• A
  • A
  • A
ಸಂವಾದಕ್ಕೆ ಬಾರದ ರೈತರು... ಆಗಮಿಸಿದ್ದ ಏಕೈಕ ರೈತನ ಸಮಸ್ಯೆ ಆಲಿಸಿದ ಸಚಿವರ ಟೀಂ

ಚಿತ್ರದುರ್ಗ: ಬರ ಅಧ್ಯಯನದ ಚರ್ಚೆ ಬಳಿಕ ಸಚಿವ ಸಂಪುಟ ಉಪಸಮಿತಿಯ ಬರ ಪರಿಶೀಲನಾ ತಂಡದ ಜೊತೆಗಿನ ಸಂವಾದ ಸಭೆಗೆ ಓರ್ವ ರೈತನನ್ನು ಹೊರತುಪಡಿಸಿ ಯಾರೂ ಬಂದಿರಲಿಲ್ಲ. ಆದ್ದರಿಂದ ಒಬ್ಬನೇ ಒಬ್ಬ ರೈತನ ಜೊತೆ ಸಂವಾದ ನಡೆಯಿತು.


ರಾತ್ರಿ ವೇಳೆ ಸಚಿವ ಸಂಪುಟ ಸಮಿತಿಯ ಬರ ಪರಿಶೀಲನೆ ತಂಡವು ಜಿ.ಪಂ ಸಭಾಗಂಣದಲ್ಲಿ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಹಾಜರಿದ್ದ ಓರ್ವ ರೈತನಿಂದ ಕೃಷಿಗೆ ಸಂಬಂಧಿಸಿದ ಕೆಲ ಸಮಸ್ಯೆಗಳನ್ನು ಸಮಿತಿ ಆಲಿಸಿತು. ಸಂವಾದ ರಾತ್ರಿ ಇದ್ದ ಹಿನ್ನೆಲೆಯಲ್ಲಿ ಓರ್ವ ರೈತನನ್ನು ಹೊರತುಪಡಿಸಿ ಯಾವ ರೈತರು ಬಂದಿರಲಿಲ್ಲ. ಹಾಗಾಗಿ ಸಂವಾದಕ್ಕೆ ಆಗಮಿಸಿದ್ದ ತಿಮ್ಮಯ್ಯ ಎಂಬ ರೈತನೊಂದಿಗೆ ಸಮಿತಿ ಸಂವಾದ ನಡೆಸಿ ಸಮಸ್ಯೆ ಆಲಿಸಿತು.
ಭದ್ರಾ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ ಒಣಗುತ್ತಿರುವ ತೆಂಗು, ಅಡಿಕೆ ಬೆಳೆಗಾರರ ಸಂಕಷ್ಟ ಬಗೆಹರಿಸುವಂತೆ ರೈತ ತಿಮ್ಮಯ್ಯ ಬರ ಸಮಿತಿಗೆ ಒತ್ತಾಯಿಸಿದರು. ಸಂವಾದದಲ್ಲಿ ಸಣ್ಣ ಕೈಗಾರಿಕಾ ಸಚಿವ ಶ್ರೀನಿವಾಸ್, ಸಾರಿಗೆ ಸಚಿವ ತಮ್ಮಣ್ಣ, ಕಾರ್ಮಿಕ ಸಚಿವ ವೆಂಕಟರಮಣಪ್ಪ ಭಾಗಿಯಾಗಿದ್ದು, ರೈತರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.

ಈ ಸಭೆಯಲ್ಲಿ ಸಚಿವರು ಕುಡಿಯುವ ನೀರು, ಮೇವು, ಗೋಶಾಲೆಗಳ ಬಗ್ಗೆ ಚರ್ಚಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇನ್ನು ಕೊರೆಸಿರುವ ಒಟ್ಟು ಬೋರ್ ವೆಲ್​​ಗಳ ಬಗ್ಗೆ ಮಾಹಿತಿ ಪಡೆಯಲು ಮುಂದಾದಾಗ ಮಾಹಿತಿ ನೀಡಲು ಪರದಾಡಿದ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡು ಮಾಹಿತಿಯನ್ನು ಸಿಇಓ ರವೀಂದ್ರ ಅವರಿಗೆ ಸಲ್ಲುವಂತೆ ಸೂಚಿಸಿದರು. ಮಳೆ ಪ್ರಮಾಣ, ಬೆಳೆ, ಕುಡಿಯುವ ನೀರು, ಮೇವು, ಗೋಶಾಲೆ ತೆರೆಯುವುದರ ಬಗ್ಗೆ ಸಭೆಯಲ್ಲಿ ಹೆಚ್ಚು ಚರ್ಚಿಸಲಾಯಿತು.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು