• A
  • A
  • A
ಸರ್ವರಿಗೂ ಸೂರು ಪರಿಕಲ್ಪನೆ... ಮನೆ ನಿರ್ಮಾಣಗಳ ಪ್ರಗತಿ ವರದಿಯಲ್ಲಿದೆ ಅಸಲಿ ಚಿತ್ರಣ!

ಬೆಂಗಳೂರು: ಸರ್ವರಿಗೂ ಸೂರು ಎಂಬ ಪರಿಕಲ್ಪನೆಯಲ್ಲಿ ವಿವಿಧ ವಸತಿ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ.‌ ಆದರೆ, ಈ ವಸತಿ ಯೋಜನೆಗಳಡಿ ನಗರದಲ್ಲಿ ನಿರ್ಮಿಸುತ್ತಿರುವ ಮನೆಗಳ ಪ್ರಗತಿ ಕಾರ್ಯ ಮಾತ್ರ ನೀರಸವಾಗಿದೆ.


ಸರ್ಕಾರ‌ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರವಲ್ಲ, ನಗರ ಪ್ರದೇಶಗಳಲ್ಲೂ ಜನರಿಗೆ ಕೈಗೆಟಕುವ ದರದಲ್ಲಿ ವಸತಿ ಕಲ್ಪಿಸುವ ಯೋಜನೆಗಳನ್ನು ರೂಪಿಸಿದೆ. ಡಾ.ಬಿ.ಆರ್.ಅಂಬೇಡ್ಕರ್, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಗರದಲ್ಲಿ ಮನೆಗಳ ನಿರ್ಮಾಣ ಕಾರ್ಯವನ್ನು ಮಾಡುತ್ತಿದೆ. ಆದರೆ, ಯೋಜನೆ ಜಾರಿಯಲ್ಲಿ ಮಾತ್ರ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ‌ನಗರಗಳಲ್ಲಿ ಮನೆಗಳ‌ ನಿರ್ಮಾಣ ಪ್ರಗತಿಯನ್ನು ನೋಡಿದರೆ, ವಾಸ್ತವತೆ ಚಿತ್ರಣ ಸಿಗುತ್ತದೆ.
ನಗರಗಳಲ್ಲಿ ಮನೆ ನಿರ್ಮಾಣ ಪ್ರಗತಿ ಅಷ್ಟಕಷ್ಟೆ:


ವಿವಿಧ ಯೋಜನೆಗಳಡಿ ನಗರದಲ್ಲಿ ಕಟ್ಟಲಾಗುವ‌ ಮನೆಗಳ ಕಾರ್ಯ‌ಪ್ರಗತಿ ನಿರಾಶಾದಾಯಕವಾಗಿದೆ. ಏಪ್ರಿಲ್ 2018ರಿಂದ ಡಿಸೆಂಬರ್ ವರೆಗೆ ಮನೆಗಳ ನಿರ್ಮಾಣದ ಪ್ರಗತಿ ವರದಿ ಇದಕ್ಕೆ ಸಾಕ್ಷಿಯಾಗಿದೆ.

2018-19ರಲ್ಲಿ ನಗರದಲ್ಲಿ ಮನೆಗಳ ನಿರ್ಮಾಣದ ವಾರ್ಷಿಕ ಗುರಿ ಸುಮಾರು 82 ಸಾವಿರ ಇತ್ತು. ಆದರೆ ಡಿಸೆಂಬರ್ ವರೆಗೆ ಕೇವಲ15,248 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಅಂದರೆ ಶೇ.18.60ರಷ್ಟು ಮಾತ್ರ ಮನೆ ನಿರ್ಮಾಣ ಪೂರ್ಣಗೊಂಡಿದೆ.

ಸುಮಾರು 66,752 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕಾಗಿದೆ. ಇದು ನಗರ ಪ್ರದೇಶಗಳಲ್ಲಿ ವಿವಿಧ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಮನೆ ನಿರ್ಮಾಣದ ಅಸಲಿ ಚಿತ್ರಣವಾಗಿದೆ.

ಕೊನೆಯ ಸ್ಥಾನ ಬೆಂಗಳೂರಿಗೆ:
30 ಜಿಲ್ಲೆಗಳಲ್ಲಿನ ನಗರ ಪ್ರದೇಶಗಳಲ್ಲಿ ಮನೆ ನಿರ್ಮಾಣ ಪ್ರಗತಿಯಲ್ಲಿ ಬೆಂಗಳೂರು ಕಟ್ಟ ಕಡೆಯ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ವಾರ್ಷಿಕ 23,045 ಮನೆ ನಿರ್ಮಿಸುವ ಗುರಿ ಹೊಂದಲಾಗಿತ್ತು. ಆದರೆ ಡಿಸೆಂಬರ್​​​ವರೆಗೆ ಕೇವಲ 457 ಮನೆಗಳ ನಿರ್ಮಾಣವನ್ನು ಪೂರ್ಣಗೊಳಿಸಲಾಗಿದೆ. ಅಂದರೆ ಕೇವಲ ಶೇ.1.68 ಮನೆಗಳು ಮಾತ್ರ ಪೂರ್ಣಗೊಂಡಿವೆ.

ಇನ್ನು ಹಾಸನದಲ್ಲಿ 1,564 ವಾರ್ಷಿಕ ಗುರಿಯ ಪೈಕಿ ಕೇವಲ 164 ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. ಇತ್ತ ಧಾರವಾಡದಲ್ಲಿ 1,454 ವಾರ್ಷಿಕ ಗುರಿಯಲ್ಲಿ ಕೇವಲ153 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಚಿಕ್ಕಮಗಳೂರಲ್ಲಿ 908 ವಾರ್ಷಿಕ ಮನೆ ನಿರ್ಮಾಣದ ಗುರಿ ಹೊಂದಿದ್ದು, ಇದರಲ್ಲಿ ಕೇವಲ 99 ಮನೆಗಳ ನಿರ್ಮಾಣ ಪೂರ್ಣಗೊಳಿಸಲಾಗಿದೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು