• A
  • A
  • A
ಧೋನಿ ಬರ್ತ್​ಡೇ: ಪಾರ್ಟಿಯಲ್ಲಿ ಭಾಗಿಯಾಗಿದ್ದ ಅನುಷ್ಕಾಗ್ಯಾಕೆ ಇಷ್ಟೊಂದು ಕೋಪ..!

ಕಾರ್ಡಿಫ್​: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ 37ನೇ ವಸಂತಕ್ಕೆ ಕಾಲಿಟ್ಟಿದ್ದು, ನಿನ್ನೆ ತಡರಾತ್ರಿ ತಂಡದ ಸಹ ಆಟಗಾರರೊಂದಿಗೆ ಕೇಕ್​ ಕತ್ತರಿಸಿ ಸಂಭ್ರಮಾಚರಣೆ ಮಾಡಿಕೊಂಡಿದ್ದಾರೆ.


ಇಂಗ್ಲೆಂಡ್​ ವಿರುದ್ಧದ 2ನೇ ಟಿ20 ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಹೋಟೆಲ್​ಗೆ ತೆರಳಿದ ಆಟಗಾರರು, ಧೋನಿ ಬರ್ತ್​ಡೇ ಆಚರಣೆ ಮಾಡಿದರು. ಈ ವೇಳೆ, ತಂಡದ ಎಲ್ಲ ಸದಸ್ಯರು ಭಾಗಿಯಾಗಿದ್ದರು. ಇದೇ ವೇಳೆ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಸಹ ಪಾಲ್ಗೊಂಡಿದ್ದರು.
ಧೋನಿ ಕೇಕ್​ ಕತ್ತರಿಸುತ್ತಿದ್ದ ವೇಳೆ ಅನುಷ್ಕಾ ಶರ್ಮಾ ಕೋಪದಲ್ಲಿರುವ ಹಾಗೇ ಕಂಡು ಬಂದಿದೆ. ಧೋನಿ ಬರ್ತ್​ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಸ್ನೇಹಿತ ಅರುಣ್​ ಪಾಂಡೆ ಫೋಟೋ ವೈರಲ್​ ಮಾಡಿದ್ದು, ಅದರಲ್ಲಿ ಕೊಹ್ಲಿ ಹಾಗೂ ಅನುಷ್ಕಾ ಮುಖದಲ್ಲಿ ಯಾವುದೇ ನಗೆ ಕಂಡು ಬಂದಿಲ್ಲ. ಸದ್ಯ ಈ ಫೋಟೊ ವೈರಲ್​ ಆಗಿದೆ.

ಫೋಟೋ ವೈರಲ್ ಆಗುತ್ತಿದ್ದಂತೆ ಕೆಲವರು ಕಮೆಂಟ್​ ಮಾಡಿದ್ದಾರೆ. ಅನುಷ್ಕಾ ಯಾಕೆ ಇಷ್ಟೊಂದು ಗಂಭೀರವಾಗಿದ್ದಾರೆ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಕೇಕ್​ ಕತ್ತರಿಸುತ್ತಿದ್ದ ವೇಳೆ ಅನುಷ್ಕಾ ಯಾವುದೋ ವಿಷಯದ ಕುರಿತು ಚರ್ಚೆ ಮಾಡುತ್ತಿರಬಹುದು ಎನ್ನಲಾಗಿದೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು