• A
  • A
  • A
ಎಗ್‌ ಬಿರ್ಯಾನಿ

ಮನೆಗೆ ಇದ್ದಕ್ಕಿದ್ದಂತೆ ಯಾರಾದರೂ ಗೆಸ್ಟ್‌‌ ಬಂದಾಗ ಏನಾದರೂ ಸ್ಪೆಷಲ್ ಅಡುಗೆ ತಯಾರಿಸಲೇಬೇಕು. ಒಂದು ವೇಳೆ ಚಿಕನ್ ಬಿರ್ಯಾನಿ ಮಾಡಲು ಟೈಮ್ ಇಲ್ಲದಿದ್ದಲ್ಲಿ ಎಗ್ ಬಿರ್ಯಾನಿ ತಯಾರಿಸಿ ಸರ್ವ್ ಮಾಡಿ.

ಸಾಮಗ್ರಿಗಳು

ಬಾಸುಮತಿ ಅಕ್ಕಿ - 1.5 ಕಪ್‌‌
ಎಣ್ಣೆ - 3 tbsp.
ಶುಂಠಿ ಬೆಳ್ಳುಳ್ಳಿ ಪೇಸ್ಟ್‌‌ - 1.5 tsp.
ಕ್ಯಾಪ್ಸಿಕಮ್‌/ಆಲೂಗಡ್ಡೆ - 1
ಈರುಳ್ಳಿ - 1
ಹಸಿಮೆಣಸಿನ ಕಾಯಿ - 2
ಮೊಟ್ಟೆ - 5
ಟೊಮ್ಯಾಟೋ - 1
ಅರಿಶಿನ - 1/8 tsp.
ಅಚ್ಚ ಖಾರದ ಪುಡಿ - 1/2 tsp.
ಬಿರ್ಯಾನಿ ಮಸಾಲಾ - 1 tsp.
ಕೊತ್ತಂಬರಿ ಸೊಪ್ಪು - 1 ಕಟ್ಟು
ಪುದೀನಾ ಎಲೆ - ಒಂದು ಹಿಡಿ
ಮೊಸರು/ಯೋಗರ್ಟ್‌‌‌‌ - 3 tbsp.
ಮರಾಟಿ ಮೊಗ್ಗು - 1
ಬಿರ್ಯಾನಿ ಎಲೆ - 1
ಕಪ್ಪು ಜೀರ್ಗೆ - 1/2 tsp.
ಏಲಕ್ಕಿ - 4
ಚೆಕ್ಕೆ - 1 ಇಂಚು
ಲವಂಗ - 5
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಮೊದಲು ಮೊಟ್ಟೆ ಬೇಯಿಸಿಕೊಂಡು ತಣ್ಣಗಾದಾಗ ಸಿಪ್ಪೆ ಬಿಡಿಸಿ ಮೊಟ್ಟೆ ಸುತ್ತ ಫೋರ್ಕ್‌‌‌ನಲ್ಲಿ ಚುಚ್ಚಿ ಒಂದು ಪ್ಲೇಟ್‌‌‌ನಲ್ಲಿಡಿ.
ಅಕ್ಕಿಯನ್ನು ನೀರಿನಲ್ಲಿ ತೊಳೆದು 30 ನಿಮಿಷ ನೀರಿನಲ್ಲಿ ನೆನೆಸಿ.

ಪ್ಯಾನ್‌‌ನಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಂಡು ಕ್ಯಾಪ್ಸಿಕಮ್‌‌‌‌‌/ ಆಲೂಗಡ್ಡೆಯನ್ನು ಫ್ರೈ ಮಾಡಿ ಒಂದು ಪ್ಲೇಟ್‌‌ಗೆ ತೆಗೆದಿಡಿ.

ಅದೇ ಪ್ಯಾನ್‌ಗೆ ಚೆಕ್ಕೆ, ಲವಂಗ, ಜೀರ್ಗೆ, ಏಲಕ್ಕಿ , ಮರಾಟಿ ಮೊಗ್ಗು, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್‌‌ ಹಾಕಿ ಹಸಿ ವಾಸನೆ ಹೋಗುವರೆಗೂ ಫ್ರೈ ಮಾಡಿಕೊಳ್ಳಿ.

ನಂತರ ಟೊಮ್ಯಾಟೋ, ಪುದೀನಾ, ರೆಡ್‌ ಚಿಲ್ಲಿ ಪೌಡರ್‌‌‌, ಅರಿಶಿನ, ಉಪ್ಪು, ಯೋಗರ್ಟ್‌‌‌‌‌‌‌‌‌‌‌‌ ಹಾಕಿ 5 ನಿಮಿಷ ಕುಕ್ ಮಾಡಿ.

ಕಡೆಯಲ್ಲಿ ಬೇಯಿಸಿಕೊಂಡ ಮೊಟ್ಟೆ, ಬಿರ್ಯಾನಿ ಮಸಾಲ ಪೌಡರ್‌ ಹಾಕಿ 2 ನಿಮಿಷ ಫ್ರೈ ಮಾಡಿ ಅಕ್ಕಿ ಬೇಯಲು ಅಗತ್ಯವಿರುವಷ್ಟು ನೀರು ಹಾಕಿ ಕುದಿಯಲು ಬಿಡಿ.

ನೀರು ಕುದಿಯುವಾಗ ಅಕ್ಕಿ, ಕ್ಯಾಪ್ಸಿಕಮ್‌‌ ಹಾಕಿ, ತಳ ಹಿಡಿಯದಂತೆ ನಿಧಾನವಾಗಿ ತಿರುವಿ ಮುಚ್ಚಳ ಮುಚ್ಚಿ.

ಬಿಸಿ ಬಿಸಿ ಎಗ್ ಬಿರ್ಯಾನಿಯನ್ನು ರಾಯತದೊಂದಿಗೆ ಸರ್ವ್‌ ಮಾಡಿ.



CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು