ಪ್ರದರ್ಶಿಸಿ 36 ವಿಕೆಟ್‌ ಕಬಳಿಸಿದ್ದಾರೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು