• A
  • A
  • A
ಎಲ್‌ಪಿಜಿ ಸಿಲಿಂಡರ್‌ ಬೆಲೆ ₹ 2 ಏರಿಕೆ: ಸಾಮಾನ್ಯರ ಜೇಬಿಗೆ ಕತ್ತರಿ

ನವದೆಹಲಿ: ಎಲ್‌ಪಿಜಿ ಡೀಲರ್‌ಗಳಿಗೆ ನೀಡುವ ಕಮಿಷನ್‌ ಮೊತ್ತವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದ್ದು, ಅದರ ಹೊರೆಯನ್ನು ಅನುಭೋಗಿಗಳ ಮೇಲೆ ಹಾಕಲಾದ ಪರಿಣಾಮ ಎಲ್‌ಪಿಜಿ ಅಡುಗೆ ಅನಿಲದ ಸಿಲಿಂಡರ್‌ ದರ ₹ 2 ಏರಿಕೆಯಾಗಿದೆ.

ಸಂಗ್ರಹ ಚಿತ್ರ


ನವದೆಹಲಿಯಲ್ಲಿ 14.2 ಕೆ.ಜಿ. ಸಬ್ಸಿಡಿ ಸಿಲಿಂಡರ್‌ ದರ ಈಗ ₹ 505.34ರಿಂದ ₹ 507.42ಕ್ಕೆ ಏರಿಕೆಯಾಗಿದೆ. ಕೇಂದ್ರ ಇಂಧನ ಸಚಿವಾಲಯದ ಆದೇಶದನ್ವಯ ಏರಿಕೆ ಜಾರಿಗೆ ಬಂದಿದೆ ಎಂಬುದು ತಿಳಿದುಬಂದಿದೆ.


2017ರ ಸೆಪ್ಟೆಂಬರ್‌ನಲ್ಲಿ 14.2 ಕೆ.ಜಿ ಮತ್ತು 5 ಕೆ.ಜಿ ಸಿಲಿಂಡರ್‌ಗಳಿಗೆ ಸ್ಥಳೀಯ ಎಲ್‌ಪಿಜಿ ವಿತರಕರಿಗೆ ಕ್ರಮವಾಗಿ ₹ 48.89 ಮತ್ತು ₹ 24.20 ಕಮಿಷನ್‌ ನಿಗದಿ ಪಡಿಸಲಾಗಿತ್ತು. ಈಗ ಮತ್ತೆ ₹ 2 ಏರಿಕೆ ಮಾಡಲಾಗಿದೆ. ಈ ತಿಂಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ಆಗುತ್ತಿರುವ ಎರಡನೇ ಹೆಚ್ಚಳ ಇದಾಗಿದೆ.

ತೆರಿಗೆ ಹೊಂದಾಣಿಕೆ ಕಾರಣಕ್ಕೆ ನ.1ರಂದು ಸಿಲಿಂಡರ್‌ ಮೂಲ ಬೆಲೆಯಲ್ಲಿ ಅಂದರೆ ಸಿಲಿಂಡರ್‌ವೊಂದಕ್ಕೆ ₹ 2.94 ಹೆಚ್ಚಳ ಮಾಡಲಾಗಿತ್ತು. ಜಿಎಸ್‌ಟಿ ಪದ್ಧತಿ ಜಾರಿಗೆ ಬಂದ ಬಳಿಕ ಜೂನ್‌ನಿಂದ ಪ್ರತಿ ತಿಂಗಳೂ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ಏರಿಕೆಯಾಗಿದೆ. ಇಲ್ಲಿಯವರೆಗೂ ಸಿಲಿಂಡರ್​ ದರದಲ್ಲಿ ಒಟ್ಟು ಬೆಲೆ ₹ 16.21 ಏರಿಕೆಯಾಗಿದೆ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು