• A
  • A
  • A
ಶ್ರೀಲಂಕಾ ಸರಣಿಯಿಂದ ಇಲ್ಲಿಯವರೆಗೆ... ಹಾರ್ದಿಕ್‌ ಪಾಂಡ್ಯ ಬ್ಯಾಟಿಂಗ್‌‌ನಲ್ಲಿ ಸತತ ವೈಫಲ್ಯ

ಪೋರ್ಟ್ ಎಲಿಜಬೆತ್: ಟೀಂ ಇಂಡಿಯಾದ ಎಲ್ಲ ಬ್ಯಾಟ್ಸ್‌‌ಮನ್‌‌ಗಳು ರನ್‌ ಗಳಿಸಲು ಪರದಾಡುವಾಗ ತಾವೊಬ್ಬರೇ ಹೋರಾಡಿ ಬ್ಯಾಟಿಂಗ್ ಮಾಡುವ ಹಾರ್ದಿಕ್ ಪಾಂಡ್ಯ ಬಗ್ಗೆ ಇದುವರೆಗೆ ಎಲ್ಲರಿಗೂ ಮೆಚ್ಚುಗೆಯಿತ್ತು. ಆದರೆ ಅದನ್ನು ಅವರು ಈಗ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.


ಹೌದು.. ಟೀಂ ಇಂಡಿಯಾ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕಳೆದ ಕೆಲ ಪಂದ್ಯಗಳಿಂದ ಸಂಪೂರ್ಣವಾಗಿ ಮಂಕಾಗಿದ್ದು, ರನ್‌ ಗಳಿಸಲು ಹರಸಾಹಸ ಪಡುತ್ತಿದ್ದಾರೆ.


ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ನಂತರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಪ್ರಥಮ ಇನ್ನಿಂಗ್ಸ್‌ನಲ್ಲಿ 93 ರನ್ ಗಳಿಸಿರುವ ಪಾಂಡ್ಯ ಬಳಿಕ ನಡೆದ ಎಲ್ಲ ಪಂದ್ಯಗಳಲ್ಲೂ ಸಾಲು ಸಾಲು ವೈಫಲ್ಯ ಅನುಭವಿಸಿದ್ದಾರೆ. ಕಳೆದ ಕೆಲ ಇನ್ನಿಂಗ್ಸ್‌ಗಳಲ್ಲಿ ಪಾಂಡ್ಯ 10, 8, 10, 4, 93, 1, 15, 6, 0, 4, 3*, 14, 9, 0ರನ್‌‌ ಗಳಿಸಿದ್ದಾರೆ.

ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಇನ್ನಿಂಗ್ಸ್‌‌ ನಂತರದ ಪಂದ್ಯಗಳಲ್ಲಿ ಪಾಂಡ್ಯ ಒಟ್ಟು ಗಳಿಸಿರುವ ಮೊತ್ತ ಬರಿ 53 ರನ್ಸ್. ಇನ್ನೊಂದೆಡೆ ಕೆಳ ಕ್ರಮಾಂಕದಲ್ಲಿ ಭುವನೇಶ್ವರ್ ಕುಮಾರ್ ಚೆನ್ನಾಗಿ ಬ್ಯಾಟಿಂಗ್ ಮಾಡಿರುವುದು ತಂಡದಲ್ಲಿ ಪಾಂಡ್ಯ ಸ್ಥಾನವನ್ನು ಪ್ರಶ್ನಿಸುವಂತಾಗಿದೆ.

ಆದರೆ ಇದರ ಮಧ್ಯೆ ಕೆಲವೊಂದು ಪಂದ್ಯಗಳಲ್ಲಿ ವಿಕೆಟ್‌‌ ಪಡೆದು ಹಾರ್ದಿಕ್‌‌‌ ಪಾಂಡ್ಯ ಮಿಂಚಿದ್ದು, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು