• A
  • A
  • A
ವಿದೇಶ ಪ್ರವಾಸದಲ್ಲಿ ಪ್ರಧಾನಿ... ಮೋದಿಯನ್ನು ಬರಮಾಡಿಕೊಂಡ ಸ್ವಿಡನ್‌‌ ಪ್ರಧಾನಿ

ಸ್ಟಾಕ್‌‌‌ಹೋಮ್‌‌: ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾತ್ರಿ ಸ್ವಿಡನ್‌‌ಗೆ ತಲುಪಿದ್ದಾರೆ. ರಾಜಧಾನಿ ಸ್ಟಾಕ್‌‌‌ಹೋಮ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಸ್ವಿಡನ್‌‌ ಪ್ರಧಾನಿ ಸ್ಟೀಫನ್‌‌ ಲೋಫ್‌ವೆನ್ ಬರಮಾಡಿಕೊಂಡರು.


ಐದು ದಿನಗಳ ವಿದೇಶ ಪ್ರವಾಸದಲ್ಲಿ ಪ್ರಧಾನಿ ಮೋದಿ ಸ್ವಿಡನ್‌ ನಂತರ ಇಂಗ್ಲೆಂಡ್‌ಗೆ ಭೇಟಿ ಕೊಡಲಿದ್ದಾರೆ. ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಸ್ವಿಡನ್‌‌ಗೆ ಬಂದಿದ್ದಾರೆ.

ಎರಡು ದಿನ ಸ್ವಿಡನ್‌‌ನಲ್ಲಿರುವ ಪ್ರಧಾನಿ ಮೋದಿ, ಹಲವು ದ್ವಿಪಕ್ಷೀಯ ಒಪ್ಪಂದಗಳ ಬಗ್ಗೆ ಸಮಾಲೋಚನೆ ನಡೆಸಿ, ಸಹಿ ಮಾಡಲಿದ್ದಾರೆ. ಸ್ವಿಡನ್‌‌ ಪ್ರಧಾನಿ ಸ್ಟೀಫನ್‌‌ ಲೋಫ್‌ವೆನ್‌ ಅವರೊಂದಿಗೆ ಮಾತುಕತೆ ನಡೆಸಲಿರುವ ಪ್ರಧಾನಿ ಮೋದಿ, ಸ್ವಿಡನ್‌‌ ರಾಜರನ್ನೂ ಭೇಟಿ ಮಾಡಲಾಗಿದ್ದಾರೆ.

ಸ್ವಿಡನ್‌ ನಂತರ ಮೂರು ದಿನಗಳ ಪ್ರವಾಸಕ್ಕಾಗಿ ಇಂಗ್ಲೆಂಡ್‌ಗೆ ಪ್ರಧಾನಿ ಮೋದಿ ತೆರಳಲಿದ್ದಾರೆ. ಅಲ್ಲಿ ಕಾಮನ್‌ವೆಲ್ತ್‌‌ ಸರ್ಕಾರಗಳ ಮುಖ್ಯಸ್ಥರ ಸಭೆಯಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ.CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು