• A
  • A
  • A
ನಿಜವಾಯ್ತು ಅಚಿಲೆಸ್‌ ಬೆಕ್ಕಿನ ಭವಿಷ್ಯ... ಫಿಫಾ ವಿಶ್ವಕಪ್‌‌ನ ಮೊದಲ ಪಂದ್ಯದಲ್ಲಿ ರಷ್ಯಾಗೆ ಗೆಲುವು

ಮಾಸ್ಕೋ: ಫಿಫಾ ವಿಶ್ವಕಪ್‌ ಫುಟ್ಬಾಲ್‌ಗೆ ರಷ್ಯಾದಲ್ಲಿ ಇಂದಿನಿಂದ ವರ್ಣರಂಜಿತ ಚಾಲನೆ ಸಿಕ್ಕಿದ್ದು, ಉದ್ಘಾಟನಾ ಪಂದ್ಯದಲ್ಲಿ ಅತಿಥೇಯ ರಷ್ಯಾ ಭರ್ಜರಿ ಗೆಲುವು ದಾಖಲಿಸಿ ಖಾತೆ ತೆರೆದಿದೆ.


ಉದ್ಘಾಟನಾ ಪಂದ್ಯದಲ್ಲಿ ರಷ್ಯಾ-ಸೌದಿ ಅರೇಬಿಯಾ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ರಷ್ಯಾ 5-0 ಅಂತರದ ಗೆಲುವು ದಾಖಲಿಸಿದೆ. ಆರಂಭದಿಂದಲೂ ಭರ್ಜರಿ ಪ್ರದರ್ಶನ ನೀಡಿದ ರಷ್ಯಾ ತಂಡ ಸೌದಿ ಅರೇಬಿಯಾ ಮೇಲೆ ಪ್ರಹಾರ ನಡೆಸಿತ್ತು. ರಷ್ಯಾ ಪರ ಭರ್ಜರಿ ಪ್ರದರ್ಶನ ನೀಡಿದ ಡೇನಿಸ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಅಚಿಲೆಸ್ ಬೆಕ್ಕಿನಿಂದ ಫಿಫಾ ವಿಶ್ವಕಪ್‌‌ನ ಸೋಲು-ಗೆಲುವಿನ ಭವಿಷ್ಯ.. ಮೊದಲ ಪಂದ್ಯದಲ್ಲಿ ಈ ತಂಡಕ್ಕೆ ಗೆಲುವಂತೆ!

ಪಂದ್ಯ ಆರಂಭಕ್ಕೂ ಮೊದಲು ಮಾಸ್ಕೋದ ಲುಜ್ನಿಕಿ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭ ಹಲವಾರು ವೈಶಿಷ್ಠ್ಯಗಳಿಗೆ ಸಾಕ್ಷಿಯಾಯಿತು. ರಷ್ಯಾದ ಖ್ಯಾತ ರೂಪದರ್ಶಿ ನಥಾಲಿಯಾ ಅವರೊಂದಿಗೆ 2010ರ ಫಿಫಾ ವಿಶ್ವಕಪ್‌ ವಿಜೇತ ಸ್ಪೇನ್‌ ತಂಡದ ನಾಯಕ ಐಕರ್‌ ಕ್ಯಾಸಿಲಾಸ್‌ ವಿಶ್ವಕಪ್‌ ಟ್ರೋಫಿಯನ್ನು ಕ್ರೀಡಾಂಗಣಕ್ಕೆ ತಂದು ಪ್ರೇಕ್ಷಕರಿಗೆ ಪ್ರದರ್ಶಿಸಿದರು.

ನಂತರ ಖ್ಯಾತ ಪಾಪ್‌ ಗಾಯಕರಾದ ರಾಬಿ ವಿಲಿಯಮ್ಸ್‌, ಅಯ್ದಾ ಗ್ಯಾರಿಫುಲಿನಾ, ನಿಕ್ಕಿ ಜ್ಯಾಮ್‌ ಮತ್ತು ಎರಾ ಇಸ್ಪ್ರೇಫಿ ಅವರ ಕಂಠಸಿರಿಯಲ್ಲಿ ಮಾರ್ದನಿಸಿದ ಹಾಡುಗಳು ನೆರೆದಿದ್ದ ಫುಟ್ಬಾಲ್‌ ಪ್ರಿಯರ ಸಂಭ್ರಮವನ್ನು ಇಮ್ಮಡಿಗೊಳಿಸಿದವು.

ಅಲ್ಲದೆ ಕ್ರೀಡಾಂಗಣದ ಮಧ್ಯದಲ್ಲಿ ರಚಿಸಲಾಗಿದ್ದ ಫುಟ್ಬಾಲ್‌ ಪ್ರತಿಕೃತಿಯ ಮೇಲೆ ನಡೆದ ನೃತ್ಯ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ತುಂಬಿದವು. ನಂತರ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ತಂಡಗಳ ಪಥಸಂಚಲನ ನಡೆಯಿತು.

ಇನ್ನು ಇಂದಿನ ಪಂದ್ಯದಲ್ಲಿ ರಷ್ಯಾ ಗೆಲುವು ದಾಖಲು ಮಾಡಲಿದೆ ಎಂದು ಅಚಿಲೆಸ್ ಬೆಕ್ಕು ಇದಕ್ಕೂ ಮೊದಲು ಭವಿಷ್ಯ ನುಡಿದಿತ್ತು. ಅದರ ಪ್ರಕಾರ ಉದ್ಘಾಟನಾ ಪಂದ್ಯದಲ್ಲಿ ರಷ್ಯಾ ಗೆಲುವು ದಾಖಲಿಸಿದೆ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು